ಹುಳಿಯಾರು ಹೋಬಳಿ ದಸೂಡಿ ಗ್ರಾಮದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರ ಮತ್ತು ಸಂಭ್ರಮದಿಂದ ಹನುಮಜಯಂತಿ ಮತ್ತು ಶ್ರೀ ಸ್ವಾಮಿಯ ರಥೋತ್ಸವವನ್ನು ಭಾನುವಾರ ಆಚರಿಸಲಾಯಿತು.
ಹನುಮಜಂತಿ ಅಂಗವಾಗಿ ಭಕ್ತಾಧಿಗಳ ಸೇವಾರ್ಥದಲ್ಲಿ ಶ್ರೀಸ್ವಾಮಿಯವರಿಗೆ ನೂರೊಂದೆಡೆ ಪೂಜೆ, ಅಭಿಷೇಕ, ಮಂಗಳಾರತಿ, ಲಲಿತ ಸಹಸ್ರನಾಮ ಪೂಜೆ, ಅಷ್ಟೋತ್ತರ, ಸುಮಂಗಲೆಯರಿಂದ ದೀಪಸ್ತಂಭ ಪೂಜೆ, ಕುಂಕುಮಾರ್ಚನೆ, ಸಹಸ್ರನಾಮ ಪೂಜೆ, ಷೋಡೋಪಚಾರ ಪೂಜೆ, ಮಹಾಮಂಗಳಾರತಿ, ಪಂಚಫಲಪ್ರಸಾದ ವಿನಿಯೋಗ, ಮಹಾಮಂಗಳಾರತಿ, ಅನ್ನ ಸಂತರ್ಪಣೆ, ಮುಂತಾದ ಧಾಮಿ೯ಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು.
ಬೆಳಿಗ್ಗೆ 6.30 ರ ಬ್ರಾಹ್ಮಿ ಮುಹೂರ್ತದಲ್ಲಿ ಬೆಂಗಳೂರಿನ ದಾ.ಹನುಮಂತಯ್ಯ, ಎಚ್.ರಾಮಸ್ವಾಮಿ ಅವರ ಸೇವಾರ್ಥದಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ಸ್ವಾಮಿಯವರ ರಥೋತ್ಸವವು ವೈಭವದಿಂದ ಜರುಗಿತು. ದಸೂಡಿ ಮಾರುತಿ ಭಜನಾ ಮಂಡಳಿಯ ಭಜನೆ, ಬಲ್ಲಪ್ಪನಹಟ್ಟಿ ಹಾಗೂ ಎಳೆಗೊಲ್ಲರಹಟ್ಟಿ ಯಾದವರ ಕೋಲಾಟ ಉತ್ಸವಕ್ಕೆ ಮೆರಗು ತಂದಿತ್ತು.
ದೇವಸ್ಥಾನ ಸಮಿತಿ ಕನ್ವೀನರ್ ಆರ್.ರಂಗಸ್ವಾಮಿ, ಗ್ರಾ.ಪಂ.ಅಧ್ಯಕ್ಷೆ ರೇಣುಕಮ್ಮ, ಸದಸ್ಯರುಗಳಾದ ರಮೇಶ್, ಮಮತ, ಪೂಜಾಕಾರ್ಯಕ್ರಮದ ಸೇವಾಕರ್ಥರುಗಳಾದ ಬೆಂಗಳೂರಿನ ಆರ್.ಶುಭಾರಾಣಿ, ಬಿ.ಆರ್.ಪ್ರಕಾಶ್, ದೊಡ್ಡೇರಿ ರತ್ಮಮ್ಮರಾಮಣ್ಣ ಸಿದ್ಧನಕಟ್ಟೆ ಲೇ.ಬೋರೇಗೌಡರ ಮಕ್ಕಳು ಹೊಯ್ಸಳಕಟ್ಟೆ ಶ್ರೀನಿವಾಸಶೆಟ್ಟರ, ದಸೂಡಿ ಪಾಂಡುರಂಗಯ್ಯ ಡಿ.ಎನ್.ಹನುಮಂತಯ್ಯ, ಡಿ.ಎಚ್.ಸಂಜೀವಯ್ಯ, ಡಿ.ಎಚ್.ಕೃಷ್ಣಯ್ಯ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ