ಕುಲ,ಮತ,ಲಿಂಗ,ಜಾತಿ ಭೇದವನ್ನು ಎಣಿಸದೆ ಸಾರ್ವತ್ರಿಕ ಸೋದರಭಾವದ ಉದ್ದೇಶ ಹೊಂದಿರುವ ಪಟ್ಟಣದ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯವರ ಆಶ್ರಯದಡಿ ಚಿ.ನಾ.ಹಳ್ಳಿ ಎಂ.ಪುಟ್ಟಮಾದಯ್ಯ ಅವರ ಮಾರ್ಗದರ್ಶನದಲ್ಲಿ ಇಂದಿನಿಂದ ಮಾ.30 ರವರೆಗೆ ಒಂದು ತಿಂಗಳ ಕಾಲ ಪ್ರತಿದಿನ ಪ್ರಾತ:ಕಾಲ 6ರಿಂದ 7 ರ 1 ಗಂಟೆ ಅವಧಿಯಲ್ಲಿ .ಉಚಿತ ಯೋಗಾಸನ ಮತ್ತು ಪ್ರಾಣಾಯಾಮ ಶಿಬಿರ ನಡೆಯಲಿದೆ.
ಶಿಬಿರಕ್ಕೆ ಹಾಜರಾಗುವ ಶಿಬಿರಾರ್ಥಿಗಳು ಅಭ್ಯಾಸಕ್ಕೆ ಅನುಕೂಲವಾಗುವಂತೆ ಸಡಿಲವಾದ ಉಡುಪನ್ನು ಧರಿಸಿರಬೇಕು ಹಾಗೂ ರಗ್ಗು,ಜಮಖಾನ ತರಬೇಕು.13ವರ್ಷ ಮೇಲ್ಪಟ್ಟವರಿಗೆ ಮಾತ್ರ ಇಲ್ಲಿ ಅವಕಾಶ ವಿದ್ದು, ಆಸಕ್ತರು ಮಾಹಿತಿಗಾಗಿ ಗೋಪಾಲಕೃಷ್ಣ(7259299271),ಜಗದೀಶ್(9448556171),ಮಹೇಶಾಚಾರ್(9901315526) ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ