( ವೈಕುಂಠ ಏಕಾದಶಿ ಅಂಗವಾಗಿ ಹುಳಿಯಾರಿನ ಶ್ರೀ ಬನಶಂಕರಿ ಅಮ್ಮನವರಿಗೆ ಅರ್ಚಕ ಶ್ರೀಧರ್ ವೈಕುಂಠ ನಾರಾಯಣನ ಅಲಂಕಾರ ಮಾಡಿರುವುದು.)
ಪಟ್ಟಣದ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನ, ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ಶ್ರೀ ಕಾಳಮ್ಮ ಹಾಗೂ ಶ್ರೀ ಬನಶಂಕರಿ ದೇವಸ್ಥಾನಗಳಲ್ಲಿ ಸುಪ್ರಭಾತ ಸೇವೆಯೊಂದಿಗೆ ಮುಂಜಾನೆಯಿಂದಲೆ ಧಾಮಿ೯ಕ ಕೈಂಕರ್ಯಗಳು ಆರಂಭಗೊಂಡವು.
ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಎಂಎಸ್ಆರ್ ನಟರಾಜ್ ಅವರ ಸೇವಾರ್ಥದಲ್ಲಿ ಅರ್ಚಕರುಗಳಾದ ರಾಮಚಂದ್ರಭಟ್ಟ ಹಾಗೂ ನಾಗರಾಜಗುಪ್ತ ಮಾರ್ಗದರ್ಶನದಲ್ಲಿ ಉತ್ಸವಮೂತಿ೯ಯ ಪ್ರಾಕಾರೋತ್ಸವ,ವಾಸವಿಗೆ ಅಷ್ಟಾವದಾನ ಸೇವೆ,ವೈಕುಂಠ ದ್ವಾರ ಪೂಜೆ, ಮಹಾಮಂಗಳಾರತಿ, ಮುಂತಾದ ಧಾಮಿ೯ಕ ಕೈಂಕರ್ಯಗಳನ್ನು ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.ಶ್ರೀ ಕೋದಂಡರಾಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತಲ್ಲದೆ ಗುಹಾ ಪ್ರವೇಶ ದಾರಿ ಮೂಲಕ ಭಕ್ತರ ದರ್ಶನ ವ್ಯವಸ್ಥೆ ಮಾಡಿದಿದುದು ಭಕ್ತರಿಗೆ ವಿಶೇಷ ಅನುಭವ ತಂದುಕೊಟ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.
ಇತಿಹಾಸ ಪ್ರಸಿದ್ಧ ಶ್ರೀ ಅನಂತಶಯನ ರಂಗನಾಥ ಸ್ವಾಮಿ ಗುಡಿಯಲ್ಲಿ ಮುಂಜಾನೆ ಶ್ರೀ ಸ್ವಾಮಿಗೆ ಅರ್ಚಕ ಗುಂಡಪ್ಪ ಅವರ ನೇತೃತ್ವದಲ್ಲಿ ಶ್ರೀಸ್ವಾಮಿಯವರಿಗೆ ಎಣ್ಣೇ ಮಜ್ಜನ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ನಡೆಯಿತು.ಸಂಜೆ ಬಸ್ಸ್ ಸ್ಟಾಂಡ್ ಹೋಟೆಲ್ ಗೋಪಾಲ್ ಅವರ ನೇತೃತ್ವದಲ್ಲಿ ವಿವಿಧ ಭಜನಾ ಮಂಡಳಿ ಹಾಗೂ ಅಯ್ಯಪ್ಪ ಭಕ್ತರಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಯಿತು.
ದೇವಾಂಗ ಸಮುದಾಯದ ಕುಲ ದೇವತೆ ಶ್ರೀ ಬನಶಂಕರಮ್ಮ ದೇವಾಲಯದಲ್ಲಿ ಅರ್ಚಕ ಶ್ರೀಧರ್ ಅವರ ನೇತೃತ್ವದಲ್ಲಿ ದೇವಾಂಗ ಮಂಡಳಿಯಿಂದ ಶ್ರೀ ಅಮ್ಮನವರಿಗೆ ವೆಂಕಟೇಶ್ವರನ ಅಲಂಕಾರ ಮಾಡಿ ಭಕ್ತಾಧಿಗಳಿಗೆ ದರ್ಶನ ಭಾಗ್ಯ ಕಲ್ಪಿಸಿದುದು ವಿಶೇಷವಾಗಿತ್ತು.
ಶ್ರೀ ಕಾಳಿಕಾಂಭ ದೇವಾಲಯದಲ್ಲಿ ಶ್ರೀಅಮ್ಮನವರಿಗೆ ಮಾಡಿದ್ದ ಅನಂತಶಯನ ರಂಗನಾಥಸ್ವಾಮಿ ಅಲಂಕಾರ ಮಾಡಿ ಭಕ್ತರ ಮನ ಸೂರೆಗೊಂಡಿತ್ತು.
ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎನ್ನುವ ಪ್ರತೀತಿ ಇರುವ ಹಿನ್ನೆಲೆಯಲ್ಲಿ ವೈಕುಂಠ ದ್ವಾರದ ಮೂಲಕ ಪ್ರವೇಶ ಮಾಡಿ ಶ್ರೀ ಸ್ವಾಮಿಯವರ ದರ್ಶನ ಪಡೆದರೆ ಪುಣ್ಯ ಲಭಿಸುವುದು ಎನ್ನುವ ನಂಬಿಕೆ ಇರುವ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವಾಲಯಕ್ಕೆ ತೆರಳಿ ದರ್ಶನ ಪಡೆದು ಪುನೀತರಾದರು.
(ಹುಳಿಯಾರಿನ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಗುಹಾ ಪ್ರವೇಶ ದಾರಿ ಮೂಲಕ ಭಕ್ತರು ಶ್ರೀ ಸ್ವಾಮಿಯವರ ದರ್ಶನ ಮಾಡುತ್ತಿರುವುದು.)
ವೈಕುಂಠ ಏಕಾದಶಿ ಅಂಗವಾಗಿ ಹುಳಿಯಾರಿನ ವಿವಿಧ ದೇವಾಲಯಗಳಲ್ಲಿ ಮುಖ್ಯ ದೇವರುಗಳಿಗೆ ಮಾಡಲಾಗಿದ್ದ ಶ್ರೀಮನ್ನಾರಯಣನ ಹಲವು ರೂಪಗಳ ಅಲಂಕಾರ ಭಕ್ತಾಧಿಗಳ ಮನಸೂರೆಗೊಂಡಿತು.ಎಲ್ಲಾ ದೇವಾಲಯಗಳಿಗೆ ತೆರಳಿ ಶ್ರೀ ಸ್ವಾಮಿಯ ದಶ೯ನ ಪಡೆದ ಭಕ್ತಾಧಿಗಳು ಭಕ್ತಿ ಭಾವದಲ್ಲಿ ಮಿಂದು ಪುನೀತರಾದರು.
ಪಟ್ಟಣದ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನ, ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ಶ್ರೀ ಕಾಳಮ್ಮ ಹಾಗೂ ಶ್ರೀ ಬನಶಂಕರಿ ದೇವಸ್ಥಾನಗಳಲ್ಲಿ ಸುಪ್ರಭಾತ ಸೇವೆಯೊಂದಿಗೆ ಮುಂಜಾನೆಯಿಂದಲೆ ಧಾಮಿ೯ಕ ಕೈಂಕರ್ಯಗಳು ಆರಂಭಗೊಂಡವು.
ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಎಂಎಸ್ಆರ್ ನಟರಾಜ್ ಅವರ ಸೇವಾರ್ಥದಲ್ಲಿ ಅರ್ಚಕರುಗಳಾದ ರಾಮಚಂದ್ರಭಟ್ಟ ಹಾಗೂ ನಾಗರಾಜಗುಪ್ತ ಮಾರ್ಗದರ್ಶನದಲ್ಲಿ ಉತ್ಸವಮೂತಿ೯ಯ ಪ್ರಾಕಾರೋತ್ಸವ,ವಾಸವಿಗೆ ಅಷ್ಟಾವದಾನ ಸೇವೆ,ವೈಕುಂಠ ದ್ವಾರ ಪೂಜೆ, ಮಹಾಮಂಗಳಾರತಿ, ಮುಂತಾದ ಧಾಮಿ೯ಕ ಕೈಂಕರ್ಯಗಳನ್ನು ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.ಶ್ರೀ ಕೋದಂಡರಾಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತಲ್ಲದೆ ಗುಹಾ ಪ್ರವೇಶ ದಾರಿ ಮೂಲಕ ಭಕ್ತರ ದರ್ಶನ ವ್ಯವಸ್ಥೆ ಮಾಡಿದಿದುದು ಭಕ್ತರಿಗೆ ವಿಶೇಷ ಅನುಭವ ತಂದುಕೊಟ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.
ಇತಿಹಾಸ ಪ್ರಸಿದ್ಧ ಶ್ರೀ ಅನಂತಶಯನ ರಂಗನಾಥ ಸ್ವಾಮಿ ಗುಡಿಯಲ್ಲಿ ಮುಂಜಾನೆ ಶ್ರೀ ಸ್ವಾಮಿಗೆ ಅರ್ಚಕ ಗುಂಡಪ್ಪ ಅವರ ನೇತೃತ್ವದಲ್ಲಿ ಶ್ರೀಸ್ವಾಮಿಯವರಿಗೆ ಎಣ್ಣೇ ಮಜ್ಜನ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ನಡೆಯಿತು.ಸಂಜೆ ಬಸ್ಸ್ ಸ್ಟಾಂಡ್ ಹೋಟೆಲ್ ಗೋಪಾಲ್ ಅವರ ನೇತೃತ್ವದಲ್ಲಿ ವಿವಿಧ ಭಜನಾ ಮಂಡಳಿ ಹಾಗೂ ಅಯ್ಯಪ್ಪ ಭಕ್ತರಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಯಿತು.
ದೇವಾಂಗ ಸಮುದಾಯದ ಕುಲ ದೇವತೆ ಶ್ರೀ ಬನಶಂಕರಮ್ಮ ದೇವಾಲಯದಲ್ಲಿ ಅರ್ಚಕ ಶ್ರೀಧರ್ ಅವರ ನೇತೃತ್ವದಲ್ಲಿ ದೇವಾಂಗ ಮಂಡಳಿಯಿಂದ ಶ್ರೀ ಅಮ್ಮನವರಿಗೆ ವೆಂಕಟೇಶ್ವರನ ಅಲಂಕಾರ ಮಾಡಿ ಭಕ್ತಾಧಿಗಳಿಗೆ ದರ್ಶನ ಭಾಗ್ಯ ಕಲ್ಪಿಸಿದುದು ವಿಶೇಷವಾಗಿತ್ತು.
ಶ್ರೀ ಕಾಳಿಕಾಂಭ ದೇವಾಲಯದಲ್ಲಿ ಶ್ರೀಅಮ್ಮನವರಿಗೆ ಮಾಡಿದ್ದ ಅನಂತಶಯನ ರಂಗನಾಥಸ್ವಾಮಿ ಅಲಂಕಾರ ಮಾಡಿ ಭಕ್ತರ ಮನ ಸೂರೆಗೊಂಡಿತ್ತು.
ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎನ್ನುವ ಪ್ರತೀತಿ ಇರುವ ಹಿನ್ನೆಲೆಯಲ್ಲಿ ವೈಕುಂಠ ದ್ವಾರದ ಮೂಲಕ ಪ್ರವೇಶ ಮಾಡಿ ಶ್ರೀ ಸ್ವಾಮಿಯವರ ದರ್ಶನ ಪಡೆದರೆ ಪುಣ್ಯ ಲಭಿಸುವುದು ಎನ್ನುವ ನಂಬಿಕೆ ಇರುವ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವಾಲಯಕ್ಕೆ ತೆರಳಿ ದರ್ಶನ ಪಡೆದು ಪುನೀತರಾದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ