ಈ ಗ್ರಾಮಗಳಿಗೆ ಹುಳಿಯಾರಿನ ವಿದ್ಯುತ್ ಉಪಸ್ಥಾವರದಿಂದ ವಿದ್ಯುತ್ ಪೂರೈಸಲಾಗುತ್ತಿತ್ತು.ಆದರೆ ಉತ್ತಮವಾದ ವೋಲ್ಟೇಜ್ ಪೋರೈಕೆ ಆಗದೆ ದೀಪದ ಬೆಳಕಿಗಿಂತ ಕಡಿಮೆ ವೋಲ್ಟೇಜ್ ಇರುತ್ತಿತ್ತು.ಇದರಿಂದ ಮಕ್ಕಳ ಓದಿಗೆ,ರೈತರಿಗೆ ತಮ್ಮ ಬೆಳೆಗಳಿಗೆ ನೀರುಹಾಯಿಸುವುದಕ್ಕೆ ,ಕುಡಿಯುವ ನೀರಿಗೂ ತೊಂದರೆಯಾಗಿತ್ತು. ಈ ಸಮಸ್ಯೆಯನ್ನು ನಿವಾರಿಸಿ ದಸೂಡಿಯ ವಿದ್ಯುತ್ ಉಪಸ್ಥಾವರವನ್ನು ಪ್ರಾರಂಬಿಸಿ ಎಂದು ಕಳೆದ ಕೆಲವು ತಿಂಗಳ ಹಿಂದೆ ಧರಣಿ ಮಾಡಿದಾಗ ಆಗಮಿಸಿದ್ದ ಅಧಿಕಾರಿಗಳು ನಿಮಗೆ ವೋಲ್ಟೇಜ್ ಸಮಸ್ಯೆ ಉಂಟಾಗದಂತೆ ವಿದ್ಯುತ್ ಪೂರೈಸುವುದಾಗಿ ಭರವಸೆ ನೀಡಿದ್ದರು.ಆದರೆ ಇಂದಿಗೂ ಸಹ ಆ ಸಮಸ್ಯೆ ಬಗೆಹರಿದಿಲ್ಲ ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದ ರೈತಾಪಿ ವರ್ಗದವರು ಮರಳಿ ಧರಣಿ ನಡೆಸಿದ್ದಾರೆ.
ಈ ಸಂಬಂದ ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳ ಮೇಲೆ ರೈತರು ಪ್ರಶ್ನೆಗಳ ಸುರಿಮಳೆಗೈದರು,ರೈತರ ಪ್ರಶ್ನೆಗಳಿಗೆ ತಕ್ಕ ಉತ್ತರ ನಿಡುವಲ್ಲಿ ಅಧಿಕಾರಿಗಳು ತಬ್ಬಿಬ್ಬಾಗಿ ಹೋದರು. ನೀವು ಸುಮ್ಮನೆ ಪೋಳ್ಳು ಭರವಸೆಗಳನ್ನು ನೀಡುತ್ತಾ ಇಂದು,ಅಂದು ಪ್ರಾರಂಭಿಸುತ್ತೇವೆಂದು ಹೇಳಿ ಇಲ್ಲಿಂದ ಜಾಗ ಖಾಲಿಮಾಡುತ್ತಿರ ಆದರೆ ವಿದ್ಯುತ್ ಉಪಸ್ಥಾವರ ಮಾತ್ರ ಪ್ರಾರಂಭವಾಗುವುದಿಲ್ಲ ಅದಕ್ಕಾಗಿ ಈ ಬಾರಿ ವಿದ್ಯುತ್ ಉಪಸ್ಥಾವರ ಪ್ರಾರಂಭವಾಗುವವರೆಗೂ ನಮ್ಮ ಧರಣಿ ಮುಂದುವರೆಯುತ್ತಿರುತ್ತದೆ,ಅಲ್ಲದೆ ಇದನ್ನು ಯಾವಾಗ ಪ್ರಾರಂಭಿಸುವಿರಿ ಹೇಳಿ ಇಲ್ಲದಿದ್ದರೆ ಮುಂದೆ ನಡೆಯುವ ಅನಾಹುತಗಳಿಗೆ ನಾವು ಜವಬ್ದಾರರಲ್ಲವೆಂದು ರೈತರು ಎಚ್ಚರಿಯ ಮಾತನಾಡಿ ಧರಣಿಯನ್ನು ಮುಂದುವರೆಸಿದರು.
ಎಇಇ ಸತ್ಯನಾರಾಯಣ್ ಸ್ಥಳಕ್ಕೆ ಭೇಟಿ ನೀಡಿ ರೈತರ ಆಳಲನ್ನು ಕೇಳಿ ಫೆಬ್ರವರಿ 15ರ ಒಳಗಾಗಿ ವಿದ್ಯುತ್ ಉಪಸ್ಥಾವರವನ್ನು ಪ್ರಾರಂಭಿಸಿ ಕರೆಂಟ್ ಕೊಡುತ್ತವೆಂದರು. ಆಗ ರೈತರು ನೀವು ಇದೇ ರೀತಿ ನಮಗೆ ಮಂಕುಬೂದಿ ಎರಚ್ಚುತ್ತಿರಾ ಎಂದಾಗ,ಇದೊಂದು ಬಾರಿ ನನ್ನನ್ನು ನಂಬಿ ಇನ್ನೂ 15 ದಿನಗಳಲ್ಲಿ ಇಲ್ಲಿನ ಸುತ್ತ ಮುತ್ತಲ 15 ಕಿ.ಮೀ ಸುತ್ತಮುತ್ತಲ ಎಲ್ಲಾ ಗ್ರಾಮಗಳಿಗೆ ಕರೆಂಟ್ ಕೊಡುವುದಾಗಿ ತಿಳಿಸಿ, ರೈತರ ಮನವೊಲಿಸಿ ಧರಣಿಯನ್ನು ಹಿಂಪಡೆಯುವಂತೆ ತಿಳಿಸಿದರು.ಇದೊಂದು ಬಾರಿ ಕಡೆಯದಾಗಿ ನೋಡೊಣ ಎಂದು ರೈತರು ಧರಣಿಯನ್ನು ಹಿಂಪಡೆದು,ಕಾಲಕ್ಕೆ ತಕ್ಕಾಗೆ ಪ್ರಾರಂಭಿಸದಿದ್ದರೆ ಮತ್ತೆ ಧರಣಿಯನ್ನು ತೀವ್ರಗೊಳಿಸುವುದಾಗಿ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ