ಹುಳಿಯಾರು ಹೋಬಳಿ ಕಂಪನಹಳ್ಳಿಯಲ್ಲಿ ಆಕಸ್ಮಿಕ ಬೆಂಕಿಗಾಹುತಿಯಾದ ಗುಡಿಸಲುಗಳಲ್ಲಿ ಅಳಿದುಳಿದ ಅವಶೇಷಗಳನ್ನು ಗಮನಿಸುತ್ತಿರುವ ಮಹಿಳೆ.
ಹುಳಿಯಾರು : ಸಮೀಪದ ಕಂಪನಹಳ್ಳಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 6 ಗುಡಿಸಲು ಸುಟ್ಟು ಕರಕಲಾದ ಘಟನೆ ಭಾನುವಾರ ರಾತ್ರಿ ಘಟಿಸಿದೆ. ಫೀರ್ ಸಾಬ್ ಎಂಬುವರ ಗುಡಿಸಲಿಗೆ ಮೊದಲು ಬೆಂಕಿ ತಾಗಿ ತದನಂತ ಬೆಂಕಿಯ ಕಾವು ಅಕ್ಕ ಪಕ್ಕದ ಸುಮಾರು 5 ಗುಡಿಸಲನ್ನು ಆವರಿಸಿದ್ದು, ಎಲ್ಲಾ ಗುಡಿಸಲುಗಳು ಭಸ್ಮವಾಗಿ ಹೋಗಿವೆ. ಷೇರ್ ಹುಸೇನ್ ಸಾಬ್,ಸೈಯ್ಯದ್,ಬಾಜಿ ಸಾಬ್, ಸೈಯ್ಯದ್ ಫೀರ್ ಸಾಬ್,ಭಾಗ್ಯಮ್ಮ ಎಂಬ ವ್ಯಕ್ತಿಗಳಿಗೆ ಸೇರಿದ್ದವು. ಈ ಅನಾಹುತದಲ್ಲಿ ಫೀರ್ ಸಾಬ್ ಅವರು ಮದುವೆಗಾಗಿ ತಂದಿದ್ದ ಸಾಮಗ್ರಿಗಳು ಸಂಪೂರ್ಣ ಸುಟ್ಟಿವೆ.ಅಲ್ಲದೆ ಷೇರ್ ಹುಸೇನ್ ಸಾಬ್ ಎಂಬುವರ ಗುಡಿಸಲಿನಲಿದ್ದ ಸುಮಾರು 5 ಸಾವಿರ ಹಣ ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ತಹಶೀಲ್ದಾರ್ ಉಮೇಶ್ಚಂದ್ರ,ಆರ್.ಐ,ಬಸವರಾಜು,ಗ್ರಾಮಲೆಕ್ಕಿಗ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ