ಶನಿವಾರ ನಡೆಯಬೇಕಿದ್ದ ಸಭೆ ಸೋಮವಾರಕ್ಕೆ ಮುಂದೂಡಿದ್ದು, ಪ್ರಚಾರ ಕೊರತೆಯಿಂದಾಗಿ ಜನರಲ್ಲಿ ಗ್ರಾಮಸಭೆಯ ಬಗ್ಗೆ ತಿಳಿಯದ ವಿಷಯವಾಗಿದೆ.ಅದರೂ ಸಹ ಹಾಜರಿದ್ದ ಕೆಲ ಸ್ತ್ರೀ ಶಕ್ತಿ ಸಂಘಗಳ ಮಹಿಳಾ ಫಲಾನುಭವಿಗಳೊಂದಿಗೆ ಗ್ರಾಮ ಸಭೆ ಅಂತು ಇಂತು ಜರುಗಿತು.
ಅಂಬೇಡ್ಕರ್ ವಸತಿ ಯೋಜನೆಯಡಿ ಮಂಜೂರಾಗಿದ್ದ 15 ಮನೆ ಗ್ರಾಂಟ್ ಗಳಲ್ಲಿ 10 ಮನೆ ಎಸ್ಸಿ ವರ್ಗಕ್ಕೂ,5 ಮನೆ ಎಸ್ ಟಿ ವರ್ಗಕ್ಕೆ ಹಾಗೂ ಇಂದಿರಾ ಆವಾಸ್ ಯೋಜನೆಯಡಿ ಮಂಜೂರಾಗಿದ್ದ 26 ಮನೆ ಗ್ರಾಂಟ್ ಗಳಲ್ಲಿ ಎಸ್ಸಿ-ಎಸ್ಟಿಗೆ 16, ಅಲ್ಪಸಂಖ್ಯಾತರಿಗೆ 4, ಇತರೆ 6 ಮನೆ ಗ್ರಾಂಟ್ ಗಳನ್ನು ಹಂಚಿಕೆ ಮಾಡಲಾಯಿತು.
ಧ್ವನಿವರ್ದಕವಿಲ್ಲದೆ ನಡೆದ ಸಭೆಯುದ್ದಕ್ಕೂ ಗೊಂದಲಗಳೇ ಮನೆಮಾಡಿದ್ದವು,ಆಂಬೇಡ್ಕರ್ ಹಾಗೂ ಇಂದಿರಾ ಆವಾಸ್ ಯೋಜನೆಯಡಿ ಮಂಜೂರಾಗಿದ್ದ ಮನೆಗಳನ್ನು ಹಂಚಲು ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿತ್ತು, ಆದರೆ ಸಭೆಯಲ್ಲಿ ಅವರ ಹೆಸರು ಕೂಗಿದರೆ ಅಭ್ಯರ್ಥಿಗಳೇ ಹಾಜರಿರಲ್ಲಿಲ್ಲ. ಹಾಜರಿದ್ದ ಒಬ್ಬರಿಬ್ಬರಲ್ಲಿ ಒಬ್ಬರನ್ನು ಗುರ್ತಿಸಿ, ಪಂಚಾಯ್ತಿ ಸದಸ್ಯರ ಒಪ್ಪಿಗೆಯೊಂದಿಗೆ ಅವರ ಹೆಸರನ್ನು ಮನೆ ಗ್ರಾಂಟ್ ಗೆ ನೊಂದಾಯಿಸಲಾಗುತ್ತಿತ್ತು.ಅಲ್ಲದೆ ಸಭೆಗೆ ಬಾರದ ಫಲಾನುಭವಿಗಳನ್ನು ಸದಸ್ಯರೇ ಪೋನ್ ಮಾಡಿ ಕರೆಸಿ ಕೊಂಡು ಅವರಿಗೆ ಗ್ರಾಂಟ್ ನೀಡಲಾಗುತ್ತಿತು.
ಅಂಗವಿಕಲರಿಗೆ ಮನೆ ಕೊಡಿ : ಮಂಜೂರಾಗಿದ್ದ ಒಟ್ಟು ಮನೆ ಗ್ರಾಂಟ್ ನಲ್ಲಿ 2 ಗ್ರಾಂಟನ್ನು ಅಂಗವಿಕಲರಿಗೆ ನೀಡಬೇಕಿತ್ತು.ಅದರಂತೆ ಹುಳಿಯಾರಿನಲ್ಲಿ ಕಳೆದ ಕೆಲವು ವರ್ಷಗಳಿಂದ ಕ್ಷೌರಿಕ ವೃತ್ತಿ ಮಾಡುತ್ತಿರುವ ಕೃಷ್ಣಪ್ಪ ಎಂಬಾತನ ಮಗಳಾದ ಗೀತಾ ಶೇ.90ರಷ್ಟು ಅಂಗವೈಕಲ್ಯತೆಯಿಂದ ಕೂಡಿದ್ದು,ಮನೆ ಗ್ರಾಂಟ್ ಗಾಗಿ ಅರ್ಜಿ ಹಾಕಿದ್ದರು.ಇವರ ಅರ್ಜಿಯನ್ನು ಮರೆತ್ತಿದ್ದ ಸಭೆಯಲ್ಲಿ ಹೋಬಳಿಯ ಟಿಪ್ಪು ಸಂಘದ ಪದಾಧಿಕಾರಿಗಳು ಧ್ವನಿಯತ್ತಿ ಹ್ಯಾಂಡಿಕ್ಯಾಪ್ಟ್ ಗೆ ಗ್ರಾಂಟ್ ಕೊಡದೆ,ಪಂಚಾಯ್ತಿ ಸದಸ್ಯರೊಂದಿಗೆ ಚನ್ನಾಗಿದ್ದವರಿಗೆ ಮಾತ್ರ ಗ್ರಾಂಟ್ ಕೊಡುತ್ತಿರಲ್ಲ ಇದು ಸರಿಯೇ ಎಂದು ಗುಡುಗಿದರು.ಟಿಪ್ಪು ಸಂಘದವರ ಜೊತೆ ಅಲ್ಲಿದ್ದ ಸಾರ್ವಜನಿಕರು ಗೀತಾ ಅವರಿಗೆ ಗ್ರಾಂಟ್ ಕೊಡಿ ಎಂದರು.ಅದರಂತೆಯೇ ಗ್ರಾಂಟ್ ನೀಡಲು ಒಪ್ಪಿದ ಅಧಿಕಾರಿಗಳು ಕೊನೆಗಳಿಗೆಯಲ್ಲಿ ತಮ್ಮ ವರಸೆಯನ್ನೇ ಬದಲಿಸಿ,ಗೀತಾ ಅವರ ಹೆಸರನ್ನು ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಿದ್ದು,ಮುಂದೆ ಬರುವ ಗ್ರಾಂಟ್ ನಲ್ಲಿ ಸೇರಿಸಿಕೊಳ್ಳುವುದಾಗಿ ಹೇಳಿ ಜಾರಿಕೊಂಡರು.
ಸಭೆಯಲ್ಲಿ ಬಿಸ್ಮಿಲ್ಲ ಸ್ವಸಹಾಯ ಸಂಘಕ್ಕೆ ಗುಂಪು ಸಾಲವನ್ನು, ಕಾಳಿಕಾಂಭ ಸಾಕ್ಷರತಾ ಸಂಘಕ್ಕೆ ಸುತ್ತುನಿಧಿಯನ್ನು ನೀಡಲು ಆಯ್ಕೆ ಮಾಡಲಾಯಿತು. ಗ್ರಾ.ಪಂ.ಅಧ್ಯಕ್ಷ ಅನ್ಸರ್ ಅಲಿ,ಉಪಾಧ್ಯಕ್ಷೆ ವೆಂಕಟಮ್ಮ,ಪಿಡಿಓ ರಾಜಣ್ಣ,ನೋಡೆಲ್ ಅಧಿಕಾರಿ ಹರ್ಷ ಸೇರಿದಂತೆ ಕೆಲ ಸದಸ್ಯರು ಮಾತ್ರ ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ