ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಶ್ರೀಚನ್ನಬಸವೇಶ್ವರ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ತಮ್ಮದೇ ಆದ ಸುಪ್ತಚೇತನವನ್ನು ಹೊಂದಿದ್ದು,ಕ್ರೀಡೆ,ಸಂಗೀತ,ನೃತ್ಯ,ನಟನೆಯಂತ ಪಠ್ಯೇತರ ಚಟುವಟಿಕೆಗಳ ಕಡೆ ಅವರ ಒಲವಿರುತ್ತದೆ.ಇದನ್ನು ಅರಿತ ಪೋಷಕರು ಮತ್ತು ಶಿಕ್ಷಕರು ಅವರಿಗೆ ಉತ್ತಮ ಮಾರ್ಗವನ್ನು ತೊರಿಸಿದ್ದೇ ಆದರೆ ಆ ಮಗು ಉತ್ತಮ ನಟ,ನೃತ್ಯಗಾರ,ಕ್ರೀಡಾಪಟುವಾಗಿ ಹೊರಹುಮ್ಮುವ ಮೂಲಕ ಯಶಸ್ಸನ್ನು ಸಾಧಿಸುತ್ತಾನೆ ಎಂದರು. ಅಲ್ಲದೆ ಕೆಲ ಪೋಷಕರು ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡಬೇಕೆಂಬ ಹಂಬಲದಿಂದ ಮಗುವಿಗೆ ಇಷ್ಟವಿಲ್ಲದಿದ್ದರು ಬಲವಂತವಾಗಿ ಸೇರಿಸುತ್ತಾರೆ.ಅದರಿಂದ ಮಕ್ಕಳ ಮನಸ್ಸು ದುರ್ಬಲವಾಗಿ ಅವರು ಶಾಲೆಗಳನ್ನು ಬಿಟ್ಟುಬಿಡುತ್ತಾರೆ, ಮಕ್ಕಳ ಆಸಕ್ತಿಯಂತೆ ಅವರ ಸಾಮರ್ಥ್ಯಕ್ಕೆ ತಕ್ಕ ಕ್ಷೇತ್ರಗಳಲ್ಲಿ ಅವರನ್ನು ಬೆಳೆಸಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ಅಧ್ಯಕ್ಷ ರಮೇಶ್ ಮಾತನಾಡಿ ಸಚಿನ್,ಆಶ್ವಿನಿ ನಾಚಪ್ಪ, ಮಾಸ್ಟರ್ ಹಿರಣ್ಣಯ್ಯ ಇವರು ಯಾರು ಉನ್ನತ ಶಿಕ್ಷಣವನ್ನು ಪಡೆದು ಉತ್ತಮ ಸಾಧೆಯನ್ನೇನು ಮಾಡಿಲ್ಲ,ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕಠಿಣ ಅಭ್ಯಾಸದಿಂದ ಯಶಸ್ಸನ್ನು ಪಡೆದು ಇಡಿ ಭಾರತದ ಜನತೆಯ ಮನೆಮಾತಾಗಿದ್ದಾರೆ ಎಂದರು. ಗುರುಗಳು ಹಾಗೂ ತಂದೆ ತಾಯಿಗಳು ತೋರಿಸುವ ಉತ್ತಮ ಮಾರ್ಗಗಳಲ್ಲಿ ನಡೆದು ಹೆತ್ತವರಿಗೆ ಹಾಗೂ ನಮ್ಮದೇಶಕ್ಕೆ ಉತ್ತಮ ಪ್ರಜೆಗಳಾಗಿ ಬಾಳಿ,ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಗ್ರಾ.ಪಂ.ಅಧ್ಯಕ್ಷೆ ಚಂದ್ರಕಲಾ,ಸದಸ್ಯರಾದ ಬಸವರಾಜು,ರೇಣುಕಮ್ಮ,ಕುಮಾರ್,ಮಾಜಿ ಸದಸ್ಯೆ ಶಿವಮ್ಮ, ರೈತಸಂಘದ ಪರಿವರ್ತಕ ನಾಗಣ್ಣ, ಮುಖ್ಯಶಿಕ್ಷಕ ಕೋಟ್ಟುರಪ್ಪ,ಶಿಕ್ಷಕರಾದ ಜಯಣ್ಣ, ಕುಮಾರ್, ಗಜೇಂದ್ರ, ಶೈಲ, ಜ್ಯೋತಿ,ಭಾರತಿ,ಸುಮಾ ಹಾಗೂ ನಂದಿನಿ ಹಾಲು ಉತ್ಪಾದಕರ ಸಂಘದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ