ಸ್ವಸ್ತ ಸಮಾಜದ ನಿರ್ಮಾಣದಲ್ಲಿ ಸಾರ್ವಜನಿಕ ನೈರ್ಮಲ್ಯ ಮತ್ತು ವ್ಯಕ್ತಿಗತ ಆರೋಗ್ಯ ಎಂಬ ವಿಚಾರದ ಬಗ್ಗೆ ಒಟ್ಟು ೭ ದಿನಗಳ ಕಾಲ ನಡೆಯುತ್ತಿರುವ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾನವನ ಜೀವನದಲ್ಲಿ ಸ್ವಚ್ಚತೆ ತುಂಬಾ ಅಗತ್ಯ.ಸ್ವಚ್ಚತೆ ನಮ್ಮನ್ನು,ನಮ್ಮಪರಿವಾರವನ್ನು ಹಾಗೂ ಸುತ್ತಲಿನವರನ್ನು ಕಾಪಾಡುತ್ತದೆ.ಇಲ್ಲವಾದಲ್ಲಿ ಹಲವಾರು ರೋಗರುಜಿನೆಗಳ ಬಾಯಿಗೆ ಸಿಲುಕಿ ನರಳಬೇಕಾಗುತ್ತದೆ ಎಂದರು. ಜನರು ತಮ್ಮ ಬಗ್ಗೆ ಮಾತ್ರ ಮೊದಲು ಚಿಂತಿಸುತ್ತಾರೆ ಅದೇ ರೀತಿ ತಮ್ಮ ಅಜುಬಾಜಿನವರ ಬಗ್ಗೆ ಯೋಚಿಸಿ ಅವರು ನಮ್ಮಂತೆಯೇ ಎಂದು ಬಾವಿಸಿ,ಸಹಬಾಳ್ವೆ,ಸಹಕಾರದಿಮದ ಬಾಳಬೇಕಿದೆ ಎಂದು ಕಿವಿಮಾತು ಹೇಳಿದರು.ಇಂತಹ ಸಮಾರಂಭಗಳಿಗೆ ಜನರು ಬಾಗವಹಿಸದೆ ವಿಷಯದ ವಿನಿಮಯವಾಗುತ್ತಿಲ್ಲ,ಅದರಿಂದ ಜನರಲ್ಲಿ ಸ್ವಚ್ಚತೆ,ಅದರ ಬಗ್ಗೆ ಅರಿವು ಸಹ ಇಲ್ಲವೆಂದು ಮರುಗಿದರು.ಈ ಕಾಲೇಜಿನಲ್ಲಿ ಪ್ರತಿ ವರ್ಷ ಹುಳಿಯಾರಿನ ಸುತ್ತಲಿನ ಹಳ್ಳಿಗಳಿಗೆ ಶಿಬಿರವನ್ನ ಹಾಕಿಕೊಂಡು ಅಲ್ಲಿನ ಜನರಿಗೆ ಸ್ವಚ್ಚತೆಯಬಗ್ಗೆ ಅರಿವನ್ನುಂಟುಮಾಡುತ್ತಾ ಬಂದಿದ್ದಿರಾ, ಅದರಂತೆ ನಮ್ಮ ಗ್ರಾಮವನ್ನು ಸಹ ಮಾದರಿ ಗ್ರಾಮವನ್ನಾಗಿ ಮಾಡಿ ಎಂದು ಶಿಬಿರಾರ್ಥಿಗಳಲ್ಲಿ ಮನವಿ ಮಾಡಿದರು.
ಇದಕ್ಕೂ ಮುನ್ನ ಶಿಬಿರಾರ್ಥಿಗಳು ಹಾಗೂ ಶಿಬಿರದ ಅಧಿಕಾರಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ,ಅಲ್ಲಿನ ಪರಿಸರದ ವೀಕ್ಷಣೆ ಮಾಡಿದರು.ಪ್ರಾಚಾರ್ಯ ಎಂ.ಎನ್.ನಾರಗಾಜು ಅಧ್ಯಕ್ಷತೆವಹಿಸಿದ್ದರು,ಜಿ.ಪಂ.ಸದಸ್ಯೆ ಮಂಜುಳಮ್ಮ,ಗ್ರಾ.ಪಂ.ಸದಸ್ಯೆ ರೇಣುಕಮ್ಮ,ಹಿರಿಯ ಉಪನ್ಯಾಸಕ ಮೂಗೇಶಪ್ಪ,ಇಬ್ರಾಹಿಂ,ಶಿಬಿರಾಧಿಕಾರಿ ಶಂಕರಲಿಂಗಯ್ಯ, ಎಸ್,ಡಿ,ಎಂ,ಸಿಯ ಜಲಾಲ್ ಸಾಬ್,ರಂಗನಕೆರೆ ಮಹೇಶ್ ಗ್ರಾಮಸ್ಥರಾದ ಬಸವರಾಜು,ಜಯಪ್ಪ,ಗಂಗಯ್ಯ,ರಾಮಯ್ಯ ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದ ಸಮಾರಭದಲ್ಲಿ ದಿವ್ಯ ಪ್ರಾರ್ಥಿಸಿ,ಅಫ್ರೀದಿ ನಿರೂಪಿ,ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ