ಹುಳಿಯಾರು ಹೋಬಳಿ ಗಾಣಧಾಳು ಗ್ರಾಮಪಂಚಾಯ್ತಿಯ ಜಿ.ಗೊಲ್ಲರಹಟ್ಟಿ(ಸೋಮನಹಳ್ಳಿ) ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ಕುಡಿಯುನ ನೀರಿನ ಯೋಜನೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು,ಕೊಡುವುದು ಪೋಷಕ ಹಾಗೂ ಶಿಕ್ಷಕರ ಕರ್ತವ್ಯವಾಗಿದೆ.ಪೋಷಕರು ತಮ್ಮ ಮಕ್ಕಳ ಮೇಲೆ ಪ್ರೀತಿಯನ್ನು ಹೊಂದಿರ ಬೇಕು ಅದರಂತೆ ಅವರಲ್ಲಿ ಉತ್ತಮಾಂಶಗಳು ಬೆಳೆಯುವ ರೀತಿಯಲ್ಲಿ ವಾತಾವರಣವನ್ನು ಸೃಷ್ಟಿಸಬೇಕು ಆಗ ಮಗು ತನ್ನಲ್ಲಿ ಉತ್ತಮ ಚಿಂತನೆ,ಆಲೋಚನೆಗಳನ್ನು ಮಾಡಿ ಮಹಾನ್ ವ್ಯಕ್ತಿಗಾಗಿ ಬೆಳೆಯುತ್ತಾನೆ ಎಂದರು. ಮಗುವಿಗೆ ಸ್ವಚ್ಚತೆ ಎಂಬುದು ತುಂಬಾ ಅವಶ್ಯ ಇದರಿಂದ ಮಗು ಉತ್ತಮ ಆರೋಗ್ಯದಿಂದಿರಲು ಸಹಕಾರಿಯಾಗುತ್ತದೆ, ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳ ಪ್ರಾರಂಭದಿಂದಾಗಿ ಅಲ್ಲಿನ ನವ ನವೀನತೆಗೆ ಪೋಷಕರು ಮಾರು ಹೋಗಿ ತಮ್ಮ ಮಕ್ಕಳನ್ನು ಸಾಲಸೋಲ ಮಾಡಿ ಆ ಶಾಲೆಗಳಿಗೆ ಕಳುಹಿಸುತ್ತಾರೆ. ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಸವಲತ್ತು ನೀಡುತ್ತಿದೆ. ಅದರಂತೆ ಸರ್ಕಾರಿ ಶಾಲೆಗಳಿಗೂ ಸರ್ಕಾರ ಹೆಚ್ಚಿನ ಬೋಧನ ಸಲಕರಣೆಗಳನ್ನು ಒದಗಿಸಿಕೊಡುತ್ತಿದ್ದು,ಇವುಗಳ ಸದುಪಯೋಗ ಪಡಿಸಿಕೊಂಡು ಶಿಕ್ಷಕರು ಮಕ್ಕಳಿಗೆ ಉತ್ತಮ ಹಾಗೂ ಚಿಂತನಾತ್ಮ ಶಿಕ್ಷಣವನ್ನು ನೀಡುವಲ್ಲಿ ಮುಂದಾಗಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಕಮ್ಮಿಯಿಲ್ಲ ಎಂಬುದನ್ನು ತೊರ್ಪಡಿಸಿ ಎಂದರು.
ಸನ್ಮಾನಿತರಾದ ಸಾಹುಕಾರ್ ಚನ್ನಬಸಪ್ಪನವರ ಮಗ ವಕೀಲ ಚನ್ನಬಸಪ್ಪ ಮಾತನಾಡಿ ಆಯಾ ಗ್ರಾಮಗಳ ಜನರು ಆಯಾ ಗ್ರಾಮಗಳ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ,ಅದರಲ್ಲಿಯೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ,ಇದರಿಂದ ಮಗು ಪ್ರತಿನಿತ್ಯ ತಂದೆ ತಾಯಿಗಳ ಜೊತೆ ಸೇರುತ್ತದೆ,ಯಾವುದೋ ದೂರದ ಊರುಗಳ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಅವರಿಗೆ ತಮ್ಮ ಪೋಷಕರ ಸಂಪರ್ಕವಿಲ್ಲದಂತೆ ಮಾಡಿ ಮಕ್ಕಳ ಮೃದು ಮನಸ್ಸಿನ ಮೇಲೆ ಪೋಷಕರೆ ಬರೆ ಎಳೆಯುತ್ತಿದ್ದಾರೆ ಎಂದರು.
ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆಯನ್ನು ನೆರವೇರಿಸಿದರು.ತಾ.ಪಂ.ಸದಸ್ಯ ವಸಂತಯ್ಯ ಸಮಾರಂಭದ ಉದ್ಘಾಟನೆ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್,ಶಿಕ್ಷಣ ಸಂಯೋಜಕರಾದ ವಿಜಯಕುಮಾರಿ,ಪರಿವೀಕ್ಷಕ ನರಸಿಂಹಮೂರ್ತಿ, ಸಿ.ಆರ್.ಪಿ ಪುಟ್ಟಮಾದಪ್ಪ,ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ರಂಗನಕೆರೆ ಮಹೇಶ್, ಜಿ.ಪಂ.ಸದಸ್ಯೆ ನಿಂಗಮ್ಮ ರಾಮಯ್ಯ,ಗ್ರಾ.ಪಂ.ಯ ಗುಂಡಯ್ಯ,ಕಲ್ಪನಾಬಾಯಿ,ಲಕ್ಷ್ಮಿದೇವಿ,ಶಿವಣ್ಣ,ಪಿ.ಎಲ್.ಡಿ.ಬ್ಯಾಂಕ್ ನ ನಟರಾಜು,ಮೋಹನ್ ಕುಮಾರ್, ಸಾವಯವ ಕೃಷಿಕ ಮಲ್ಲೇಶಯ್ಯ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಮಕ್ಕಳು , ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ