ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಉಚಿತ ಯೋಗಾಸನ ಮತ್ತು ಪ್ರಾಣಾಯಾಮ ಶಿಬಿರ

ಕುಲ,ಮತ,ಲಿಂಗ,ಜಾತಿ ಭೇದವನ್ನು ಎಣಿಸದೆ ಸಾರ್ವತ್ರಿಕ ಸೋದರಭಾವದ ಉದ್ದೇಶ ಹೊಂದಿರುವ ಪಟ್ಟಣದ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯವರ ಆಶ್ರಯದಡಿ ಚಿ.ನಾ.ಹಳ್ಳಿ ಎಂ.ಪುಟ್ಟಮಾದಯ್ಯ ಅವರ ಮಾರ್ಗದರ್ಶನದಲ್ಲಿ ಇಂದಿನಿಂದ ಮಾ.30 ರವರೆಗೆ ಒಂದು ತಿಂಗಳ ಕಾಲ ಪ್ರತಿದಿನ ಪ್ರಾತ:ಕಾಲ 6ರಿಂದ 7 ರ 1 ಗಂಟೆ ಅವಧಿಯಲ್ಲಿ .ಉಚಿತ ಯೋಗಾಸನ ಮತ್ತು ಪ್ರಾಣಾಯಾಮ ಶಿಬಿರ ನಡೆಯಲಿದೆ. ಶಿಬಿರಕ್ಕೆ ಹಾಜರಾಗುವ ಶಿಬಿರಾರ್ಥಿಗಳು ಅಭ್ಯಾಸಕ್ಕೆ ಅನುಕೂಲವಾಗುವಂತೆ ಸಡಿಲವಾದ ಉಡುಪನ್ನು ಧರಿಸಿರಬೇಕು ಹಾಗೂ ರಗ್ಗು,ಜಮಖಾನ ತರಬೇಕು.13ವರ್ಷ ಮೇಲ್ಪಟ್ಟವರಿಗೆ ಮಾತ್ರ ಇಲ್ಲಿ ಅವಕಾಶ ವಿದ್ದು, ಆಸಕ್ತರು ಮಾಹಿತಿಗಾಗಿ ಗೋಪಾಲಕೃಷ್ಣ(7259299271),ಜಗದೀಶ್(9448556171),ಮಹೇಶಾಚಾರ್(9901315526) ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

ಪೋಟೊ ಕ್ಯಾಪ್ಷನ್

ಹುಳಿಯಾರು ಹೋಬಳಿಯ ಗುರುವಾಪುರದ ಸಾಕ್ಷರತಾ ಮಹಿಳಾ ಮಂಡಳಿ ಪ್ರೌಢಶಾಲೆಯ ವಾರ್ಷಿಕೊತ್ಸವದಲ್ಲಿ ರಾಷ್ಟ್ರೀಯ ಯುವಜನೋತ್ಸವದಲ್ಲಿ ರಾಜ್ಯ ತಂಡ ಪ್ರತಿನಿಧಿಸಿದ್ದ ಮಾತೃಭೂಮಿ ಯುವಕ ಸಂಘದವರನ್ನು ಸನ್ಮಾನಿಸಲಾಯಿತು.ತಾ.ಪಂ.ಸದಸ್ಯ ವಸಂತಯ್ಯ,ಜಿ.ಪಂ.ಸದಸ್ಯ ನಿಂಗಮ್ಮ ರಾಮಯ್ಯ,ರೈತಯುವ ಮೊರ್ಚಾದ ಅಧ್ಯಕ್ಷ. ಶ್ರೀನಿವಾಸ್ ಹಾಗೂ ಶಿಕ್ಷಕರಿದ್ದಾರೆ. ಹುಳಿಯಾರು ಸಮೀಪದ ಹಂದನಕೆರೆ ಗುರುಗಿರಿ ಸಿದ್ದೇಶ್ವರಸ್ವಾಮಿಯ ಬೆಟ್ಟದ ತಪ್ಪಲಿನಲ್ಲಿ ನಡೆದ ಮಹಾರುದ್ರಯಾಗಕ್ಕೆ ಮಾಜಿ.ಸಿ.ಎಂ.ಯಡೆಯೂರಪ್ಪ ಅವರನ್ನು ಮಾಜಿ.ಶಾಸಕ ಕಿರಣ್ ಕುಮಾರ್ ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಕರೆದ್ಯೊಯುತ್ತಿರುವುದು.

ಪೋಟೊ ಕ್ಯಾಪ್ಷನ್

ಹುಳಿಯಾರು ಹೋಬಳಿಯ ಗುರುವಾಪುರದ ಸಾಕ್ಷರತಾ ಮಹಿಳಾ ಮಂಡಳಿ ಪ್ರೌಢಶಾಲೆಯ ವಾರ್ಷಿಕೊತ್ಸವದಲ್ಲಿ ರಾಷ್ಟ್ರೀಯ ಯುವಜನೋತ್ಸವದಲ್ಲಿ ರಾಜ್ಯ ತಂಡ ಪ್ರತಿನಿಧಿಸಿದ್ದ ಮಾತೃಭೂಮಿ ಯುವಕ ಸಂಘದವರನ್ನು ಸನ್ಮಾನಿಸಲಾಯಿತು.ತಾ.ಪಂ.ಸದಸ್ಯ ವಸಂತಯ್ಯ,ಜಿ.ಪಂ.ಸದಸ್ಯ ನಿಂಗಮ್ಮ ರಾಮಯ್ಯ,ರೈತಯುವ ಮೊರ್ಚಾದ ಅಧ್ಯಕ್ಷ. ಶ್ರೀನಿವಾಸ್ ಹಾಗೂ ಶಿಕ್ಷಕರಿದ್ದಾರೆ. ಹುಳಿಯಾರು ಸಮೀಪದ ಹಂದನಕೆರೆ ಗುರುಗಿರಿ ಸಿದ್ದೇಶ್ವರಸ್ವಾಮಿಯ ಬೆಟ್ಟದ ತಪ್ಪಲಿನಲ್ಲಿ ನಡೆದ ಮಹಾರುದ್ರಯಾಗಕ್ಕೆ ಮಾಜಿ.ಸಿ.ಎಂ.ಯಡೆಯೂರಪ್ಪ ಅವರನ್ನು ಮಾಜಿ.ಶಾಸಕ ಕಿರಣ್ ಕುಮಾರ್ ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಕರೆದ್ಯೊಯುತ್ತಿರುವುದು

ಕೆಲವೇ ಮಂದಿ ಗ್ರಾಮಸ್ಥರೊಂದಿಗೆ ಅಂತು-ಇಂತು ನಡೆಯಿತು ಗ್ರಾಮ ಸಭೆ

ಹುಳಿಯಾರು ಗ್ರಾಮ ಪಂಚಾಯ್ತಿ ಗ್ರಾಮಭೆಯಲ್ಲಿ ಮನೆ ಗ್ರಾಂಟ್ ಹಂಚುವ ಕಾರ್ಯಕ್ಕೆ ಸೂಕ್ತ ಪ್ರಚಾರವಿಲ್ಲದೆ ಹಾಜರಿದ್ದ ಕೆಲವೇ ಮಂದಿ ಫಲಾನುಭವಿಗಳು ಗ್ರಾಮ ಪಂಚಾಯ್ತಿಯ 2011-12ನೇ ವರ್ಷದ ಅಂಬೇಡ್ಕರ್ ವಸತಿ ಯೋಜನೆ ಹಾಗೂ 2012-13ನೇ ಸಾಲಿನ ಇಂದಿರಾ ಆವಾಸ್ ಯೋಜನೆಯಡಿ ಫಲಾನುಭವಿಗಳ ಆಯ್ಕೆಗಾಗಿ ಸೋಮವಾರ ಪಂಚಾಯ್ತಿ ಆವರಣದಲ್ಲಿ ಕೆಲವೇ ಸಂಖ್ಯೆಯ ಗ್ರಾಮಸ್ಥರೊಂದಿಗೆ ಗ್ರಾಮ ಸಭೆ ನಡೆಯಿತು. ಸಭೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಗ್ರಾಮಸ್ಥರು ಹಾಜರಿದ್ದುದು ಕುಂಡುಬಂದಿತು, ಶನಿವಾರ ನಡೆಯಬೇಕಿದ್ದ ಸಭೆ ಸೋಮವಾರಕ್ಕೆ ಮುಂದೂಡಿದ್ದು, ಪ್ರಚಾರ ಕೊರತೆಯಿಂದಾಗಿ ಜನರಲ್ಲಿ ಗ್ರಾಮಸಭೆಯ ಬಗ್ಗೆ ತಿಳಿಯದ ವಿಷಯವಾಗಿದೆ.ಅದರೂ ಸಹ ಹಾಜರಿದ್ದ ಕೆಲ ಸ್ತ್ರೀ ಶಕ್ತಿ ಸಂಘಗಳ ಮಹಿಳಾ ಫಲಾನುಭವಿಗಳೊಂದಿಗೆ ಗ್ರಾಮ ಸಭೆ ಅಂತು ಇಂತು ಜರುಗಿತು. ಅಂಬೇಡ್ಕರ್ ವಸತಿ ಯೋಜನೆಯಡಿ ಮಂಜೂರಾಗಿದ್ದ 15 ಮನೆ ಗ್ರಾಂಟ್ ಗಳಲ್ಲಿ 10 ಮನೆ ಎಸ್ಸಿ ವರ್ಗಕ್ಕೂ,5 ಮನೆ ಎಸ್ ಟಿ ವರ್ಗಕ್ಕೆ ಹಾಗೂ ಇಂದಿರಾ ಆವಾಸ್ ಯೋಜನೆಯಡಿ ಮಂಜೂರಾಗಿದ್ದ 26 ಮನೆ ಗ್ರಾಂಟ್ ಗಳಲ್ಲಿ ಎಸ್ಸಿ-ಎಸ್ಟಿಗೆ 16, ಅಲ್ಪಸಂಖ್ಯಾತರಿಗೆ 4, ಇತರೆ 6 ಮನೆ ಗ್ರಾಂಟ್ ಗಳನ್ನು ಹಂಚಿಕೆ ಮಾಡಲಾಯಿತು. ಧ್ವನಿವರ್ದಕವಿಲ್ಲದೆ ನಡೆದ ಸಭೆಯುದ್ದಕ್ಕೂ ಗೊಂದಲಗಳೇ ಮನೆಮಾಡಿದ್ದವು,ಆಂಬೇಡ್ಕರ್ ಹಾಗೂ ಇಂದಿರಾ ಆವಾಸ್ ಯೋಜನೆಯಡಿ ಮಂಜೂರಾಗಿದ್ದ ಮನೆಗಳನ್ನು ಹಂಚಲು ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿತ್ತು, ಆದರೆ ಸಭೆ...

ಆಡಳಿತ ಮಂಡಳಿ ಸದಸ್ಯರ ಚುನಾವಣಾ ವೇಳಾ ಪಟ್ಟಿ ಪ್ರಕಟ

ಹುಳಿಯಾರು ಹೋಬಳಿ ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ 2012-2016ರ 5 ವರ್ಷದ ಅವಧಿಗೆ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗೆ ಚುನಾವಣೆಯು ಮಾಚ್ 14 ರಂದು ನಡೆಯಲಿದೆ. ಚುನಾವಣಾ ವೇಳಾಪಟ್ಟಿ ಹಾಗೂ ಮಾಹಿತಿಯನ್ನು ಸಂಘದ ಸೂಚನಾ ಫಲಕದಲ್ಲಿ ಫೆ.೨೮ರಂದು ಪ್ರಕಟಿಸಲಾಗಿದ್ದು, ಉಮೇದುವಾರಿಕೆ ಮತ್ತು ನಾಮನಿರ್ದೇಶನ ಪತ್ರಗಳನ್ನು ಸಲ್ಲಿಸಲಿಚ್ಚಿಸುವ ಸಂಘದ ಸದರಿ ಆಸಕ್ತ ಸದಸ್ಯರು ಹೆಚ್ಚಿನ ವಿವರಗಳಿಗಾಗಿ ಕಛೇರಿಯ ಸೂಚನಾ ಫಲಕವನ್ನು ವೀಕ್ಷಿಸಬೇಕಾಗಿ ಸಂಘದ ಕಾರ್ಯದರ್ಶಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು ; ಜಿಲ್ಲಾ ನ್ಯಾಯಾಧೀಶ ಹೆಚ್.ಬಿ.ಪ್ರಭಾಕರಶಾಸ್ತ್ರಿ

ಹುಳಿಯಾರಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಚಿ.ನಾ.ಹಳ್ಳಿ ತಾಲ್ಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ ಮತ್ತು ಹೋಬಳಿಯ ನವ ಚೇತನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಸತ್ರನ್ಯಾಯಾಧೀಶರಾದ ಹೆಚ್.ಬಿ.ಪ್ರಭಾಕರಶಾಸ್ತ್ರಿ ಉದ್ಘಾಟಿಸಿದರು. ಸರ್ವಜ್ಞ ಹೇಳಿರುವಂತೆ ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು ಎಂಬುದು ಅಕ್ಷರಸಹ ಸತ್ಯ, ಎಲ್ಲಾ ವಿದ್ಯೆಗಳನ್ನು ಸುಲಭವಾಗಿ ತಿಳಿದು ಕರಗತ ಮಾಡಿಕೊಳ್ಳಬಹುದು ಆದರೆ ಮೇಟಿ ವಿದ್ಯೆಯನ್ನು ಅಂದರೆ ಕೃಷಿ ಮಾಡುವುದನ್ನು ಕಲಿಯುವುದು ಸುಲಭದ ಸಂಗತಿಯಲ್ಲ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಸತ್ರನ್ಯಾಯಾಧೀಶರು ಆದ ಹೆಚ್.ಬಿ.ಪ್ರಭಾಕರಶಾಸ್ತ್ರಿ ತಿಳಿಸಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ , ಚಿ.ನಾ.ಹಳ್ಳಿ ತಾಲ್ಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ ಮತ್ತು ಹೋಬಳಿಯ ನವ ಚೇತನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಸಂಜೆ ನಡೆದ ರೈತಕೂಟ ಫಲಾನುಭವಿಗಳಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಭಾರತ ದೇಶದ ಬೆನ್ನೆಲುಬೇ ಕೃಷಿಯಾಗಿದ್ದು, ಪ್ರಸ್ತುತ ಭಾರತದಲ್ಲಿ ಶೇ.65ರಷ್ಟು ಜನ ಕೃಷಿಯನ್ನೇ ಅವಲಂಭಿಸಿ ಕೃಷಿಕರಾಗಿದ್ದಾರೆ. ಇತರ ರಾಷ್ಟ್ರಗಳ ಸಾಲಿನಲ್ಲಿ ನಮ್ಮ ದೇಶ ಆಗ...

ನಾಟಕದ ಒಂದು ದೃಶ್ಯ

ಹುಳಿಯಾರು ಹೋಬಳಿ ನಂದಿಹಳ್ಳಿ ಗ್ರಾಮದಲ್ಲಿ ಬಸವೇಶ್ವರ ನಾಟಕ ಕಲಾ ತಂಡದವರು ಅಭಿನಯಿಸಿದ ಜಗಜ್ಯೋತಿ ಶ್ರೀಬಸವೇಶ್ವರ ಪೌರಾಣಿಕ ನಾಟಕದ ಒಂದು ದೃಶ್ಯ.