(ಹುಳಿಯಾರು ಎಪಿಎಂಸಿಯಲ್ಲಿ ಕೊಬ್ಬರಿಗೆ ಬಂಪರ್ ಬೆಲೆ ಬಂದಿರುವ ಕಾರಣ ರೈತರು ಅತಿ ಉತ್ಸಾಹದಿಂದ ಕೊಬ್ಬರಿ ಮಾರಾಟದಲ್ಲಿ ತೊಡಗಿರುವುದು)
ಕಳೆದ ಹಲವಾರು ತಿಂಗಳಿನಿಂದ ನಾಲ್ಕು ನಾಲ್ಕುವರೆ ಸಾವಿರದ ಆಜುಬಾಜಿನಲ್ಲಿದ್ದ ಕೊಬ್ಬರಿ ಕಳೆದ ವಾರದಿಂದ ಏರಿಕೆ ಕಾಣುತ್ತಿದ್ದು ರೈತರು ಅಂತೂ ಇಂತೂ ಸ್ವಲ್ಪವಾದರೂ ಬೆಲೆ ಬಂತಲ್ಲ ಎಂದು ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ದಿನದಲ್ಲ್ದಿ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಅಲ್ಲದೆ, ಮುಂದಿನ ದೀಪಾವಳಿಗೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಬಹುದೆಂಬ ಮಾತು ಕೇಳಿಬರುತ್ತಿದೆ.
ಇದುವರೆಗೂ ಕೊಬ್ಬರಿ ಬೆಲೆ ಏರಿಕೆ ಕಾಣದೆ 4 ಸಾವಿರದ ಆಸು ಪಾಸಿನಲ್ಲಿಯೇ ಗಿರಕಿ ಹೊಡೆಯುತ್ತಿದ್ದರೆ ತೆಂಗಿನ ಕಾಯಿಯನ್ನಂತೂ 4 ರು ಗೆ ಕೇಳುವವರು ಗತಿಯಿರಲಿಲ್ಲ. ಇದರಿಂದ ತೆಂಗು ಬೆಳಯುವ ಜಿಲ್ಲೆಗಳಾದ ತುಮಕೂರು, ಚಿತ್ರದುರ್ಗ, ಹಾಸನ, ದಾವಣಗೆರೆ, ಭದ್ರಾವತಿ, ಶಿವಮೊಗ್ಗ ರೈತರು ಕಂಗಾಲಾಗಿ ಹೋಗಿದ್ದರು.
ಕೆಲ ದಿನಗಳಿಂದ 1 ಸಾವಿರ ಕಾಯಿಗೆ ಇದ್ದ 4200 ರು. ಈಗ 6 ರಿಂದ 7 ಸಾವಿರ ರು.ಗಳಾಗಿದೆ.ವಾಡಿಕೆಯಂತೆ ಏಣಿಕೆ ಲೆಖ್ಖದಲ್ಲಿ ಸಾವಿರ ಕಾಯಿಗಿಷ್ಟು ಬೆಲೆ ಎಂಬ ಬದಲಿಗೆ ಯಾವುದೆ ಗಾತ್ರದ ಕಾಯಿಯಿರಲಿ ಎಲ್ಲವನ್ನು ಕ್ವಿಂಟಾಲ್ ಲೆಖ್ಖದಲ್ಲಿ ಕೊಳ್ಳುವ ಹೊಸ ಪರಿಪಾಟ ಶುರುವಾಗಿದ್ದು ರೈತರಿಗೆ ಕಾಯಿ ಮಾರುವುದೆ ಲಾಭದಾಯಕ ಎನ್ನುವಂತಾಗಿದೆ. ಕೊಬ್ಬರಿಗಿಂತ ಕಾಯಿಗೆ ಬೆಲೆ ಬರಲು ಶುರುವಾದ್ದರಿಂದ ರೈತರು ಕೊಬ್ಬರಿ ಆಸೆ ಕೈ ಬಿಟ್ಟು ಕಾಯಿಯನ್ನೇ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಅಲ್ಲದೆ ಕಾಯಿ ಚೂರು 28 ರು.ಗಳನ್ನು ದಾಟಿ 45 ರು.ಗಳಿಗೆ ಬಂದು ನಿಂತಿದೆ.ಇಲ್ಲಿಯವರೆವಿಗೂ 4500 ರು. ಇದ್ದ ಕೊಬ್ಬರಿಗೆ ಬುಧವಾರದ ಅರಸೀಕೆರೆ ಮಾರುಕಟ್ಟೆಯಲ್ಲಿ 5300 ರು. ಬೆಲೆಕಂಡುಬಂದು ಅಂದಿನಿಂದ ಗಣನೀಯವಾಗಿ ಏರಿಕೆಯಾಗುತ್ತಲೆ ಇದೆ . ಕೆ.ಜಿ.ಗೆ ಕೇವಲ 23 ರು.ಗಳಿದ್ದ ಕೌಟಿಗೂ ಸಹ ಭಾರಿ ಡಿಮ್ಯಾಂಡ್ ಬಂದಿದ್ದು 30 ರು.ಗಳಾಗಿದೆ. . ಈಗ ಕೊಬ್ಬರಿಗಿರಲಿ ಕೌಟಿಗೂ ಸಹ ಬಂಪರ್ ಬೆಲೆ ಬಂದಿದ್ದು ರೈತರ ಮೊಗದಲ್ಲಿ ಸಂತಸದ ಚಿಲುಮೆ ಸೃಷ್ಠಿಸಿದೆ.
ಆಮದು ಇಲ್ಲ:ಮುಂಚೆ ನೆರೆ ದೇಶಗಳಾದ ಶ್ರೀಲಂಕ, ಮಲೇಶಿಯ ಮತ್ತಿತರ ಕಡೆಯಿಂದ ಆಮದು ಮಾಡಿಕೊಳ್ಳುತ್ತಿದ್ದನ್ನು ಈಗ ಅನೇಕ ಕಾರಣದಿಂದಾಗಿ ನಿಲ್ಲಿಸಲಾಗಿರುವುದೆ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನತ್ತಾರೆ ಹುಳಿಯಾರು ಮಾರುಕಟ್ಟೆಯ ಪ್ರಮುಖ ಕೊಬ್ಬರಿ ವರ್ತಕ ಚಿಕ್ಕಬಿದರೆಪ್ರದೀಪ್. ಅವರ ಪ್ರಕಾರ ದೇಶದ ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಅತಿವೃಷ್ಠಿಯಿಂದ ಇಳುವರಿ ಕಡಿಮೆಯಾಗಿದೆ. ಇದೇ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಅತಿಯಾದ ಚಳಿಯಿರುವ ಕಾರಣ ಭಾರಿ ಬೇಡಿಕೆ ಬರುತ್ತಿದೆ. ಪರಿಣಾಮ ರಾಜ್ಯದ ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಉತ್ತಮ ಬೆಲೆ ಸಿಗುತ್ತಿದೆ ಎನ್ನುತ್ತಾರೆ.
ಹುಳಿಯಾರು ಎಪಿಎಂಸಿ ನಿರ್ದೇಶಕ ಎಲ್.ಆರ್.ಬಾಲಾಜಿ ಅವರ ಪ್ರಕಾರ ತೆಂಗಿನ ಕಾಯಿ ಯತ್ತೇಚ್ಚವಾಗಿ ಬೇಕರಿ ತಿನಿಸು ಹಾಗೂ ಕಾಯಿ ಪೌಡರ್ ತಯಾರಿಕೆಗೆ ಹೋಗುತ್ತದೆ. ರಾಜ್ಯದಲ್ಲಿ ಕಾಯಿ ಎಣ್ಣೆ ಹಾಗೂ ಕಾಯಿ ಪೌಡರ್ ಕಾರ್ಖನೆಗಳು ಹೆಚ್ಚಾಗಿರುವ ಕಾರಣ ತೆಂಗಿನ ಕಾಯಿಗಿರಲಿ ಚೂರಿಗೂ ಸಹ ಬಂಪರ್ ಬೆಲೆ ಸಿಗುತ್ತಿದೆ. ಇದರಿಂದಾಗಿ ಈಗಾಗಲೇ ಹೊಸದುರ್ಗ, ಶಿರಾ, ಹಿರಿಯೂರು, ಹೊಳಲ್ಕೆರೆ ತಾಲೂಕುಗಳ ರೈತರು ಕೊಬ್ಬರಿ ಮಾಡದೆ ಕಾಯಿಯನ್ನೇ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಮುಂದಿನ ದೀಪಾವಳಿಗೆ ಕೊಬ್ಬರಿ ಅಭಾವ ಸೃಷ್ಠಿಯಾಗಿ ಬಂಗಾರದ ಬೆಲೆ ಬಂದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ