ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ , ಚಿ.ನಾ.ಹಳ್ಳಿ ತಾಲ್ಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ ಮತ್ತು ಹೋಬಳಿಯ ನವ ಚೇತನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಸಂಜೆ ನಡೆದ ರೈತಕೂಟ ಫಲಾನುಭವಿಗಳಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಭಾರತ ದೇಶದ ಬೆನ್ನೆಲುಬೇ ಕೃಷಿಯಾಗಿದ್ದು, ಪ್ರಸ್ತುತ ಭಾರತದಲ್ಲಿ ಶೇ.65ರಷ್ಟು ಜನ ಕೃಷಿಯನ್ನೇ ಅವಲಂಭಿಸಿ ಕೃಷಿಕರಾಗಿದ್ದಾರೆ. ಇತರ ರಾಷ್ಟ್ರಗಳ ಸಾಲಿನಲ್ಲಿ ನಮ್ಮ ದೇಶ ಆಗ್ರಸ್ಥಾನದಲ್ಲಿದೆ . ಹಾಗಿದ್ದೂ ಸಹ ಬದಲಾಗುತ್ತಿರುವ ಜಗತ್ತಿನಲ್ಲಿ ಕೃಷಿಯನ್ನು ನಂಬಿಕೂರುವುದು ಕಷ್ಟಕರ.ಅದರೂ ಕೂಡ ಕೃಷಿಯನ್ನು ಕೈಬಿಡದೆ ಅದರಲ್ಲಿನ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ಯಶಸ್ಸು ಸಾಧಿಸಬೇಕು ಎಂದು ರೈತರಿಗೆ ಕಿವಿಮಾತು ಹೇಳಿದರು. ಯಾರು ಎಷ್ಟೆಲ್ಲಾ ಆದಾಯ ಗಳಿಸಿದರು ಹಸಿವು ನೀಗಿಸಲು ಕೃಷಿ ಬೇಕು, ಕೃಷಿಯ ರೀತಿನೀತಿಗಳು ಬದಲಾಗುತ್ತೆ ಹೊರತು ಕೃಷಿ ಯಾವುದೇ ಕಾಲಕ್ಕೂ ಬದಲಾಗುವುದಿಲ್ಲ ಎಂದರು.
ಇಂದು ಶ್ರೀಮಂತರು ತೆರಿಗೆಯಿಂದ ತಪ್ಪಿಸಿಕೊಳ್ಳಲು ಕೃಷಿಯ ಮೊರೆ ಹೋಗುತ್ತಾರೆ.ಕಾರಣ ಕೃಷಿಯಿಂದ ಬಂದ ಆದಾಯ ತೆರಿಗೆ ವಿನಾಯಿತಿಯನ್ನು ಹೊಂದಿರುತ್ತದೆ. ಇಂದು ರೈತ ತನ್ನ ಜಮೀನನ್ನು ಇನ್ನೊಬ್ಬರಿಗೆ ಕೊಟ್ಟು, ಅದೇ ಜಮೀನಿನಲ್ಲಿ ಮೂರನೇ ವ್ಯಕ್ತಿಯಾಗಿ ಕೂಲಿ ಕೆಲಸ ಮಾಡುತ್ತಿದ್ದಾನೆ.ಈ ರೀತಿ ಮಾಡದೆ ತಮ್ಮತಮ್ಮ ಜಮೀನಿನಲ್ಲೇ ವ್ಯವಸಾಯವನ್ನು ಮಾಡಿ,ಅದಕ್ಕೆ ಬೇಕಾದ ಸವಲತ್ತನ್ನು ಸರ್ಕಾರ ಒದಗಿಸಿ ಕೊಡುತ್ತದೆ. ಕಾನೂನುಗಳನ್ನು ತಿಳಿದು,ತಮ್ಮ ಹಕ್ಕನ್ನು ಪಡೆಯುವ ಮೂಲಕ ಪ್ರಗತಿಪರ ಹಾಗೂ ಪ್ರತಿಭಾವಂತ ರೈತರಾಗಿ ಎಂದು ಆಶಿಸಿದರು.
ರೈತರಿಗೆ ಕಾನೂನು ಅರಿವು ಏಕೆ ಬೇಕು? : ಜಗತ್ತಿಗೆ ಅನ್ನ ಕೊಡುವವನು ಕೃಷಿಕ, ಇತ ತಾನು ಬೆಳೆದ ಬೆಳೆಗೆ ಉತ್ತಮ ಬೆಲೆಯನ್ನು ಪಡೆಯಲು, ಮಧ್ಯವರ್ತಿಗಳ ಹಾವಳಿಯಿಂದ ತಪ್ಪಸಿ ಕೊಳ್ಳಲು,ನೌಕರಶಾಹಿ ವರ್ಗದವರ ಶೋಷಣೆಯಿಂದ ಪಾರಾಗಲು ಹಾಗೂ ನಮ್ಮ ಸಂವಿಧಾನದಲ್ಲಿ ಯಾವ ಕಾನೂನುಗಳು ರೈತರಿಗೆ ಉಪಯುಕ್ತವಾಗಿವೆ,ಅದರಿಂದ ನಾವು ಅಭಿವೃದ್ದಿ ಹೊಂದಬಹುದೆ, ಇಲ್ಲವೆ ಎಂಬುದನ್ನು ತಿಳಿಯಲು ಕಾನೂನಿನ ಅರಿವು ಬೇಕಿದೆ ಎಂದು ತಿಳಿಸಿದರು.
ವಕೀಲರಾದ ಕೆ.ಎಸ್.ಚಂದ್ರಶೇಖರ್ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಹಾಗೂ ವಕೀಲ ಜ್ಞಾನಮೂರ್ತಿ ಭೂ ಮಂಜೂರಾತಿ ಮತ್ತು ನೊಂದಣಿ ಕಾಯ್ದೆ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಾನಂದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಕೆ.ಎಂ.ರಾಜಶೇಖರ್,ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ನಿರ್ಮಲ,ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎ.ಜಿ.ಶಿಲ್ಪ, ಜಿಲ್ಲಾ ಎಸ್.ಬಿ.ಎಂ. ಬ್ಯಾಂಕ್ ನ ಮಾರ್ಗದರ್ಶಕ ಶ್ರೀನಿವಾಸ್, ಶಿರಾ ವಕೀಲ ಸಂಘದ ಅಧ್ಯಕ್ಷ ಮುರುಳೀಧರ್, ಶಿರಾ ನವಚೇತನ ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣಗುಪ್ತ,ನವ ಚೇತನ ಸಂಸ್ಥೆ ಕಾರ್ಯದರ್ಶಿ ಮಂಜುನಾಥ್ , ವಕೀಲರಾದ ಬಿ.ಕೆ. ಸದಾಶಿವು,ಚಂದ್ರಶೇಖರ್, ಷಡಾಕ್ಷರಿ,ವಿಶ್ವನಾಥ್, ರಮೇಶ್, ರಾಮಕೃಷ್ಣ ಸೇರಿದಂತೆ ಚಿ.ನಾ.ಹಳ್ಳಿ ವಕೀಲರ ಸಂಘದ ವಕೀಲರು ಹಾಗೂ ಸುತ್ತಮುತ್ತಲ ರೈತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ