( ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿಯಲ್ಲಿ ಹಾಲು ಶೇಖರಣಾ ಉಪಕೇಂದ್ರವನ್ನು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ಉದ್ಘಾಟಿಸಿದರು. ಡಾ.ಸುಬ್ರಾಯಭಟ್, ಎ.ಪಿ.ಯರಗುಂಟಪ್ಪ, ಬುದ್ದಿಪ್ರಸಾದ್, ಉಷಾ ಕೃಷ್ಣಮೂರ್ತಿ ಇದ್ದಾರೆ.)
ಗುಜರಾತಿನಲ್ಲಿ ರೈತರು ದುಪ್ಪಟ್ಟು ಹಣ ಕೊಡುತ್ತೇನೆಂದರೂ ಸಹಕಾರ ಸಂಘ ಬಿಟ್ಟು ಸ್ಥಳಿಯವಾಗಿ ಹಾಲು ಮಾರುವುದಿಲ್ಲ. ಇದರಿಂದ ರೈತರೈತರಲ್ಲಿಯೇ ಛಲ ಹುಟ್ಟಿ ಪ್ರತಿಯೊಬ್ಬರೂ ಹಸು ಕಟ್ಟುತ್ತಿದ್ದಾರೆ. ಜೊತೆಗೆ ದೇಶದಲ್ಲಿಯೇ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ ಎಂದು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ತಿಳಿಸಿದರು.
ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿಯಲ್ಲಿ ಗೂಬೇಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಹಾಲು ಶೇಖರಣಾ ಉಪಕೇಂದ್ರದ ಪ್ರಾರಂಭೋತ್ಸವವನ್ನು ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘಕ್ಕೆ ಮಾತ್ರವೇ ಹಾಲು ಹಾಕುವುದರಿಂದ ಅದರಿಂದ ದೊರೆಯುವ ಅನೇಕ ಸೌಲಭ್ಯಗಳನ್ನು ಪಡೆದು ರೈತ ಆರ್ಥಿಕವಾಗಿ ಉನ್ನತಿಯಾಗಬಹುದು. ಹಾಗಾಗಿ ಖಾಸಗಿ ಕೇಂದ್ರ ಹಾಗೂ ಸ್ಥಳಿಯವಾಗಿ ಹಾಲು ಮಾರದೆ ನೇರವಾಗಿ ಹಾಲು ಒಕ್ಕೂಟಕ್ಕೆ ಹಾಲು ಹಾಕುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ತುಮಕೂರು ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸುಬ್ರಾಯಭಟ್ ಅವರು ಮಾತನಾಡಿ ರೈತರು ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚು ಒತ್ತು ನೀಡಬೇಕು. ಇದರಿಂದ ಒಕ್ಕೂಟವೂ ಲಭದಾಕವಾಗಿರುತ್ತದೆ ಹಾಗೂ ರೈತರೂ ಒಳ್ಳೆಯ ಬೆಲೆ ಪಡೆಯಬಹುದು. ಹಾಗಾಗಿ ದನದ ಕೊಟ್ಟಿಗೆ ಸ್ವಚ್ಚತೆ, ಹಸು ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದರು.
ಚಿ.ನಾ.ಹಳ್ಳಿ ತಾಲೂಕು ವಿಸ್ತರಣಾಧಿಕಾರಿ ಎ.ಪಿ.ಯರಗುಂಟಪ್ಪ ಅವರು ಮಾತನಾಡಿ ಖಾಸಗಿ ಕೇಂದ್ರಗಳಿಗೆ ಹಾಲು ಹಾಕುವುದರಿಂದ ಅದರ ಮಾಲೀಕನೊಬ್ಬನಿಗೆ ಲಾಭ ಬರುತ್ತದೆ. ಆದರೆ ಹಾಲು ಒಕ್ಕೂಟದ ಮಾಲೀಕ ಪ್ರತಿಯೊಬ್ಬ ಷೇರುದಾರನಾಗಿದ್ದು ಬಂದ ಲಭದಲ್ಲಿ ಬೋನಸ್ ಹಾಗೂ ಷೇರು ಡಿವಿಡೆಂಟ್ ಮೂಲಕ ನೇರವಾಗಿ ರೈತನಿಗೆ ಬರುತ್ತದೆ ಎಂದು ತಿಳಿಸಿದರು.
ಗೂಬೇಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಷಾ ಕೃಷ್ಣಮೂರ್ತಿ, ಬುದ್ದಿಪ್ರಸಾದ್ ನಿವೃತ್ತ ಶಿಕ್ಷಕರುಗಳಾದ ಎಚ್.ದೊಡ್ಡಯ್ಯ, ಜಗದೀಶ್, ಗ್ರಾ.ಪಂ.ಸದಸ್ಯ ಪ್ರಕಾಶ್, ನೀಲಪ್ಪ, ಎಂ. ಕೃಷ್ಣಮೂರ್ತಿ, ಮೋಹನ್ ಕುಮಾರ್, ರಘುನಂದನ್, ಟಿ.ಆರ್.ಮಲ್ಲೇಶಯ್ಯ, ಟಿ.ಕೆ.ರಮೇಶಯ್ಯ, ಅಂಗಡಿ ಶಂಕರಣ್ಣ, ಮಾಲತೇಶಣ್ಣ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ