ವರ್ಷದ ಕೊನೆ ತಿಂಗಳಲ್ಲಿ ಮುಂದಿನ ಹೊಸ ವರ್ಷದ ಕ್ಯಾಲೆಂಡರ್ ಮಾರಾಟದ ಭರಾಟೆ ಬಲು ಜೋರು.ಮುಂಚಿನ ದಿನಗಳಂತೆ ಕೇವಲ ದಿನಾಂಕಗಳಿಗೆ ಒತ್ತು ನೀಡದೆ ಕೆಲವೊಂದು ವಿಶೇಷಗಳ ಸಂಪೂರ್ಣ ಮಾಹಿತಿ ನೀಡುವುದು ಇತ್ತೀಚಿನ ಬೆಳವಣಿಗೆ. ಕೆಲವು ಕ್ಯಾಲೆಂಡರ್ ಗಳಲ್ಲಿ ತಿಂಗಳ ಭವಿಷ್ಯ, ಧಾರ್ಮಿಕ ಆಚರಣೆಗಳ ಮಾಹಿತಿ ಬಗ್ಗೆ ಮಹತ್ವ ನೀಡಿದರೆ ಇನ್ನು ಕೆಲವದರಲ್ಲಿ ನಕ್ಷತ್ರ, ವಾರ ತಿಥಿ, ಮಳೆ ಮುಂತಾದ ವಿಶೇಷ ವಿಷಯಗಳಿಗೆ ಒತ್ತು ನೀಡಲಾಗುತ್ತದೆ. ಬಹುತೇಕ ಕ್ಯಾಲೆಂಡರ್ ಗಳು ರೂಪದರ್ಶಿಗಳ ಹಾಗೂ ದೇವಾನುದೇವತೆಗಳ ಚಿತ್ರಗಳೊಂದಿಗೆ ವಿನ್ಯಾಸಗೊಂಡು ಉಚಿತವಾಗಿ ಹಂಚಲ್ಪಡುತ್ತದೆ. ಆದರೆ ಈ ಎಲ್ಲಾ ಕ್ಯಾಲೆಂಡರುಗಳಲ್ಲಿಯೂ ತಾರೀಖು ಮಾತ್ರ ಇಂಗ್ಲೀಷ್ ಅಂಕಿಗಳಲ್ಲಿ ಮುದ್ರಿಸಲ್ಪಟ್ಟಿರುವುದು ಗಮನಿಸಬೇಕಾದ ಅಂಶ.
ಆದರೆ ಹುಳಿಯಾರಿನ ನಿವೃತ್ತ ಉಪನ್ಯಾಸಕರೂ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತ.ಶಿ.ಬಸವಮೂರತಿ೯ ಅವರು ಇಂಗ್ಲೀಷ್ ಅಂಕೆ ಬಳಕೆ ಮಾಡದೆ ಸಂಪೂರ್ಣ ಕನ್ನಡಮಯ ಕ್ಯಾಲೆಂಡರ್ ಹೊರತಂದಿರುವುದಲ್ಲದೆ ಸಂಪೂರ್ಣವಾಗಿ ಸಾಹಿತ್ಯ ಲೋಕದ ಸ್ಪರ್ಶ ನೀಡಿದ್ದಾರೆ. ಸ್ಪಧಾ೯ತ್ಮಕ ಪರೀಕ್ಷೆಗೆ ನೆರವಾಗುವ ಗೈಡಾಗಿ ಮಾರ್ಪಡಿಸಿದ್ದಾರೆ. ಇಂದಿನ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ. ಕವಿ ಪರಂಪರೆ ಪರಿಚಯಿಸುವ ಕಿರು ಪ್ರಯತ್ನ ಮಾಡಿದ್ದಾರೆ. ಇದರೊಂದಿಗೆ ವಾರ, ತಿಥಿ, ಯೋಗ, ಕರಣ, ನಕ್ಷತ್ರ, ಸಕಾ೯ರಿ ರಜಾ ದಿನಗಳು, ಹಬ್ಬ ಹರಿದಿನಗಳು ಮೊದಲಾದ ಮಾಹಿತಿಯೂ ಇದೆ.
'ಕನ್ನಡ' ಎಂಬ ಹೆಸರಿನ ತಾಲೂಕು ಯಾವ ರಾಜ್ಯದಲ್ಲಿದೆ ಎಂಬುದರಿಂದ ಹಿಡಿದು ಕನ್ನಡದ ಮೊಟ್ಟ ಮೊದಲ ಸಾಮ್ರಾಜ್ಯ ಸ್ಥಾಪಕನ್ಯಾರು, ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈಯವರು ಎಷ್ಟು ಭಾಷೆ ಕಲಿತಿದ್ದರು ,ಕಿಟ್ಟೆಲ್ ನಿಘಂಟಿನಲ್ಲಿ ನಿರುವ ಗಾದೆಗಳು, ಕೈಯಿಂದ ಸಂಬಳ ಕೊಟ್ಟು ಪ್ರಥಮ ಕನ್ನಡ ಶಾಲೆಯನ್ನಾರಂಭಿಸಿದ್ದು ಯಾರು, ಏಲ್ಲಿ ಎಂಬ ಮಾಹಿತಿಯಿಂದ ಮೊದಲ್ಗೊಂಡು ಅನೇಕ ತಿಳಿಯಬೇಕಾದ ಮಾಹಿತಿಗಳಿವೆ.
ರಾಷ್ಟ್ರ ಕವಿಗಳು, ಜ್ಞಾನಪೀಠ ಪುರಸ್ಕೃತರು, ಕನಾ೯ಟಕ ರತ್ನಕ್ಕೆ ಭಾಜನರಾದವರು, ನೃಪತುಂಗ, ನಾಡೋಜ, ಪಂಪ ಪ್ರಶಸ್ತಿ ಪಡೆದವರು, ಕನಾ೯ಟಕ ಏಕೀಕರಣದ ನೇತಾರರು, ಕವಿಗಳ ಕಾವ್ಯನಾಮ ಹಾಗೂ ಅಂಕಿತನಾಮ, ಕನ್ನಡ ಸಂಬಂಧಿಸಿದ ಕೆಲ ಘಟನಾವಳಿಗಳು, ಡಿ.ಎಸ್.ಕಕರ್ಿ, ಕುವೆಂಪು, ಕವಿರಾಜಮಾರ್ಗ, ಪಂಪ ಹೀಗೆ ಅನೇಕ ಕವಿವರ್ಯರ ಕಾವ್ಯದಿಂದ ಆಯ್ದ ಕನ್ನಡಪರ ಘೋಷ ವಾಕ್ಯಗಳು, ಬಸವಣ್ಣ, ಜೇಡರ ದಾಸಿಮಯ್ಯ, ಅಕ್ಕಮಹಾದೇವಿ, ಅಲ್ಲಮಪ್ರಭು ಮುಂತಾದವರ ವಚನಗಳು ಹೀಗೆ ಅಪರೂಪದ ವಿಷಯಗಳನ್ನು ಹೆಕ್ಕಿ ತೆಗೆದು ದಿನದಶಿ೯ಕೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ.
ಪುಟ ಪುಟವೂ ಸಂಗ್ರಹಯೋಗ್ಯವಾಗಿರುವ ಈ ದಿನದಶಿ೯ಕೆ ಪ್ರತಿಯೊಬ್ಬ ಕನ್ನಡಿಗನ ಮನೆ ಗೋಡೆ ಅಲಂಕರಿಸುವುದು ಅಗತ್ಯ. ಈ ಅಪರೂಪದ ಕ್ಯಾಲೆಂಡರಿಗಾಗಿ ತ.ಶಿ.ಬಸವಮೂತಿ೯, ನಿವೃತ್ತ ಉಪನ್ಯಾಸಕರು, ಕೆಇಬಿ ಮುಂಭಾಗ, ಹುಳಿಯಾರು. ತುಮಕೂರು ಜಿಲ್ಲೆ ದೂರವಾಣಿ ಸಂಖ್ಯೆ 08133-256570 ಕೂಡಲೇ ಸಂಪಕಿ೯ಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ