ಸಮೀಪದ ಸೋರಲಮಾವು ಗ್ರಾಮದಲ್ಲಿ ಬಸವೇಶ್ವರ ಕಲಾ ಯುವಕ ಸಂಘ ಹಾಗೂ ಉದಯೋನ್ಮುಖ ಯುವಕ ಸಂಘದವರು ಆಯೋಜಿಸಿದ್ದ ವಾಲಿಬಾಲ್ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾಲಿಬಾಲ್,ಕಬ್ಬಡಿ,ಕೋಕೋ ಅಂತಹ ಗ್ರಾಮೀಣ ಕ್ರೀಡಾಕೂಟಗಳನ್ನು ಗ್ರಾಮಾಂತರ ಮಟ್ಟದಲ್ಲಿ ನಡೆಸುವ ಮೂಲಕ ಇಂದಿನ ಯುವ ಪೀಳಿಗೆಯವರು ಸಂಘಟನೆ ಹಾಗೂ ಸೌಹಾರ್ದತೆಯಿಂದ ಬದುಕುವುದನ್ನು ಕಲಿಯಿರಿ ಎಂದರು. ಹಳ್ಳಿಗಳಲ್ಲಿ ಜನ ವ್ಯವಸಾಯದಲ್ಲಿ ನಿರತರಾಗಿರುತ್ತಾರೆ,ಅವರಿಗೆ ಇಂತಹ ಗ್ರಾಮೀಣ ಕ್ರೀಡೆಗಳ ಬಗ್ಗೆ ತಿಳಿಸುವ ಮೂಲಕ ಅವರು ಪಾಲ್ಗೊಳ್ಳುವಂತೆ ಮಾಡುವ ಕಾರ್ಯ ಯುವಸಂಘಟನೆಗಳು ಮಾಡಬೇಕಿದೆ ಎಂದರು.ಟೂರ್ನಿಯಲ್ಲಿ ಪ್ರಥಮ ಬಹುಮಾನವನ್ನು ಬುಕ್ಕಸಾಗರ ತಂಡದವರು,ದ್ವೀತಿಯ ಬಹುಮಾನ ಸೋರಲಮಾವು ತಂಡದವರು ಪಡೆದಿದ್ದಾರೆ.
ತಹಶೀಲ್ದಾರ್ ಉಮೇಶ್ ಚಂದ್ರ ಕ್ರೀಡಾಕೂಟಕ್ಕೆ ಆಗಮಿಸಿದ್ದ ಕ್ರೀಡಾಪಟುಗಳಿಗೆ ಶುಭಹಾರೈಸಿದರು.ಉದಯೋನ್ಮುಖ ಸಂಘದ ಸದಸ್ಯರು ಸೇರಿದ್ದಂತೆ ಗುತ್ತಿಗೆದಾರ ಕಲ್ಲೇಶಣ್ಣ,ನಿರಂಜನಮುರ್ತಿ,ರಾಮಚಂದ್ರಯ್ಯ,ಸಿದ್ದಲಿಂಗ ಸ್ವಾಮಿ , ಹರ್ಷ.ಜಿತೇಂದ್ರ,ಶಿವು,ಗಂಗಾಧರ್ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ