ತಾಲ್ಲೂಕು ಸಮಾಜಕಲ್ಯಾಣ ಇಲಾಖೆ ಮತ್ತು ರೋಟರಿ ಕ್ಲಬ್ ನ ಅಧ್ಯಕ್ಷರಾದ ಕೆ.ಆರ್. ಚನ್ನಬಸಪ್ಪ ಅಧ್ಯಕ್ಷತೆವಹಿಸುವ ಸಮಾರಂಭದಲ್ಲಿ ಸಕ್ಕರೆ ಕಾಯಿಲೆ ಮತ್ತು ಅದರ ನಿರ್ವಹಣೆ ಹಾಗೂ ಆಸ್ಪೃಶ್ಯತಾ ನಿವಾರಣೆ ಎಂಬ ವಿಷಯದ ಬಗ್ಗೆ ಸಿದ್ದಶ್ರೀ ಕ್ಲಿನಿಕ್ ನ ಡಾ ವೈಜಿ.ಸಿದ್ದರಾಮಯ್ಯ ಉಪನ್ಯಾಸ ನೀಡಲಿದ್ದಾರೆ.ಅಲ್ಲದೆ ತಾಲ್ಲೂಕು ವೈದ್ಯ ಸಂಘದ ಕಾರ್ಯದರ್ಶಿ ಡಾ ಸಂಜೀವ್ ಕುಮಾರ್,ಡಾಪ್ರಶಾಂತಕುಮಾರ್,ಸ್ವಂದನ ನರ್ಸಿಂಗ್ ಹೋಂನ ಡಾ ನಾಗರಾಜು,ವೀರಭದ್ರೇಶ್ವರ ಕ್ಲಿನಿಕ್ ನ ಡಾ ರಾಜಶೇಖರ್, ಡಾಶಶಿಕಿರಣ್ , ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ದಾಸಪ್ಪ,ವ್ಯವಸ್ಥಾಪಕ ರಾಮಣ್ಣ, ಚನ್ನಬಸವಯ್ಯ, ಲಿಂಗದೇವರು,ಪ್ರಾಧ್ಯಾಪಕ ಹನುಮಂತಪ್ಪ ಸೆರಿದಂತೆ ಇತರರು ಭಾಗವಹಿಸುವ ಕಾರ್ಯಕ್ರಮಕ್ಕೆ ಗ್ರಾಮದ ಸುತ್ತಲಿನ ಸಾರ್ವಜನಿಕರು ಪಾಲ್ಗೊಂಡು ಅದರ ಬಗ್ಗೆ ಮಾಹಿತಿ ಪಡೆಯಬೇಕೆಂದು ಶಿಬಿರಾಧಿಕಾರಿ ಶಂಕರಲಿಂಗಯ್ಯ ಕೋರಿದ್ದಾರೆ.
ಹುಳಿಯಾರು ಹೋಬಳಿಯ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದವತಿಯಿಂದ ನಂದಿಹಳ್ಳಿಯಲ್ಲಿ ಆಯೋಜಿಸಿರುವ 2011-12ನೇ ಸಾಲೀನ 7ದಿನಗಳ ಎನ್.ಎಸ್.ಎಸ್ ಶಿಬಿರದ 4ನೇ ದಿನವಾದ ಇಂದು(ತಾ.11) ಶನಿವಾರ ಮಧ್ಯಾಹ್ನ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ