ಹುಳಿಯಾರು ಬಸ್ ನಿಲ್ದಾಣದ ಪೋಲಿಯೊ ಬೂತ್ ನಲ್ಲಿ ಸುತ್ತಮುತ್ತಲ ಹಳ್ಳಿಗಳಿಂದ ಬಂದಿದ್ದ 5ವರ್ಷ ಒಳಪಟ್ಟ ಮಕ್ಕಳಿಗೆ ಪೋಲಿಯೊ ಹನಿ ಹಾಕುತ್ತಿರುವುದು.
ನಗರದ ಬಸ್ ನಿಲ್ದಾಣ,ಅಂಗನವಾಡಿ ಕೇಂದ್ರ,ಆಸ್ಪತ್ರೆ ಸೇರಿದಂತೆ ಶಾಲೆಗಳಲ್ಲೂ ಬೂತ್ ಗಳನ್ನು ತರೆಯಲಾಗಿತ್ತು.ನಗರದ ಬಸ್ ನಿಲ್ದಾಣದ ಬೂತ್ ನಲ್ಲಿ ದಾದಿಯರು ಬಸ್ ನಿಂದ ಇಳಿದು ಬರುತ್ತಿದ್ದ ಜನರನ್ನು ಗಮನಿಸುತ್ತಿದ್ದು,ಅವರಲ್ಲಿ ಯಾರಾದರು 5ವರ್ಷದ ಒಳಗಿನ ಮಕ್ಕಳೊಂದಿಗೆ ಇಳಿದರೆ ಸಾಕು ಅವರ ಹತ್ತಿರವೇ ಹೋಗಿ,ಪಲ್ಸ್ ಪೋಲಿಯೊದ ಬಗ್ಗೆ ಮಾಹಿತಿ ತಿಳಿಸಿ ಮಗುವಿಗೆ ಪೋಲಿಯೊ ಹನಿಯನ್ನು ಹಾಕುತ್ತಿದ್ದರು.ಇದರಿಂದ ಕೆಲವರು ಇಂದು ಪಲ್ಸ್ ಪೋಲಿಯೋ ದಿನ ಎಂಬುದನ್ನು ಮರೆತಿದ್ದರು ಸಹ ಅವರಿಗೆ ತಿಳಿಯುವಂತೆ ಮಾಡುತ್ತಿದ್ದರು. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿಯೂ ಸಂಜೆಯ ವರೆಗೂ ಪಲ್ ಪೋಲಿಯೊ ಹಾಕುತ್ತಿದ್ದು ಕಂಡುಬಂದಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ