ಹುಳಿಯಾರು ಸಮೀಪದ ಚಿಕ್ಕಎಣ್ಣೇಗೆರೆ ಗ್ರಾಮದಲ್ಲಿ ಡಿಸೆಂಬರ್ 18 ರ ಶನಿವಾರ ಮತ್ತು 19 ರ ಭಾನುವಾರ ಶ್ರೀ ಆಂಜನೇಯಸ್ವಾಮಿಯವರ 5 ನೇ ವರ್ಷದ ಹನುಮಜಯಂತಿ ಮಹೋತ್ಸವವನ್ನು ಏರ್ಪಡಿಸಲಾಗಿದೆ.
ಡಿಸೆಂಬರ್ 18 ರ ಶನಿವಾರ ಸುಲೋಚನಮ್ಮ ಅವರ ಸೇವಾರ್ಥದಲ್ಲಿ ರಾತ್ರಿ 8 ಗಂಟೆಯಿಂದ ಕೊಲ್ಲಾಪುರದ ಶ್ರೀ ಕರಿಯಮ್ಮದೇವಿಯವರ ಆರತಿಭಾನ, ಶ್ರೀ ಆಂಜನೇಯಸ್ವಾಮಿಯವರ ಮತ್ತು ಕರಿಯಮ್ಮದೇವಿಯವರ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಡಿಸೆಂಬರ್ 19 ರ ಭಾನುವಾರ ಸಿ.ಎಸ್.ಶಂಕರಪ್ಪ, ಜೆ.ಸಿ.ಮಾಧುಸ್ವಾಮಿ ಅಭಿಮಾನಿ ಬಳಗ, ಹೂವಾಡಿ ಲಕ್ಷ್ಮಮ್ಮ, ಅನಸೂಯಮ್ಮ, ವರದಯ್ಯ ಅವರುಗಳ ಸೇವಾರ್ಥದಲ್ಲಿ ಬೆಳಗಿನ ಜಾವ 4 ರಿಂದ ಹೋಮ ಪೂಜೆ, ಮಹಾಮಂಗಳಾರತಿ, ಬೆಳಿಗ್ಗೆ 9 ಕ್ಕೆ ಶ್ರೀ ಸ್ವಾಮಿಯವರ ಹೂವಿನ ಮತ್ತು ಕುಂಕುಮ ಅಲಂಕಾರ ಬೆಳಿಗ್ಗೆ 10 ಕ್ಕೆ ಬಿಲ್ಲು ಗೂಡಸೇವೆ ಕಾರ್ಯಕ್ರಮಗಳು ನಡೆಯಲಿವೆ.
ಅದೇ ದಿನ ಬೆಳಿಗ್ಗೆ 11-30 ಕ್ಕೆ ಧಾಮಿ೯ಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಕುಪ್ಪೂರು-ತಮ್ಮಡಿಹಳ್ಳಿ ವಿರಕ್ತಮಠದ ಡಾ.ಆಭಿನವ ಮಲ್ಲಿಕಾಜು೯ನ ಮಹಾಸ್ವಾಮಿಗಳು ಉದ್ಘಾಟಿಸಲಿರುವ ಈ ಸಭೆಯ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಹಿಸುವರು. ಮಾಜಿ ಶಾಸಕರುಗಳಾದ ಕೆ.ಎಸ್.ಕಿರಣ್ ಕುಮಾರ್, ಜೆ.ಸಿ.ಮಾಧುಸ್ವಾಮಿ, ಜಿ.ಪಂ.ಮಾಜಿ ಅಧ್ಯಕ್ಷ ರಘುನಾಥ್, ಅವರು ಮುಖ್ಯ ಅತಿಥಿಗಳಾಗಿ ಆಗಮಹಿಸುವರು.
ತಾ.ಪಂ.ಮಾಜಿ ಅಧ್ಯಕ್ಷ ಶಿವಕುಮಾರ್, ಗ್ರಾ.ಪಂ.ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷ ದೊಡ್ಡಯ್ಯ, ಸದಸ್ಯರುಗಳಾದ ಮಲ್ಲಯ್ಯ, ಕರಿಯಪ್ಪ ಗಂಗಮ್ಮ ಪಿಡಿಓ ರಮೇಶ್ ಅತಿಥಿಗಳಾಗಿ ಭಾಗವಹಿಸಲಿದ್ದು ನಿವೃತ್ತ ಮುಖ್ಯೋಪಾಧ್ಯಾಯ ಲಿಂಗರಾಜ ಅರಸ್ ಅವರನ್ನು ಈ ಸಂದರ್ಭದಲ್ಲಿ ಹಳೆಯ ವಿದ್ಯಾಥಿ೯ಗಳು ಸನ್ಮಾನಿಸುವರು.
ಮಧ್ಯಾಹ್ನ 2 ಗಂಟೆಗೆ ಅನ್ನಸಂತರ್ಪಣೆ, ಸಂಜೆ 7 ಕ್ಕೆ ಶ್ರೀಸ್ವಾಮಿಯವರ ಮತ್ತು ಶ್ರೀ ದೇವಿಯವರ ಉತ್ಸವ, ರಾತ್ರಿ 10 ಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಸೇವಾರ್ಥದಲ್ಲಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹನುಮಜಯಂತಿ ಅಂಗವಾಗಿ ಜರುಗುವ ಎಲ್ಲಾ ಧಾಮಿ೯ಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಾಲ್ಗೊಂಡು ಯಶಸ್ವಿಯಾಗಲು ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ