(ಹುಳಿಯಾರು ಹೋಬಳಿ ಡಿಂಕನಹಳ್ಳಿಯಲ್ಲಿ ಸಮೃದ್ಧ ಸಾವಯವ ಕೃಷಿ ಪರಿವಾರದ ತರಬೇತಿ ಶಿಬಿರದಲ್ಲಿ ಶಿವಾನಂದ ಕಳವೆ, ಡಾ.ಕೃಷ್ಣರಾಜ ಅರಸ್, ಕೆ.ರಂಗಯ್ಯ, ಎಸ್.ಎಚ್.ಚಂದ್ರಶೇಖರಯ್ಯ ಇದ್ದಾರೆ.)
ಕೃಷಿಯಲ್ಲಿ ವೈವಿದ್ಯತೆ ಉಳಿಸಿಕೊಂಡರೆ ಮುಂದಿನ ದಿನಗಳಲ್ಲಿ ಹಳ್ಳಿಗಳು, ಕೃಷಿ ತಾಕುಗಳು ಮಾರಾಟವಾಗುವುದು ತಪ್ಪುತ್ತದೆ. ನೆಲ ಜಲ ಸಂರಕ್ಷಣೆಯಲ್ಲಿ ನಮ್ಮ ಹಿರಿಯರ ಪಾರಂಪಾರಿಕ ಜ್ಞಾನವನ್ನು, ಅನುಭವವನ್ನು ಅನುಕರಿಸಿದಲ್ಲಿ ಮುಂದೆ ಅದು ದಾರಿ ದೀಪವಾಗಲಿದೆ ಎಂದು ಅಡಿಕೆ ಪತ್ರಿಕೆ ಸಂಪಾದಕ ಶಿವಾನಂದ ಕಳವೆ ಅವರು ಹೇಳಿದರು
ಹುಳಿಯಾರು ಹೋಬಳಿ ಡಿಂಕನಹಳ್ಳಿಯ ಶಿಕ್ಷಕ ಎಂ.ರಾಜಣ್ಣ ಅವರ ತೋಟದಲ್ಲಿ ಸಾವಯವ ಕೃಷಿ ಮಿಷನ್, ಕೃಷಿ ಇಲಾಖೆ ಹಾಗೂ ಸಮೃದ್ಧ ಸಾವಯವ ಕೃಷಿ ಪರಿವಾರದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಮೂಡಿಗೆರೆ ಡಾ.ಕೃಷ್ಣರಾಜ ಅರಸ್ ಪಶು ಸಂಗೋಪನೆ ಮತ್ತು ಆಥಿ೯ಕತೆ ಕುರಿತು ಮಾತನಾಡಿ ಗೋವಿನ ಗಂಜಲ, ಸಗಣೆ, ಮಜ್ಜಿಗೆ, ಮೊಸರು ಮುಂತಾದವುಗಳ ಬಗ್ಗೆ ಪ್ರಸ್ತಾಪಿಸಿ ಗೋವು ನಮ್ಮ ಸಂಸ್ಕೃತಿಯ ಭಾಗವಾಗಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ರೈತರಿಗೆ ತಿಳಿಹೇಳಿದರು.
ಕೃಷಿ ಅಧಿಕಾರಿ ಕೆ.ರಂಗಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಪರಿವಾರದ ಅಧ್ಯಕ್ಷರಾದ ಎಸ್.ಎಚ್.ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಮಕೃಷ್ಣಪ್ಪ, ಅಣೆಕಟ್ಟೆ ರಘುರಾಂ, ಅರುಣ್ ಕುಮಾರ್, ಓಂಕಾರಮೂತಿ೯, ಚನ್ನಬಸಪ್ಪ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ