ಶುಕ್ರವಾರದಂದು ಹೋಬಳಿಯ ವಿವಿಧ ಶಾಲೆಗಳಿಗೆ ಭೇಟಿನೀಡಿ ಮುಂದೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗಾಗಿ ಈಗಾಗಲೇ ಮತ ಪ್ರಚಾರದಲ್ಲಿ ತೊಡಗಿದ್ದ ಪದವಿದರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ನಾರಾಯಣಸ್ವಾಮಿ ಅವರು ಕನಕದಾಸ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಳೆದ ಬಾರಿ ಇದೇ ಪದವಿದರ ಕ್ಷೇತ್ರದಿಂದ ಪಕ್ಷೇತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾನು ಅಭೂತಪೂರ್ವ ಗೆಲುವನ್ನು ಪಡೆದಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ಬಾರಿ ವರಿಷ್ಠರ ನನ್ನನು, ನಾನು ಕೈಗೊಂಡಕಾರ್ಯಗಳನ್ನು ಗುರ್ತಿಸಿದ್ದಾರೆ.ಅದರಂತೆ ನಾನು ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದರು. ಪಕ್ಷದ ಜನಪರ ಕಾರ್ಯಗಳು ಹಾಗೂ ನಾನು ಕೈಗೊಂಡ ಕಾರ್ಯಗಳೇ ನನ್ನನು ಗೆಲ್ಲುವಂತೆ ಮಾಡುತ್ತವೆ ಎಂದು ಹೇಳಿದರು. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾದ ನಾನು ಅವರಿಗಾಗಿ ಅನೇಕ ಕಾರ್ಯಗಳನ್ನು ಮಾಡಿದ್ದು,ಸಾವಿರಾರು ಸಹಶಿಕ್ಷಕರಿಗೆ ಬಡ್ತಿಯನ್ನು,ಸುಮಾರು 18ಸಾವಿರ ಶಿಕ್ಷಕರಿಗೆ ಜೀವನವನ್ನು ಕಟ್ಟಿಕೊಟ್ಟದ್ದೇನೆ ಎಂದರು. ಅದರಂತೆ ಪಕ್ಷಕ್ಕೆ ಸೇರಿದ ಮೇಲೆ ಪಕ್ಷದ ಸಾಧನೆ ಹಾಗೂ ನನ್ನವೈಯಕ್ತಿಕ ಸಾದನೆ ಎರಡು ಸೇರಿದಾಗ ಉತ್ತಮ ಫಲಿತಾಂಶ ಬಂದೇ ಬರುತ್ತೆ ಎಂದು ನಂಬಿದ್ದೇನೆ. ಅದರಂತೆ ಗೆಲುವು ಖಚಿತ ನನ್ನದೇ ಎಂದು ದೃಢವಾಗಿ ಹೇಳಿದರು.
ತಾ.ಪಂ.ಅಧ್ಯಕ್ಷ ಸೀತಾರಾಂ,ಸದಸ್ಯ ಕೆಂಕೆರೆ ನವೀನ್,ವಸಂತಯ್ಯ,ಕನಕದಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶಿವಪ್ರಸಾದ್,ತಾಲ್ಲೂಕು ಬಿಜೆಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ,ಶ್ರೀನಿವಾಸ್,ಹಳೆಮನೆ ಸುರೇಶ್ ಸೇರಿದ್ದಂತೆ ವಿವಿಧ ಕಾಲೇಜುಗಳ ಉಪನ್ಯಾಸಕರು ಹಾಗೂ ಸಿಬ್ಬಂದಿಯವರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ