ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕನಕಪತ್ತಿನ ಸಹಕಾರದಲ್ಲಿ ಮೂರು ಕೋಟಿ ವ್ಯವಹಾರ,ಉತ್ತಮ ಲಾಭಾಂಶ

ಹುಳಿಯಾರಿನ ಶ್ರೀಕನಕ ಪತ್ತಿನ ಸಹಕಾರ ಸಂಘದ 2011-12 ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆಯ ಉದ್ಘಾಟನೆಯಲ್ಲಿ ಸಂಘದ ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ, ನಿರ್ದೇಶಕರಾದ ಕೆಚ್. ಆಶೋಕ್, ಎನ್.ಬಿ.ಗವಿರಂಗಯ್ಯ,ಎಸ್.ಜಿ.ಶಿವಣ್ಣ,ಶಿವಮ್ಮ,ಜಯಣ್ಣ ಇದ್ದಾರೆ. ಹೋಬಳಿಯ ಶ್ರೀಕನಕ ಪತ್ತಿನ ಸಹಕಾರ ಸಂಘದ 2011-12 ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆ ಭಾನುವಾರ ಸಂಘದ ಕಛೇರಿ ಆವರಣದಲ್ಲಿ ಸಂಘದ ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿದ ಸಂಘದ ನಿರ್ದೇಶಕ ಹೆಚ್. ಆಶೋಕ್ ಮಾತನಾಡಿ,ಇಂದು ಕನಕಪತ್ತಿನ ಸಹಕಾರ ಸಂಘ ಒಂದು ಉತ್ತಮ ಸ್ಥಾನದಲ್ಲಿದೆ ಎಂದರೆ ಅದಕ್ಕೆ ಕಾರಣ ಸಂಘದ ಸರ್ವ ಸದಸ್ಯರು.ಈ ಸಂಘ ಸುಮಾರು 600 ಸದಸ್ಯರನ್ನೊಳಗೊಂಡಿದೆ..ಆದರೆ ಸಂಘದ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಕೆಲವೇ ಮಂದಿ ಹಾಜರಿರುವುದು ನಮ್ಮ ಸಂಘದಲ್ಲಿ ಒಗ್ಗಟಿಲ್ಲವೇನೂ ಅನಿಸುತ್ತದೆ. ಸಭೆಯಲ್ಲಿ ನಡೆಯುವಂತಹ ಕಾರ್ಯಗಳ ಬಗ್ಗೆ ಹಾಗೂ ತೆಗೆದು ಕೊಳ್ಳುವ ತೀರ್ಮಾನ ಸರಿಯೋ,ತಪ್ಪೋ ಎಂಬುದನ್ನು ತಿಳಿದು,ಸಲಹೆಗಳನ್ನು ನೀಡಲು ಸದಸ್ಯರುಗಳು ಮುಂದೆ ಬರಬೇಕಿದೆ ಅದಕ್ಕಾಗಿ ದಿನನಿತ್ಯ ಸಂಘದ ಕಛೇರಿಗೆ ಬರದೇ ಹೋದರು ಸಹ ಇಂತಹ ಸಭೆಗಳಿಗೆ ಬಂದು ಕಾರ್ಯಕಾರಿ ಮಂಡಳಿಯ ಆಡಳಿತದ ಏರಿಳಿತಗಳ ಬಗ್ಗೆ ಕೇಳುವಂತಾಗಿ ಎಂದರು. ಸಂಘದ ಅಧ್ಯಕ್ಷರಾದ ವೈ.ಸಿ.ಸಿದ್ದರಾಮಯ್ಯನವರು ಬೈಲಾತಿದ್ದುಪಡಿಗೆ ಅನುಮೋದನೆ ನೀಡಿ,ಸಂಘ ಸ್ಥಾಪನೆಯಾಗಿ ಎರಡು ವ...

ಇಂದು(ತಾ.26) ಸ್ವಯಂಪ್ರೇರಿತ ರಕ್ತದಾನ ಶಿಬಿರ

ಹೋಬಳಿಯ ರೋಟರಿ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸಮೃದ್ಧ ಜೀವನ್ ಫೌಂಡೇಶನ್ ಸಂಸ್ಥೆಯವರು ಪಟ್ಟಣದ ರೋಟರಿ ಬಾಲಭವನದಲ್ಲಿ ಇಂದು(ತಾ.26)ಬುಧವಾರ ಬೆಳಿಗ್ಗೆ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಶಿಬಿರವು ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ ನಡೆಯಲಿದ್ದು ಎಲ್ಲಾ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವದ ಜೀವ ಉಳಿಸುವ ಕಾರ್ಯಕ್ಕೆ ಕೈಜೋಡಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಿ.ಸತೀಶ್(9141586563),ಕೆ.ಶಾಂತಪ್ಪ(9844864396),ಈ.ರವೀಶ್(9448533976),ಕೆ.ಎಸ್.ರಮೇಶ್(9740201822) ಅವರನ್ನು ಸಂಪರ್ಕಿಸಲು ಕೋರಲಾಗಿದೆ.

ತಾಯಿ ಎದೆಹಾಲು ಎಲ್ಲಕಿಂತ ಅಮೂಲ್ಯ : ವೈದ್ಯೆ ಚಂದನ

ಹುಳಿಯಾರು ಹೋಬಳಿ ಗಾಣಧಾಳು ಗ್ರಾ.ಪಂ.ಯ ಸೋಮೇನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಹಿಳೆ ಹಾಗೂ ಮಕ್ಕಳ ಅಭಿವೃದ್ದಿ ಇಲಾಖೆಯವರು ನಡೆಸಿ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಶಿಶು ಮತ್ತು ಮಕ್ಕಳ ಕಲ್ಯಾಭಿವೃದ್ದಿ ಅಧಿಕಾರಿ ಅನೀಸ್ ಕೈಸರ್ ಉದ್ಘಾಟಿಸಿದರು.ಆಯುಶ್ ವೈದ್ಯೆ ಚಂದನ ,ತಾ.ಪಂ.ಸದಸ್ಯ ಆರ್.ಪಿ.ವಸಂತಯ್ಯ,ಎಸಿಡಿಪಿಓ ಪರಮೇಶ್ವರಪ್ಪ,ಗ್ರಾ.ಪಂ.ಯ ಲಕ್ಷ್ಮಿದೇವಿ,ಕಲ್ಪನಾಬಾಯಿ ,ಶಿಕ್ಷಕಿ ಸವಿತಾ,ಲಕ್ಷ್ಮಮ್ಮ ಇದ್ದಾರೆ. ಇಂದಿನ ಆಧುನಿಕ ಜಗತ್ತಿನಲ್ಲಿ ಜನರು ಕೆಲವೊಂದು ವಸ್ತುಗಳ ಮಹತ್ವವನ್ನು ಮರೆತಿದ್ದು,ಅವುಗಳಿಂದ ಆಗುವಂತ ಉತ್ತಮ ಪ್ರಯೋಜನಗಳನ್ನು ತಿಳಿಯದೇ ಹೋಗಿದ್ದಾರೆ.ಅಲ್ಲದೆ ಹಿಂದಿನ ಅನೇಕ ಮಹಿಳೆಯರಿಗೆ ತಾಯಿತನ ಹಾಗೂ ತಾಯಿ ಎದೆಹಾಲಿನ ಅಮೂಲ್ಯತೆ ತಿಳಿದೇ ಹೋಗಿರುವ ಸನ್ನಿವೇಶದಲ್ಲಿ ಎದೆ ಹಾಲೇ ಅಮೂಲ್ಯವೆಂದು ಆಯುಶ್ ವೈದ್ಯೆ ಚಂದನ ತಿಳಿಸಿದರು. ಹುಳಿಯಾರು ಹೋಬಳಿ ಗಾಣಧಾಳು ಗ್ರಾ.ಪಂ.ಯ ಸೋಮೇನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಹಿಳೆ ಹಾಗೂ ಮಕ್ಕಳ ಅಭಿವೃದ್ದಿ ಇಲಾಖೆಯವರು ನಡೆಸಿ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ತಾಯಿ ಎದೆಹಾಲಿನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ತಾಯಿಯ ಎದೆಹಾಲು ಅಮೃತಕ್ಕೆ ಸಮನಾದುದು ಎದೆಹಾಲಿನಲ್ಲಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಬೇಕಾಗುವಂತಹ ಅನೇಕ ಅಂಶಗಳು ಇದ್ದು,ಮಗು ದಷ್ಟ-ಪುಷ್ಟವಾಗಿ ಬೆಳೆಯಲು ಸಹಕಾರಿಯಾಗಿರುತ್ತದೆ.ಪ್ರತಿಯೊಬ್ಬ ವೈದ್ಯರು ಸಹ ಎದೆಹಾಲಿನ ಮಹತ್ವವನ್ನು ಒತ್ತಿ ಹೇಳುತ್ತಾ...

ಪೋಟೊ ಕ್ಯಾಪ್ಷನ್

ಹುಳಿಯಾರು ಹೋಬಳಿ ಗಾಣಧಾಳು ಗ್ರಾಮದ ಶ್ರೀಶಿವಲಿಂಗೇಶ್ವರಸ್ವಾಮಿ ಸನ್ನಿಧಿಯಲ್ಲಿ ನಡೆದ ಮಾಸಿಕ ಕನ್ನಡ ಕವಿಕಾವ್ಯ ಪರಿಚಯ ಮಾಲೆ-1 ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಜಿ.ಎಸ್.ರಾಮಣ್ಣ ಅವರನ್ನು ಸನ್ಮಾನಿಸಲಾಯಿತು.ಮಲ್ಲೇಶಣ್ಣ,ಹಿರಿಯ ಚಂದ್ರಣ್ಣ,ವಕೀಲ ಜಿ.ಎಸ್.ಚನ್ನಬಸಪ್ಪ, ಜಿ.ಎಂ.ನೀಲಕಂಠಯ್ಯ,ನಾರಾಯಣಪ್ಪ ಇದ್ದಾರೆ.   ಹುಳಿಯಾರು ಹೋಬಳಿ ಗಾಣಧಾಳು ಸಮೀಪದ ವಿಶ್ವಭಾರತಿ ಪ್ರೌಢಶಾಲೆಯಲ್ಲಿ ತಾ.ಪಂ.ಸದಸ್ಯ ಆರ್.ಪಿ.ವಸಂತಯ್ಯ ಉಚಿತ ಸೈಕಲ್ ವಿತರಿಸಿದರು.ಗ್ರಾ.ಪಂ.ಅಧ್ಯಕ್ಷೆ ನೇತ್ರಾವತಿ,ಗ್ರಾ.ಪಂ.ಮಾಜಿ ಸದಸ್ಯ ಜಯದೇವಪ್ಪ,ಮುಖ್ಯ ಶಿಕ್ಷಕ ನಾಗರಾಜು,ಗ್ರಾ.ಪಂ.ಸದಸ್ಯ ಗುಂಡಯ್ಯ ಗ್ರಾಮಸ್ಥರಾದ ನೀಲಕಂಠಯ್ಯ ಹಾಗೂ ಇತರರು .

ಟಿ.ಬಿ.ಜಯಚಂದ್ರ ಅವರ 63ನೇ ಹುಟ್ಟು ಹಬ್ಬದ ಅಂಗವಾಗಿ

      ಶಾಸಕ ಟಿ.ಬಿ.ಜಯಚಂದ್ರ ಅವರ 63ನೇ ಹುಟ್ಟು ಹಬ್ಬದ ಅಂಗವಾಗಿ ಹುಳಿಯಾರಿನ ಕಾಂಗ್ರೇಸ್ ಕಾರ್ಯಕರ್ತರು ಎಂಪಿಎಸ್ ಶಾಲಾವರಣಾದಲ್ಲಿ ನಡೆದ ಕ್ರಿಡಾಕೂಟದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಗ್ಲೂಕೋಸ್ ಹಾಗೂ ಹಣ್ಣನ್ನು ವಿತರಿಸಿದರು.    ಹುಳಿಯಾರಿನ ಕಾಂಗ್ರೇಸ್ ಕಾರ್ಯಕರ್ತರು ಶಾಸಕ ಟಿ.ಬಿ.ಜಯಚಂದ್ರ ಅವರ ಜನ್ಮದಿನದ ಅಂಗವಾಗಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು,ಬ್ರೇಡ್ ಹಾಗೂ ಹಣ್ಣು ವಿತರಿಸಿದರು.

ಜೋಡಿ ಲಕ್ಷ್ಮಿ

ಹುಳಿಯಾರಿನಲ್ಲಿ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಅನೇಕ ಮನೆಗಳಲ್ಲಿ ಲಕ್ಷ್ಮಿಯ ವಿಗ್ರಹವನ್ನು ಶೃಂಗರಿಸಿ ಪೂಜೆ ಸಲ್ಲಿಸಿದರು. ಭಕ್ತರೊಬ್ಬರ ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಜೋಡಿ ಲಕ್ಷ್ಮಿಯ ವಿಗ್ರಹ ನೋಡುಗರ ಗಮನ ಸೆಳೆಯಿತು.

ಸರ್ಕಾರದ ಸುವರ್ಣಭೂಮಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ:ತಾ.ಪಂ.ಅಧ್ಯಕ್ಷ ಸೀತಾರಾಂ

 ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಕೃಷಿ ಇಲಾಖೆಯ ಸುವರ್ಣಭೂಮಿ ಯೋಜನೆಯಡಿ ಫಲಾನುಭವಿಗಳನ್ನು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಂ ಅವರು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಿದರು.ನೋಡೆಲ್ ಅಧಿಕಾರಿ ಆನಂದ್ ,ಜಿ.ಪಂ.ಸದಸ್ಯರಾದ ಮಂಜುಳಮ್ಮ,ನಿಂಗಮ್ಮ, ತಾ.ಪಂ.ಸದಸ್ಯರಾದ ನವೀನ್,ವಸಂತಯ್ಯ ಇದ್ದಾರೆ. ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕೃಷಿ ಇಲಾಖೆಯವರು ನಡೆಸಿದ 2012-13 ನೇ ಸಾಲಿನ ಸುವರ್ಣಭೂಮಿ ಯೋಜನೆಯಡಿ ಲಾಟರಿ ಮೂಲಕ ಅರ್ಹಫಲಾನುಭವಿಗಳ ಆಯ್ಕೆಯ ಸಮಾರಂಭವನ್ನು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಂ ಉದ್ಘಾಟಿಸಿದರು.ನೋಡೆಲ್ ಅಧಿಕಾರಿ ಆನಂದ್ ,ಜಿ.ಪಂ.ಸದಸ್ಯರಾದ ಮಂಜುಳಮ್ಮ,ನಿಂಗಮ್ಮ, ತಾ.ಪಂ.ಸದಸ್ಯರಾದ ನವೀನ್,ವಸಂತಯ್ಯ ಇದ್ದಾರೆ. ಸರ್ಕಾರದಿಂದ ರೈತರಿಗಾಗಿ ಅನೇಕ ಯೋಜನೆಗಳಿದ್ದು,ಅಂತಹ ಯೋಜನೆಗಳಲ್ಲಿ ಈ ರ್ಸುವರ್ಣಭೂಮಿ ಯೋಜನೆಯು ಸಹ ಒಂದಾಗಿದೆ ಇದರಿಂದ ಸಿಗುವಂತಹ ಹಣದ ಸದುಪಯೋಗವನ್ನು ರೈತರು ಮಾಡಿಕೊಳ್ಳಬೇಕಿದೆ ಎಂದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಂ ತಿಳಿಸಿದರು. ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕೃಷಿ ಇಲಾಖೆಯವರು ನಡೆಸಿದ 2012-13 ನೇ ಸಾಲಿನ ಸುವರ್ಣಭೂಮಿ ಯೋಜನೆಯಡಿ ಲಾಟರಿ ಮೂಲಕ ಅರ್ಹಫಲಾನುಭವಿಗಳ ಆಯ್ಕೆಯ ಸಮಾರಂಭದ ಉದ್ಘಾಟನೆ ನೆರವೇರಿಸಿದ ಅವರು ಮಾತನಾಡಿದರು. ರಾಜ್ಯಾದಂತ ತೀವ್ರ ಬರಗಾಲ ತಲೆದೂರಿದ್ದು ರೈತರು ಒಂದು ಹೊತ್ತಿನ ಅನ್ನಕ್ಕೂ ಪರಿತಪಿಸುವಂತಾಗಿದೆ.ಅಲ್ಲದೆ ತಮ್ಮ ಜಾನುವಾರು...