ಹುಳಿಯಾರಿನ ಆರ್ಯವೈಶ್ಯ ಮಂಡಲಿಯಿಂದ ಇಲ್ಲಿನ ಶ್ರೀ ವಾಸವಿ ಕಲ್ಯಾಣ ಮಂದಿರದಲ್ಲಿ ಡಿಸೆಂಬರ್ 15 ರ ಬುಧವಾರ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ 8-55 ರಿಂದ 10-47 ಕ್ಕೆ ಸಲ್ಲುವ ಶುಭ ಧನುಸ್ಸು ಲಗ್ನದಲ್ಲಿ ಪಾರ್ವತಿ ಮತ್ತು ಪರಮೇಶ್ವರರಿಗೆ ಕಲ್ಯಾಣೋತ್ಸವ ನಡೆಸಲಿದ್ದು ಇದರ ಅಂಗವಾಗಿ ನಾಂದಿ, ವರಪೂಜೆ, ನಿಶ್ಚಿತಾರ್ಥ, ಮೂಹೂರ್ತ ಮುಂತಾದ ವಿವಾಹ ಸಂಬಂಧ ಚಟುವಟಿಕೆಗಳು ಜರುಗಲಿದೆ. ಇದೇ ಸಂದರ್ಭದಲ್ಲಿ ಮದುವೆ ಆಗದಿದ್ದವರಿಗೆ ಕಂಕಣಧಾರಣೆಗೆ ಅವಕಾಶವಿದ್ದು 101 ರು. ಕೊಟ್ಟು ಹೆಸರು ನೊಂದಾಯಿಸಬಹುದಾಗಿದೆ.
ಅಲ್ಲದೆ, ಸಂಜೆ ಈಶ್ವರ ಮತ್ತು ಪಾರ್ವತಿಯರ ರಾಜ ಬೀದಿ ಉತ್ಸವ ನಡೆಸಿ ಡಿ.16 ರ ಗುರುವಾರ ಸಂಜೆ 4 ಕ್ಕೆ ತಿರುಮಲಾಪುರದ ಚಂದ್ರಮೌಳೇಶ್ವರ ದೇವಸ್ಥಾನದ ಬಳಿ ವಿಸರ್ಜನಾ ಕಾರ್ಯಕ್ರಮ ನಡೆಸಲಾಗುವುದು ಎಂದು ದೇವಸ್ಥಾನ ಸಮಿತಿ ಸಹ ಸಂಚಾಲಕ ಬಿ.ವಿ.ಶ್ರೀನಿವಾಸಮೂತಿ೯ ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ