
ಅಂದು ಮುಂಜಾನೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸ್ವಾಮಿಯವರಿಗೆ 6 ಗಂಟೆಗೆ ಅಭಿಷೇಕ, 8 ಗಂಟೆಗೆ ಪವಮಾನ ಹೋಮ, 11 ಗಂಟೆಗೆ ಪೂಣಾ೯ಹುತಿ, 11-30 ಕ್ಕೆ ಮಹಾಮಂಗಳಾರತಿ ಮುಂತಾದ ಧಾಮಿ೯ಕ ಕಾರ್ಯಕ್ರಮ ನಡೆಸಿ ಮಧ್ಯಾಹ್ನ 12 ಗಂಟೆಗೆ ಭಕ್ತಾಧಿಗಳಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಅದೇ ದಿನ ಸಂಜೆ 5 ಕ್ಕೆ ಶ್ರೀ ಸ್ವಾಮಿಯವರನ್ನು ಪುಷ್ಪಾಲಂಕಾರಗಳಿಂದ ಕೂಡಿದ ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ರಾಜ್ಯ ಪ್ರಶಸ್ತಿ ವಿಜೇತ ಬೆಳ್ತಂಗಡಿ ಕೀಲು ಕುದುರೆ, ಕರಗ, ಹಾಸ್ಯಗೊಂಬೆ, ಯಕ್ಷಗಾನ ಶೈಲಿಯ ದೊಡ್ಡಬೊಂಬೆಯಾಟ, ವಡೆರಹಳ್ಳಿ ಪಟಾಕಿ ಸೋಮಣ್ಣ ಅವರಿಂದ ಮದ್ದಿನ ಪ್ರದರ್ಶನ, ಹೆಗ್ಗೋಡು ಸಾಗರದ ರಾಜ್ಯ ಪ್ರಶಸ್ತಿ ವಿಜೇತ ಮಹಿಳಾ ಡೊಳ್ಳುಕುಣಿತ, ಮಣಿಕಿಕೆರೆಯ ನಾಸಿಕ್ ಡೋಲ್, ಸಿಂಗಾಪುರದ ಡೊಳ್ಳುಕುಣಿತ ಪ್ರದರ್ಶನಗಳೊಂದಿಗೆ ಅದ್ದೂರಿಯಾಗಿ ರಾಜಬೀದಿ ಉತ್ಸವ ನಡೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹನುಮಜಯಂತಿ ಅಂಗವಾಗಿ ಜರುಗುವ ಎಲ್ಲಾ ಧಾಮಿ೯ಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಯಾಗಲು ಸಹಕರಿಸುವಂತೆ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್ಆರ್ಎಸ್ ದಯಾನಂದ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ