ಸೋಮವಾರ ಹುಳಿಯಾರಿನ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದ ಅವರು,ರಹಮತ್ತುಲ್ಲಾ ಅವರ ಮನೆಯಲ್ಲಿ ಪತ್ರಿಯವರೊಂದಿಗೆ ಮಾತನಾಡಿದರು.
ಇಂದು ದೇಶಾದ್ಯಂತ ನಡೆಯುತ್ತಿರುವ ಭ್ರಷ್ಟಾಚಾರ,ಲಂಚಗುಳಿತನ ದೇಶದಿಂದಲೇ ತೊಲಗಬೇಕಾದರೆ ಅದು ಇಂದಿನ ಯುವಶಕ್ತಿಯಿಂದ ಮಾತ್ರ ಸಾಧ್ಯ. ಅಲ್ಲದೆ ಪ್ರಜಾಪ್ರಭುತ್ವದ ರಕ್ಷಣೆಯೂ ಅಗಲಿದೆ ಎಂದರು.ರೈಲ್ವೆ ನೀತಿಯು ಜನಸಾಮಾನ್ಯರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಕೊಂಡೈಯುವುದಲ್ಲ, ದೇಶದೇಶಗಳ ನಡುವೆ ಉತ್ತಮ ಭಾಂದವ್ಯವನ್ನುಂಟು ಮಾಡಿ ರಾಷ್ಟ್ರ-ರಾಷ್ಟ್ರಗಳ ನಡುವೆ ಸ್ನೇಹ ಸಹಬಾಳ್ವೆ ಮೂಡುವಂತೆ ಸೌಹಾರ್ದತೆಯನ್ನು ಬೆಳೆಸುವ ಕಾರ್ಯ ಮಾಡಬೇಕು.ಅಲ್ಲದೆ ಪ್ರಸ್ತುತ ರಾಜಕೀಯದಲ್ಲಿನ ಏರಿಳಿತಗಳು,ಎಡರು,ತೊಡರುಗಳ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ಬೈಜುಸಾಬ್,ರಹಮತ್ತುಲ್ಲಾ,ಜಾಫರ್ ಸಾಬ್,ಜಲಾಲ್ ಸಾಬ್ ಸೇರಿದಂತೆ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ