ಜಿಪಂ ಚುನಾವಣೆ ಹಿನ್ನಲೆಯಲ್ಲಿ ಯಳನಾಡು ತಾಪಂ ಸದಸ್ಯರಾಗಿದ್ದ ವೈ.ಆರ್.ಮಲ್ಲಿಕಾಜು೯ನಯ್ಯ ಸಂಯುಕ್ತ ಜನತಾದಳಕ್ಕೆ ಸೇರ್ಪಡೆಗೊಂಡಿದಲ್ಲದೆ ಜೆಡಿಯು ಪಕ್ಷದಿಂದಲೆ ತಮ್ಮ ಪುತ್ರಿಯನ್ನು ಹುಳಿಯಾರು ಜಿಲ್ಲಾ ಪಂಚಾಯ್ತಿಗೆ ಅಧಿಕೃತ ಅಭ್ಯಥಿ೯ಯಾಗಿ ಕಣಕ್ಕಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ತಾಲೂಕು ಪಂಚಾಯ್ತಿ ಸದಸ್ಯರಾಗಿದ್ದ ಇವರು ಕಳೆದ ಸಂಸದರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಗೊಂಡು ಆ ಮೂಲಕ ಚಿನಾಹಳ್ಳಿ ತಾಲೂಕು ಪಂಚಾಯ್ತಿಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು.
ತಾವು ಪಕ್ಷ ತೊರೆದಿದ್ದರ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನ ಜಯಚಂದ್ರ ಶಿರಾ ಕ್ಷೇತ್ರಕ್ಕೆ ಹೋದ ನಂತರ ಚಿ.ನಾ.ಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕರ್ಯಾರು ಇಲ್ಲದ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ಉತ್ತಮ ವ್ಯಕ್ತಿತ್ವಕ್ಕೆ ಮಾರುಹೋಗಿ ತಾವು ಜೆಡಿಎಸ್ ಸೇರ್ಪಡೆಗೊಂಡಿದ್ದೆ.ಆದರೆ ಶಾಸಕ ಸಿ.ಬಿ.ಸುರೇಶ್ ಬಾಬು ಹೆಚ್ಚಿನ ಕಾಲ ಬೆಂಗಳೂರಿನಲ್ಲಿಯೇ ಉಳಿಯುತ್ತ ಕ್ಷೇತ್ರದ ಕಾರ್ಯಕರ್ತರ ಬಗ್ಗೆ ನಿರಾಸಕ್ತಿ ಮನೋಭಾವ ತಾಳಿದ್ದ ಹಿನ್ನಲೆಯಲ್ಲಿ ಬೇಸತ್ತು ನೇರ ಮತ್ತು ನಿಷ್ಠೂರ ವಾದಿ ಎಂದು ತಿಳಿದಿದ್ದರೂ ಜೆಡಿಯುನ ಮಾಧುಸ್ವಾಮಿ ಅವರಿಂದ ಸಾರ್ವಜನಿಕ ಸೇವೆ ಸಲೀಸು ಎಂಬ ಕಾರಣಕ್ಕೆ ಅವರನ್ನು ಬೆಂಬಲಿಸಿ ಅವರ ಪಕ್ಷ ಸೇರುತ್ತಿರುವುದಾಗಿ ತಿಳಿಸಿದರು.
ತಮ್ಮ ಮಗಳನ್ನು ಹುಳಿಯಾರು ಜಿಲ್ಲಾ ಪಂಚಾಯ್ತಿಗೆ ಅಧಿಕೃತ ಅಭ್ಯಥಿ೯ಯಾಗಿ ಕಣಕ್ಕಿಸುವ ಮುಖಾಂತರ ರಾಜಕೀಯಕ್ಕೆ ಪ್ರವೇಶ ಮಾಡಿಸುತ್ತಿದ್ದು ಆಕೆಯನ್ನು ಆರಿಸಿದಲ್ಲಿ ಹುಳಿಯಾರು ಪಟ್ಟಣದ ದಶಕಗಳ ಕಾಲದ ನೀರಿನ ಸಮಸ್ಯೆ ನೀಗಿಸಿ ಶುದ್ಧ ನೀರಿನ ಪೂರೈಕೆಗೆ ಮೊದಲ ಆಧ್ಯತೆ ನೀಡುವುದಾಗಿ ಹೇಳಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ