ಉಪಾಸನ ಮೊಹನ್ ಅವರ ಪರಿಚಯ ಮಾಡಿಕೊಟ್ಟ ಸತೀಶ್ ಮಾತನಾಡಿ ಮೂಲತಃ ಮೈಸೂರಿನವರಾದ ಮೋಹನ್ ಅವರು ಸಂಗೀತದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದು, ಸಂಗೀತಾಭ್ಯಾಸದಲ್ಲಿ ನಿರತರಾಗಿ ಬೆಂಗಳೂರಿನಲ್ಲಿ ಉಪಾಸನ ಸಂಗೀತ ಶಾಲೆಯನ್ನು ಪ್ರಾರಂಭಿಸಿ ಅನೇಕ ವಿದ್ಯಾರ್ಥಿಗಳಿಗೆ ಸಂಗೀತವನ್ನು ಕಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.ಅಲ್ಲದೆ ಕರ್ನಾಟಕದ ವಿವಿಧ ಭಾಗಗಳಲ್ಲಿ ತಮ್ಮ ಸಂಗೀತ ಕಛೇರಿಗಳನ್ನು ನಡೆಸಿ ಜನರ ಹೃದಯದಲ್ಲಿ ಮನೆ ಮಾಡಿ ಅವರ ಅಭಿಮಾನವನ್ನು ಸಂಪಾದಿಸಿದ್ದಾರೆ. ಅನೇಕ ಕವಿತೆಗಳಿಗೆ ರಾಗ ಸಂಯೋಜನೆಯನ್ನು ಮಾಡಿ ಸುಮಾರು ನೂರು ಮನೆಗಳಲ್ಲಿ ತಮ್ಮ ಸಂಗೀತ ಕಛೇರಿಗಳನ್ನು ನಡೆಸುವ ಮೂಲಕ ಕನ್ನಡ ನಾಡಿನ,ಭಾಷೆಯ ಹಾಗೂ ಸಂಸ್ಕೃತಿಯ ಹಿರಿಮೆಯನ್ನು ಮನೆಮನೆ ಅಂಗಳದಲ್ಲಿ ಹರಡುವಂತೆ ಮಾಡಿದ ಕೀರ್ತಿ ಇವರಾದ್ದಾಗಿದ್ದೆ ಎಂದರು.
ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್ ಮಾತನಾಡಿ ವರ್ಷ ಪೂರ್ತಿ ಅಭ್ಯಾಸ ಮಾಡಿದರು ಸುಗಮ ಸಂಗೀತವನ್ನು ಕಲಿಯಲು ಕಷ್ಟಕರ. ಆದರೆ ಇವರು ತಮ್ಮ ಕಲಿಕಾ ಶಿಬಿರದ ಮೂಲಕ ಎರಡುಮೂರು ದಿನಗಳಲ್ಲಿ ಮಕ್ಕಳಿಗೆ ಸುಗಮ ಸಂಗೀತವನ್ನು ಕಲಿಸಿ,ಅವರು ಹಾಡುವಂತೆ ಮಾಡುವುದು ನಿಜಕ್ಕೂ ಆಶ್ಚರ್ಯ. ಇವರ ಈ ಸಂಗೀತ ಸೇವೆ ಎಲ್ಲಾ ಹಳ್ಳಿಹಳ್ಳಿಗಳಲ್ಲೂ ಹರಡಲಿ ಎಂದು ಆಶಿಸಿದರು.
ಪತ್ರ ಬರಹಗಾರ ಹೆಚ್.ಎಸ್.ಲಕ್ಷ್ಮಿನರಸಿಂಹಯ್ಯ ಮಾತನಾಡಿ ಜಿ.ವಿ.ಯತ್ರಿಯವರನ್ನು ತನ್ನ ಗುರುಗಳಾಗಿ ಪಡೆದ ಮೋಹನ್ ಸಂಗೀತ ಕ್ಷೇತ್ರದಲ್ಲಿ ವಿದ್ವತ್ ಪಡೆದು, ನಂತರದಲ್ಲಿ ಸುಗಮಸಂಗೀತದ ಪರಂಪರೆಯನ್ನು ಇಂದಿಗೂ ಮುನ್ನೆಡೆಸಿಕೊಂಡು ಹೋಗುತ್ತಿರುವುದು ಗಮನಾರ್ಹವಾಗಿದ್ದು ಅವರ ಸಾಧೆನೆಯನ್ನು ಎಲ್ಲರೂ ಮೆಚ್ಚಬೇಕಾದ್ದು.ಅಲ್ಲದೇ ಇವರು ಸಂಗೀತ ಪರಂಪರೆಯನ್ನು ಗ್ರಾಮೀಣ ಮಟ್ಟದಲ್ಲಿ ಕೂಡ ಕೊಂಡೈಯುತ್ತಿರುವುದು ಶ್ಲಾಘನೀಯ ಎಂದರು.
ಹುಳಿಯಾರಿನ ಸ್ನೇಹ ಬಳಗದಿಂದ ಭಿನ್ನವತ್ತಳೆ ನೀಡುವ ಮೂಲಕ ಅವರನ್ನು ಅಭಿನಂದಿಸಲಾಯಿತು. ಲಕ್ಷ್ಮಿ ಸುಬ್ರಮಣ್ಯ,ಶೈಲರಮೇಶ್ ,ಜಯಶ್ರೀ,ಸತೀಶ್ ,ಶಾಂತಲಾಸುಬ್ರಮಣ್ಯ ವರ್ಷ,ಸಿರಿ,ಪ್ರಿಯಾಂಕ,ಅಕ್ಷಯ್ ಮುಂತಾದವರು ಉಪಾಸನ ಮೊಹನ್ ಸಂಗೀತ ಸಂಯೋಜಿಸಿದ ಕವಿತೆಗಳ ಗಾಯನವನ್ನು ಸುಶ್ರಾವ್ಯವಾಗಿ ಹಾಡಿದರು. ಸಮಾರಂಭದಲ್ಲಿ ಜೆ.ಗುಂಡಣ್ಣ , ಹು.ಕೃ.ವಿಶ್ವನಾಥ್,ಕೆಂಕೆರೆ ಸತೀಶ್,ಎಲ್.ಆರ್.ಚಂದ್ರಶೇಖರ್,ಶಿಕ್ಷಕರಾದ ರಮೇಶ್,ಗೋಪಿ,ಬಸವಮೂರ್ತಿ ಮುಂತಾದವರು ಸೇರಿದಂತೆ ಅನೇಕ ಸಂಗೀತ ಪ್ರಿಯರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ