ಬಸ್ ಏಜೆಂಟರ್ ಗಳಿಗೆ ವೈಯಕ್ತಿಕವಾಗಿ ಒರಿಯಂಟಲ್ ಇನ್ಶೂರೆನ್ಸ್ ಬಾಂಡ್ ವಿತರಿಸಿ ಮಾತನಾಡಿದ ಶಾಸಕ ಸುರೇಶ್ ಬಾಬು ನನ್ನ ಹುಟ್ಟಿದ ಹಬ್ಬದ ದಿನವನ್ನು ಸಮಾಜಸೇವಾ ಕಾರ್ಯಗಳಿಗಾಗಿ ಮೀಸಲಿರಿಸಿದ್ದು,ಪ್ರತಿಬಾರಿಯೂ ಅಂದು ಜನಪರ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದೆನೆ. ಅದರಂತೆಯೇ ಕಳೆದ ವರ್ಷ ತಾಲ್ಲೂಕಿನ ಜನತೆಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳವನ್ನು ಏರ್ಪಡಿಸಿದ್ದರೆ ಈ ಬಾರಿ ತಜ್ಞ ವೈದ್ಯರನ್ನು ಕರೆಸಿ ನೂರಾರು ಜನರಿಗೆ ಉಚಿತ ಹೃದಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು,ಹೃದಯ ಸಂಬಂಧಿ ತೊಂದರೆಯಿದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ಮಾಡಿಸುವುದಾಗಿ ತಿಳಿಸಿದರು. ಹಿಂದೆ ಹೇಳಿದಂತೆ ಹುಳಿಯಾರಿಗೆ ಸುಸಜ್ಜಿತ ಬಸ್ ನಿಲ್ದಾಣದ ವ್ಯವಸ್ಥೆಯನ್ನು ಮಾಡಿದ್ದು,ಶೀಘ್ರವೇ ಅದರ ಪ್ರಾರಂಭೋತ್ಸವವನ್ನು ಮಾಡುವ ಮುಖಾಂತರ ಇಲ್ಲಿನ ವ್ಯಾಪಾರಸ್ಥರಿಗೆ,ಸಾರ್ವಜನಿಕರಿಗೆ ಅನುಕೂಲಕಲ್ಪಿಸುವುದಾಗಿ ಹೇಳಿದರು. ಏಜೆಂಟರ ಸಂಘದಿಂದ ಅನೇಕ ಜನಪರ ಕಾರ್ಯಗಳು ಕೈಗೊಳ್ಳುತ್ತಿರುವುದನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಏಜೆಂಟರ ಛಾರಿಟಬಲ್ ಸೇವಾ ಟ್ರಸ್ಟ್ ವತಿಯಿಂದ ಶಾಸಕ ಸಿ.ಬಿ.ಸುರೇಶ್ ಬಾಬು ಅವರನ್ನು ಸನ್ಮಾನಿಸಲಾಯಿತು.
ತಾ.ಪಂ.ಉಪಾಧ್ಯಕ್ಷೆ ಬೀಬೀಫಾತೀಮ,ಚಿ.ನಾ.ಹಳ್ಳಿ ಪುರಸಭೆ ಅಧ್ಯಕ್ಷ ದೊಡ್ಡಯ್ಯ,ಗವಿರಂಗನಾಥ ಬಸ್ ಮಾಲೀಕರಾದ ರಂಗನಾಥ ಪ್ರಸಾದ್,ಎಸ್ ಎಲ್ ಆರ್ ಬಸ್ ನ ಪ್ರದೀಪ್ ಗ್ರಾ.ಪಂ.ಸದಸ್ಯರಾದ ಗಂಗಾಧರ್,ಏಜೆಂಟರ್ ಸಂಘದ ವಿಶ್ವನಾಥ್ ,ಲೋಕೇಶಣ್ಣ, ಕುಮಾರ್,ರಾಜಣ್ಣ,, ನಾಗಭೂಷಣ್,ಇಂತಿಯಾಸ್,ಪ್ರಸನ್ನ ಮುಂತಾದವರು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ