
ಕಳೆದ ಬಾರಿ ಎಸ್ಸಿ ಮೀಸಲು ಕ್ಷೇತ್ರ ಹೊಯ್ಸಲಕಟ್ಟೆಯಿಂದ ಬಿಜೆಪಿ ಅಭ್ಯಥಿ೯ಯಾಗಿ ಇವರು ಗೆದ್ದಿದ್ದರು.ಸಧ್ಯ ಮೀಸಲಾತಿ ಬದಲಾವಣೆಯಾಗಿ ಹೊಯ್ಸಳಕಟ್ಟೆಗೆ ಬಿಸಿಎಂ ಎ ಮಹಿಳೆ ಬಂದಿದ್ದು ಪಕ್ಕದ ಕಂದಿಕೆರೆಗೆ ಎಸ್ಸಿ ಮೀಸಲಾತಿ ಬಂದಿರುವ ಕಾರಣ ಅಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯಥಿ೯ಯಾಗಿ ತಮ್ಮ ಅದೃಷ್ಠ ಪರೀಕ್ಷೆಗಿಳಿದಿದ್ದಾರೆ.
ಪಕ್ಷ ಸೇರ್ಪಡೆ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಈ ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಪ್ರತಿ ಕ್ಷೇತ್ರಕ್ಕೆ ಪ್ರತಿ ವರ್ಷ 1 ಕೋಟಿ ಅನುದಾನ ನೀಡುತ್ತಿದ್ದರು. ಆಗ ತಾವು ಹೊಯ್ಸಳಕಟ್ಟೆ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಸಮುದಾಯ ಭವನ ಹೀಗೆ ಅನೇಕ ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ. ಆದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಕ್ಷೇತ್ರಗಳಿಗೆ ಒಂದೇ ಒಂದು ರು. ಅನುಧಾನ ಬಿಡುಗಡೆ ಮಾಡದೆ ಜಿ.ಪಂ.ಸದಸ್ಯರು ಯವುದೇ ಅಭಿವೃದ್ಧಿ ಕೆಲಸ ಮಾಡಿಸಲಾಗದೆ ಕೈ ಕಟ್ಟಿ ಕೂರುವಂತಾಗಿತ್ತು ಎಂದ ಅವರು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಸ್ವಜನ ಪಕ್ಷಪಾತ ಎಸಗಿ ತಮ್ಮ ಕುಟುಂಬದವರಿಗೆ ಭೂ ಹಂಚಿಕೆ ಮಾಡಿದ್ದಾರೆ.ಹಿಂದುಳಿದವರಿಗೆ ಹಾಗೂ ಅಹಿಂದ ವರ್ಗದವರಿಗೆ ಅಲ್ಲಿ ಪ್ರಾಧಾನ್ಯತೆ ಇಲ್ಲದಾಗಿದೆ. ಬಿಜೆಪಿ ಪಕ್ಷದಿಂದ ಚುನಾವಣೆ ಎದುರಿಸಿದರೆ ಯಾರು ತಾನೆ ಮತ ನೀಡುವರು ಎಂದು ಪ್ರಶ್ನಿಸಿರುವ ಅವರು ಕಂದಿಕೆರೆ ಕ್ಷೇತ್ರದಿಂದ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ