ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಕಳೆದ 7ದಿನಗಳಿಂದ ನಂದಿಹಳ್ಳಿಯಲ್ಲಿ ನಡೆಯುತ್ತಿದ್ದ 2011-12ನೇ ಸಾಲಿನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಕಾಲಕ್ಕೆ ತಕ್ಕಂತೆ ನಾವು ನೀವು ನಡೆಯಬೇಕಿದೆ.ಯಾವ ಕಾಲದಲ್ಲಿ ಯಾವ ಕಾರ್ಯ ಆಗಬೇಕಿರುತ್ತದೆ ಅದು ಖಂಡಿತವಾಗಿಯೂ ನಡೆದೇ ತೀರುತ್ತದೆ ಎಂದರು. ಇಲ್ಲಿ ಕೈಗೊಂಡಿದ್ದ 7ದಿನಗಳ ಶಿಬಿರ ಜನರಲ್ಲಿ ಸ್ವಚ್ಚತೆಯ ಬಗ್ಗೆ ಹರಿವು ಮೂಡಿಸುವುದ ಜೊತೆ ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಗುಣಗಳು ಮೈಗೂಡುವಂತೆ ಮಾಡಿದೆ ಎಂದರು. ಇಂತಹ ಶಿಬಿರಗಳಿಗೆ ಎಲ್ಲಾ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಂಡು ಸ್ವಯಂ ಸೇವೆಯಲ್ಲಿ ತೊಡಗಿದಾಗ ಮಾತ್ರ ನಮ್ಮ ರಾಷ್ಟ್ರ ಉನ್ನತಿಯ ಶಿಖರವನ್ನು ತಲುಪುತ್ತದೆ ಅದಕ್ಕಾಗಿ ನಮ್ಮೆಲ್ಲರ ಪರಿಶ್ರಮ ಅತ್ಯಗತ್ಯವಾಗಿದೆ.ಅಲ್ಲದೆ ದೇಶಿ ಸಂಸ್ಕೃತಿಯನ್ನು ಕಟ್ಟುವ ಕಾರ್ಯ ವಿದ್ಯಾರ್ಥಿಗಳಿಂದ ಆಗಬೇಕಿದೆ ಎಂದರು. ಇಂದು ನಾವು ಕೆಟ್ಟ ರಾಸಾಯನಿಕ ಗೊಬ್ಬರವನ್ನು ಬಳಸಿ ನಾವು ಗೊಬ್ಬರವಾಗಿ ಹೋಗುತ್ತಿದ್ದೇವೆ.ಅದಕ್ಕೆ ಬದಲಾಗಿ ನಮ್ಮ ಸುತ್ತಮುತ್ತ ಸ್ವಚ್ಚತೆಯನ್ನು ಉಳಿಸಿ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ಪ್ರಾಚಾರ್ಯ ಎಂ.ಎನ್,ನಾಗರಾಜು ಮಾತನಾಡಿ ಶಿಬಿರ ಯಶಸ್ವಿಯಾಗಬೇಕಾದೆ ಶಿಬಿರಾರ್ಥಿಗಳು ಹಾಗೂ ಶಿಬಿರಾಧಿಕಾರಿಗಳ ಪಾತ್ರ ಪ್ರಮುಖ. ಅದರಂತೆ ಇಲ್ಲಿ ಎಲ್ಲರೂ ಪರಿಶ್ರಮದಿಂದ ನಡೆದುಕೊಂಡಿದ್ದು, ನಂದಿಹಳ್ಳಿಯ ಜನರಿಗೆ ಸ್ವಚ್ಚತೆಯನ್ನು ಯಾವರೀತಿ ಕಾಪಡಿಕೊಳ್ಳಬೇಕು,ಅದರಿಂದ ನಮಗಾಗುವ ಪ್ರಯೋಜನಗಳೇನು ಎಂಬುದನ್ನು ಮನವರಿಕೆ ಮಾಡಿ ಕೊಟ್ಟು,ಜನರಿಂದ ಉತ್ತಮ ಪ್ರಶಂಸೆಯನ್ನು ಗಳಿಸಿ ನಮ್ಮ ಕಾಲೇಜಿನ ಗೌರವವನ್ನು ಹೆಚ್ಚಿಸಿದ್ದಿರೆಂದು ತಿಳಿಸಿದರು.
ನಾವು ಶ್ರಮದಾನಕ್ಕೆಂದು ಹೋದಾಗ ಮನೆಮನೆಯಲ್ಲಿ ಶರಬತ್ತು,ಪಾನಕ,ಮಜ್ಜಿಗೆ,ಟೀ ಹೀಗೆ ನಾನ ರೀತಿ ಭಕ್ಷಗಳನ್ನು ಕೊಡುವುದರ ಜೊತೆಗೆ ಜನರಿಂದನಮಗೆ ಉತ್ತಮ ಸಹಕಾರವಿತ್ತು. ಸಮಾಜ ಸೇವೆಯ ರೀತಿನೀತಿಗಳನ್ನು, 7ದಿನಗಳ ಶಿಬಿರ ಕಲಿಸಿಕೊಟ್ಟಿತಲ್ಲದೆ, ಸಭಾಕಂಪನದ ಭಯವನ್ನು ನಮ್ಮಿಂದ ದೂರಮಾಡಿದೆ ಎಂದು ಶಿಬಿರಾರ್ಥಿಗಳಾದ ರಘು,ಹರೀಶ್,ಕಿರಣ್ ತಮ್ಮ ಅನಿಸಿಕೆಯನ್ನು ತಿಳಿಸಿದರು.
ಸಿ.ಡಿ.ಸಿ ಉಪಾಧ್ಯಕ್ಷರು ಹಾಗೂ ಜೆಡಿಎಸ್ ಮುಖಂಡರಾದ ನಂದಿಹಳ್ಳಿ ಶಿವಣ್ಣ,ಜಲಾಲ್ ಸಾಬ್,ಬರಗೂರು ಗ್ರಾ.ಪಂ.ಅಧ್ಯಕ್ಷ ಬಸವರಾಜು,ಪ್ರಬಾರಿ ಮುಖ್ಯಶಿಕ್ಷಕ ಯಲ್ಲಪ್ಪ,ಶಿಬಿರಾಧಿಕಾರಿಗಳಾದ ಶಂಕರಲಿಂಗಯ್ಯ,ಇಬ್ರಾಹಿಂ,ಜಯಪ್ರಕಾಶ್,ಅಶ್ವತ್ಥನಾರಾಯಣ,ಹಿರಿಯ ಉಪನ್ಯಾಸಕರಾದ ಮೂಗೇಶಪ್ಪ,ಶ್ರೀನಿವಾಸ್,ಹನುಮಂತಪ್ಪ ಗ್ರಾಮಸ್ಥರಾದ ನಂದೀಶಪ್ಪ,ರಾಜಮ್ಮ,ರಾಮಣ್ಣ ಇತರರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ