ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಚಿನಾಹಳ್ಳಿ ತಾಲ್ಲೂಕಿಗೆ ಹೇಮೆ:102.60 ಕೋಟಿ ಅಂದಾಜು ವೆಚ್ಚದಲ್ಲಿ 26 ಕೆರೆಗೆ ನೀರು

ಚಿನಾಹಳ್ಳಿ ತಾಲ್ಲೂಕಿಗೆ ಹೇಮೆ:102.60 ಕೋಟಿ ಅಂದಾಜು ವೆಚ್ಚದಲ್ಲಿ 26 ಕೆರೆಗೆ ನೀರು --------------------------------------------- ಸಚಿವರಿಂದ ಬೋರನಕಣೆವೆಗೂ ನೀರು ಹರಿಸುವ ಭರವಸೆ ------------------------------------- ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕುಡಿಯುವ ನೀರು ಯೋಜನೆಗಾಗಿ ಕಾವೇರಿ ನೀರಾವರಿ ನಿಗಮದಿಂದ 102.60ಕೋಟಿ ವೆಚ್ಚದಲ್ಲಿ ಸಲ್ಲಿಸಲಾಗಿರುವ ಪ್ರಸ್ತಾವನೆಯನ್ನು ಸಕಾ೯ರ ಒಪ್ಪಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಯೋಜನೆ ಅನುಷ್ಠನಗೊಳಿಸುವ ಉದ್ದೇಶ ಸಕಾ೯ರದಲ್ಲಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಸೋಮವಾರ ವಿಧಾನಸಭೆಯಲ್ಲಿ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ತಲ್ಲೂಕಿನ ಕುಡಿಯುವ ನೀರಿವ ಸಮಸ್ಯೆ ಪ್ರಸ್ತಾವನೆಯಾಗಿದ್ದರ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ತಾವು ತಾಲ್ಲೂಕಿನ ಸಾಸಲು,ಪೆಮ್ಮಲದೇವರಹಳ್ಳಿ,ಶೆಟ್ಟಿಕೆರೆ ಮುಖಾಂತರ ಸಾಲು ಕೆರೆಗಳ ಮೂಲಕ ಬೋರನಕಣೆವೆ ಜಲಾಶಯಕ್ಕೆ ನೀರು ಹರಿಸುವ ಯೋಜನೆ ಬಗ್ಗೆ ಪ್ರಶ್ನಿಸಿದಕ್ಕೆ ಜಲ ಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿಯವರು ನೀಡಿದ ಉತ್ತರ ಒಟ್ಟಾರೆ ತೃಪ್ತಿದಾಯಕವಾಗಿದೆ ಎಂದರು. ನೀರಿನ ಅಲಭ್ಯತೆ ಹಾಗೂ ಕೆಲವೊಂದು ತಾಂತ್ರಿಕ ಕಾರಣದಿಂದ ಉದ್ದೇಶಿತ ಯೋಜನೆಯಲ್ಲಿ ಬೋರನಕಣಿವೆ ಕೈ ಬಿಡಲಾಗಿದ್ದು ಇದನ್ನು ಹೊರತುಪಡಿಸಿದರೆ ತಾಲ್ಲೂಕಿ...

ಹುಳಿಯಾರಿನಲ್ಲಿ ಅದ್ದೂರಿ ಹನುಮಜಯಂತಿ

(ಹುಳಿಯಾರು ಶಂಕರಪುರದಲ್ಲಿ ಹನುಮಜಯಂತಿ ಅಂಗವಾಗಿ ನಡೆದ ರಾಮ ಭಜನೆಯ ಒಂದು ನೋಟ.) (ಹುಳಿಯಾರಿನಲ್ಲಿ ಹನುಮಜಯಂತಿ ಅಂಗವಾಗಿ ಏರ್ಪಡಿಸಿದ್ದ ಶ್ರೀಸ್ವಾಮಿಯವರ ಉತ್ಸವದಲ್ಲಿ ಪಾಲ್ಗೊಂಡ ಶಿವಮೊಗ್ಗ ಜಿಲ್ಲೆ ಹೆಗ್ಗೋಡಿನ ರಾಜ್ಯ ಪ್ರಶಸ್ತಿ ವಿಜೇತ ಮಹಿಳಾ ಡೊಳ್ಳು ಕುಣಿತ ತಂಡ ನೋಡುಗರನ್ನು ಆಕಷಿ೯ಸಿತ್ತು.) (ಹುಳಿಯಾರಿನಲ್ಲಿ ಹನುಮಜಯಂತಿ ಅಂಗವಾಗಿ ಸೋಮವಾರ ರಾತ್ರಿ ನಡೆದ ಶ್ರೀಸ್ವಾಮಿಯವರ ವಿಜೃಂಭಣೆಯಿಂದ ನಡೆದ ರಾಜಬೀದಿ ಉತ್ಸವ ಮಾಡಲಾಯಿತು. ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಟಿ.ಆರ್.ಶ್ರೀನಿವಾಸ ಶ್ರೇಷ್ಠಿ, ಅಧ್ಯಕ್ಷ ಎಸ್ಆರ್ಎಸ್ ದಯಾನಂದ್, ಆರ್.ಮಂಜುನಾಥ್, ಎಚ್.ವಿ.ಧನಂಜಯಮೂತಿ೯, ಟಿ.ಆರ್.ರಂಗನಾಥಶೆಟ್ಟಿ, ಕೆ.ಎಂ.ರಾಮಯ್ಯ, ಮೀಸೆ ರಂಗಪ್ಪ, ಎಂ.ಅಶೋಕ್ ಬಾಬು, ಎಚ್.ಎಸ್.ಪ್ರದೀಪ್, ಡಾಬಾ ಸುರೇಶ್ ಇನ್ನಿತರರಿದ್ದಾರೆ.) ಪಟ್ಟಣದ ವಿವಿಧ ದೇವಾಲಯಗಳಲ್ಲಿ ಇಂದು ಹನುಮ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಮಾರುತಿ ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ಆಂಜನೇಯಸ್ವಾಮಿ ಜೀಣೋ೯ದ್ಧಾರ ಸಮಿತಿಯಿಂದ ಹನುಮಂತ ದೇವರಿಗೆ ಅಭಿಷೇಕ, ರಾಮಚಂದ್ರ ಭಟ್ಟರ ನೇತೃತ್ವದಲ್ಲಿ ಪವಮಾನ ಹೋಮ, ಪೂ೯ಣಾ೯ಹುತಿ, ಮಹಾಮಂಗಳಾರತಿ ಮುಂತಾದ ಧಾಮಿ೯ಕ ಕಾರ್ಯಕ್ರಮ ನಡೆಸಿ ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.ನೂರಾರು ಭಕ್ತಾಧಿಗಳು ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಸ್ವಾಮಿಯವರ ದರ್ಶನ ಪಡೆದು ಧನ್ಯತೆ ಮೆರೆದರು....

ದಸೂಡಿಯಲ್ಲಿ ಸಡಗರ-ಸಂಭ್ರಮದ ಹನುಮಜಯಂತಿ

ಹುಳಿಯಾರು ಹೋಬಳಿ ದಸೂಡಿ ಗ್ರಾಮದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರ ಮತ್ತು ಸಂಭ್ರಮದಿಂದ ಹನುಮಜಯಂತಿ ಮತ್ತು ಶ್ರೀ ಸ್ವಾಮಿಯ ರಥೋತ್ಸವವನ್ನು ಭಾನುವಾರ ಆಚರಿಸಲಾಯಿತು. ಹನುಮಜಂತಿ ಅಂಗವಾಗಿ ಭಕ್ತಾಧಿಗಳ ಸೇವಾರ್ಥದಲ್ಲಿ ಶ್ರೀಸ್ವಾಮಿಯವರಿಗೆ ನೂರೊಂದೆಡೆ ಪೂಜೆ, ಅಭಿಷೇಕ, ಮಂಗಳಾರತಿ, ಲಲಿತ ಸಹಸ್ರನಾಮ ಪೂಜೆ, ಅಷ್ಟೋತ್ತರ, ಸುಮಂಗಲೆಯರಿಂದ ದೀಪಸ್ತಂಭ ಪೂಜೆ, ಕುಂಕುಮಾರ್ಚನೆ, ಸಹಸ್ರನಾಮ ಪೂಜೆ, ಷೋಡೋಪಚಾರ ಪೂಜೆ, ಮಹಾಮಂಗಳಾರತಿ, ಪಂಚಫಲಪ್ರಸಾದ ವಿನಿಯೋಗ, ಮಹಾಮಂಗಳಾರತಿ, ಅನ್ನ ಸಂತರ್ಪಣೆ, ಮುಂತಾದ ಧಾಮಿ೯ಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು. ಬೆಳಿಗ್ಗೆ 6.30 ರ ಬ್ರಾಹ್ಮಿ ಮುಹೂರ್ತದಲ್ಲಿ ಬೆಂಗಳೂರಿನ ದಾ.ಹನುಮಂತಯ್ಯ, ಎಚ್.ರಾಮಸ್ವಾಮಿ ಅವರ ಸೇವಾರ್ಥದಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ಸ್ವಾಮಿಯವರ ರಥೋತ್ಸವವು ವೈಭವದಿಂದ ಜರುಗಿತು. ದಸೂಡಿ ಮಾರುತಿ ಭಜನಾ ಮಂಡಳಿಯ ಭಜನೆ, ಬಲ್ಲಪ್ಪನಹಟ್ಟಿ ಹಾಗೂ ಎಳೆಗೊಲ್ಲರಹಟ್ಟಿ ಯಾದವರ ಕೋಲಾಟ ಉತ್ಸವಕ್ಕೆ ಮೆರಗು ತಂದಿತ್ತು. ದೇವಸ್ಥಾನ ಸಮಿತಿ ಕನ್ವೀನರ್ ಆರ್.ರಂಗಸ್ವಾಮಿ, ಗ್ರಾ.ಪಂ.ಅಧ್ಯಕ್ಷೆ ರೇಣುಕಮ್ಮ, ಸದಸ್ಯರುಗಳಾದ ರಮೇಶ್, ಮಮತ, ಪೂಜಾಕಾರ್ಯಕ್ರಮದ ಸೇವಾಕರ್ಥರುಗಳಾದ ಬೆಂಗಳೂರಿನ ಆರ್.ಶುಭಾರಾಣಿ, ಬಿ.ಆರ್.ಪ್ರಕಾಶ್, ದೊಡ್ಡೇರಿ ರತ್ಮಮ್ಮರಾಮಣ್ಣ ಸಿದ್ಧನಕಟ್ಟೆ ಲೇ.ಬೋರೇಗೌಡರ ಮಕ್ಕಳು ಹೊಯ್ಸಳಕಟ್ಟೆ ಶ್ರೀನಿವಾಸಶೆಟ್ಟರ, ದಸೂಡಿ ಪಾಂಡುರಂಗಯ್ಯ ಡಿ.ಎನ್.ಹನುಮಂತಯ್ಯ, ಡಿ.ಎಚ್.ಸಂಜ...

ಮೊಹರಂ ಹಬ್ಬ

ಹುಳಿಯಾರಿನಲ್ಲಿ ಮುಸ್ಲೀಂ ಬಾಂಧವರು ಮೊಹರಂ ಹಬ್ಬದ ಅಂಗವಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಪೀರ್ ದೇವರ ಧೂಪದ ಮೆರವಣಿಗೆಯನ್ನು ಸಡಗರದಿಂದ ಮಾಡಿದರು

ಜೆಡಿಯುಗೆ ಸೇರಿದ ಯಳನಡು ತಾಪಂ ಸದಸ್ಯ ವೈ.ಆರ್.ಮಲ್ಲಿಕಾಜು೯ನಯ್ಯ

ಜಿಪಂ ಚುನಾವಣೆ ಹಿನ್ನಲೆಯಲ್ಲಿ ಯಳನಾಡು ತಾಪಂ ಸದಸ್ಯರಾಗಿದ್ದ ವೈ.ಆರ್.ಮಲ್ಲಿಕಾಜು೯ನಯ್ಯ ಸಂಯುಕ್ತ ಜನತಾದಳಕ್ಕೆ ಸೇರ್ಪಡೆಗೊಂಡಿದಲ್ಲದೆ ಜೆಡಿಯು ಪಕ್ಷದಿಂದಲೆ ತಮ್ಮ ಪುತ್ರಿಯನ್ನು ಹುಳಿಯಾರು ಜಿಲ್ಲಾ ಪಂಚಾಯ್ತಿಗೆ ಅಧಿಕೃತ ಅಭ್ಯಥಿ೯ಯಾಗಿ ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ತಾಲೂಕು ಪಂಚಾಯ್ತಿ ಸದಸ್ಯರಾಗಿದ್ದ ಇವರು ಕಳೆದ ಸಂಸದರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಗೊಂಡು ಆ ಮೂಲಕ ಚಿನಾಹಳ್ಳಿ ತಾಲೂಕು ಪಂಚಾಯ್ತಿಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ತಾವು ಪಕ್ಷ ತೊರೆದಿದ್ದರ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನ ಜಯಚಂದ್ರ ಶಿರಾ ಕ್ಷೇತ್ರಕ್ಕೆ ಹೋದ ನಂತರ ಚಿ.ನಾ.ಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕರ್ಯಾರು ಇಲ್ಲದ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ಉತ್ತಮ ವ್ಯಕ್ತಿತ್ವಕ್ಕೆ ಮಾರುಹೋಗಿ ತಾವು ಜೆಡಿಎಸ್ ಸೇರ್ಪಡೆಗೊಂಡಿದ್ದೆ.ಆದರೆ ಶಾಸಕ ಸಿ.ಬಿ.ಸುರೇಶ್ ಬಾಬು ಹೆಚ್ಚಿನ ಕಾಲ ಬೆಂಗಳೂರಿನಲ್ಲಿಯೇ ಉಳಿಯುತ್ತ ಕ್ಷೇತ್ರದ ಕಾರ್ಯಕರ್ತರ ಬಗ್ಗೆ ನಿರಾಸಕ್ತಿ ಮನೋಭಾವ ತಾಳಿದ್ದ ಹಿನ್ನಲೆಯಲ್ಲಿ ಬೇಸತ್ತು ನೇರ ಮತ್ತು ನಿಷ್ಠೂರ ವಾದಿ ಎಂದು ತಿಳಿದಿದ್ದರೂ ಜೆಡಿಯುನ ಮಾಧುಸ್ವಾಮಿ ಅವರಿಂದ ಸಾರ್ವಜನಿಕ ಸೇವೆ ಸಲೀಸು ಎಂಬ ಕಾರಣಕ್ಕೆ ಅವರನ್ನು ಬೆಂಬಲಿಸಿ ಅವರ ಪಕ್ಷ ಸೇರುತ್ತಿರುವುದಾಗಿ ತಿಳಿಸಿದರು. ತಮ್ಮ ಮಗಳನ್ನು ಹುಳಿಯಾರು...

ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬ

ಹುಳಿಯಾರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದಿಂದ ರೋಗಿಗಳಿಗೆ ಹಣ್ಣು-ಬ್ರೆಡ್ ವಿತರಿಸಲಾಯಿತು. ಸೈಯದ್ ಜಲಾಲ್, ಮಂಜುಳಾ ಗವೀರಂಗಯ್ಯ, ಬಿ.ಬಿ.ಪಾತೀಮಾ, ಪ್ರಸನ್ನ, ಡಿಶ್ ಬಾಬು, ರಘುನಾಯಕ್, ಅಹಮದ್ ಖಾನ್, ಬಾಲರಾಜು, ರೇವಣ್ಣ, ಮತ್ತಿತರರು ಇದ್ದಾರೆ.

ಕಡೆಗೂ ಬಂತು ಕೊಬ್ಬರಿಗೆ ಬಂಪರ್ ಬೆಲೆ

(ಹುಳಿಯಾರು ಎಪಿಎಂಸಿಯಲ್ಲಿ ಕೊಬ್ಬರಿಗೆ ಬಂಪರ್ ಬೆಲೆ ಬಂದಿರುವ ಕಾರಣ ರೈತರು ಅತಿ ಉತ್ಸಾಹದಿಂದ ಕೊಬ್ಬರಿ ಮಾರಾಟದಲ್ಲಿ ತೊಡಗಿರುವುದು ) ಕಳೆದ ಹಲವಾರು ತಿಂಗಳಿನಿಂದ ನಾಲ್ಕು ನಾಲ್ಕುವರೆ ಸಾವಿರದ ಆಜುಬಾಜಿನಲ್ಲಿದ್ದ ಕೊಬ್ಬರಿ ಕಳೆದ ವಾರದಿಂದ ಏರಿಕೆ ಕಾಣುತ್ತಿದ್ದು ರೈತರು ಅಂತೂ ಇಂತೂ ಸ್ವಲ್ಪವಾದರೂ ಬೆಲೆ ಬಂತಲ್ಲ ಎಂದು ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ದಿನದಲ್ಲ್ದಿ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಅಲ್ಲದೆ, ಮುಂದಿನ ದೀಪಾವಳಿಗೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಬಹುದೆಂಬ ಮಾತು ಕೇಳಿಬರುತ್ತಿದೆ. ಇದುವರೆಗೂ ಕೊಬ್ಬರಿ ಬೆಲೆ ಏರಿಕೆ ಕಾಣದೆ 4 ಸಾವಿರದ ಆಸು ಪಾಸಿನಲ್ಲಿಯೇ ಗಿರಕಿ ಹೊಡೆಯುತ್ತಿದ್ದರೆ ತೆಂಗಿನ ಕಾಯಿಯನ್ನಂತೂ 4 ರು ಗೆ ಕೇಳುವವರು ಗತಿಯಿರಲಿಲ್ಲ. ಇದರಿಂದ ತೆಂಗು ಬೆಳಯುವ ಜಿಲ್ಲೆಗಳಾದ ತುಮಕೂರು, ಚಿತ್ರದುರ್ಗ, ಹಾಸನ, ದಾವಣಗೆರೆ, ಭದ್ರಾವತಿ, ಶಿವಮೊಗ್ಗ ರೈತರು ಕಂಗಾಲಾಗಿ ಹೋಗಿದ್ದರು. ಕೆಲ ದಿನಗಳಿಂದ 1 ಸಾವಿರ ಕಾಯಿಗೆ ಇದ್ದ 4200 ರು. ಈಗ 6 ರಿಂದ 7 ಸಾವಿರ ರು.ಗಳಾಗಿದೆ.ವಾಡಿಕೆಯಂತೆ ಏಣಿಕೆ ಲೆಖ್ಖದಲ್ಲಿ ಸಾವಿರ ಕಾಯಿಗಿಷ್ಟು ಬೆಲೆ ಎಂಬ ಬದಲಿಗೆ ಯಾವುದೆ ಗಾತ್ರದ ಕಾಯಿಯಿರಲಿ ಎಲ್ಲವನ್ನು ಕ್ವಿಂಟಾಲ್ ಲೆಖ್ಖದಲ್ಲಿ ಕೊಳ್ಳುವ ಹೊಸ ಪರಿಪಾಟ ಶುರುವಾಗಿದ್ದು ರೈತರಿಗೆ ಕಾಯಿ ಮಾರುವುದೆ ಲಾಭದಾಯಕ ಎನ್ನುವಂತಾಗಿದೆ. ಕೊಬ್ಬರಿಗಿಂತ ಕಾಯಿಗೆ ಬೆಲೆ ಬರಲು ಶುರುವಾದ್ದರಿಂದ ರೈತರು ಕೊಬ್ಬರಿ ಆಸೆ ಕೈ ಬಿಟ್ಟು ಕಾಯಿಯನ್ನೇ ...