ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಕೃಷಿ ಇಲಾಖೆಯ ಸುವರ್ಣಭೂಮಿ ಯೋಜನೆಯಡಿ ಫಲಾನುಭವಿಗಳನ್ನು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಂ ಅವರು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಿದರು.ನೋಡೆಲ್ ಅಧಿಕಾರಿ ಆನಂದ್ ,ಜಿ.ಪಂ.ಸದಸ್ಯರಾದ ಮಂಜುಳಮ್ಮ,ನಿಂಗಮ್ಮ, ತಾ.ಪಂ.ಸದಸ್ಯರಾದ ನವೀನ್,ವಸಂತಯ್ಯ ಇದ್ದಾರೆ.
ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕೃಷಿ ಇಲಾಖೆಯವರು ನಡೆಸಿದ 2012-13 ನೇ ಸಾಲಿನ ಸುವರ್ಣಭೂಮಿ ಯೋಜನೆಯಡಿ ಲಾಟರಿ ಮೂಲಕ ಅರ್ಹಫಲಾನುಭವಿಗಳ ಆಯ್ಕೆಯ ಸಮಾರಂಭವನ್ನು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಂ ಉದ್ಘಾಟಿಸಿದರು.ನೋಡೆಲ್ ಅಧಿಕಾರಿ ಆನಂದ್ ,ಜಿ.ಪಂ.ಸದಸ್ಯರಾದ ಮಂಜುಳಮ್ಮ,ನಿಂಗಮ್ಮ, ತಾ.ಪಂ.ಸದಸ್ಯರಾದ ನವೀನ್,ವಸಂತಯ್ಯ ಇದ್ದಾರೆ.
ಸರ್ಕಾರದಿಂದ ರೈತರಿಗಾಗಿ ಅನೇಕ ಯೋಜನೆಗಳಿದ್ದು,ಅಂತಹ ಯೋಜನೆಗಳಲ್ಲಿ ಈ ರ್ಸುವರ್ಣಭೂಮಿ ಯೋಜನೆಯು ಸಹ ಒಂದಾಗಿದೆ ಇದರಿಂದ ಸಿಗುವಂತಹ ಹಣದ ಸದುಪಯೋಗವನ್ನು ರೈತರು ಮಾಡಿಕೊಳ್ಳಬೇಕಿದೆ ಎಂದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಂ ತಿಳಿಸಿದರು.
ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕೃಷಿ ಇಲಾಖೆಯವರು ನಡೆಸಿದ 2012-13 ನೇ ಸಾಲಿನ ಸುವರ್ಣಭೂಮಿ ಯೋಜನೆಯಡಿ ಲಾಟರಿ ಮೂಲಕ ಅರ್ಹಫಲಾನುಭವಿಗಳ ಆಯ್ಕೆಯ ಸಮಾರಂಭದ ಉದ್ಘಾಟನೆ ನೆರವೇರಿಸಿದ ಅವರು ಮಾತನಾಡಿದರು.
ರಾಜ್ಯಾದಂತ ತೀವ್ರ ಬರಗಾಲ ತಲೆದೂರಿದ್ದು ರೈತರು ಒಂದು ಹೊತ್ತಿನ ಅನ್ನಕ್ಕೂ ಪರಿತಪಿಸುವಂತಾಗಿದೆ.ಅಲ್ಲದೆ ತಮ್ಮ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ, ಮೇವಿಲ್ಲದೆ ಖಾಸಾಯಿಖಾನೆಗೆ ಹಟ್ಟುತ್ತಿದ್ದಾರೆ.ಅಲ್ಲದೆ ಜನ ಸಾಕಷ್ಟು ತೊಂದರೆಯಲ್ಲಿ ಸಿಲುಕಿದ್ದಾರೆ ಇಂತಹ ಅನೇಕ ಸಮಸ್ಯೆಗಳನ್ನು ಮನಗಂಡ ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಿ,ಸ್ವಸಹಾಯ ಸಂಘಗಳ ರಚನೆ ಮಾಡಿ ಅವುಗಳ ಮೂಲಕ ಜನರಿಗೆ ಸಹಾಯಧನವನ್ನು ನೀಡುತ್ತಿದೆ.ಜೋತೆಗೆ ಅರ್ಹ ರೈತರಿಗೆ ಸಹಾಯ ಧನ ವಿತರಣೆಯನ್ನು ಮಾಡುತ್ತಿದೆ ಎಂದರು. ಸುವರ್ಣಭೂಮಿ ಯೋಜನೆಯಡಿ ಸಿಗುವಂತಹ ಹಣವನ್ನು ಪೋಲುಮಾಡದೆ ಬಳಸಿಕೊಳ್ಳಿ ಎಂದರು.
ಅರ್ಹಫಲಾನುಭವಿಗಳ ಆಯ್ಕೆಯು ಲಾಟರಿ ಮೂಲಕ,ರೈತರ ಸಮ್ಮುಖದಲ್ಲಿ ನಡೆದಿದ್ದು ಹುಳಿಯಾರು ಹೋಬಳಿಯಲ್ಲಿ ಸಾಕಷ್ಟು ಅರ್ಜಿಗಳು ಬಂದಿದ್ದು,ಅವುಗಳಲ್ಲಿ ಪರಿಶಿಷ್ಟ ಜಾತಿ,ಪಂಗಡ ಹಾಗೂ ಸಾಮಾನ್ಯ ವರ್ಗದ ಮಹಿಳೆಯರು ಮತ್ತು ಪುರುಷರಿಗೆ ಸರ್ಕಾರದ ನಿಯಮಾನುಸಾರ ಫಲಾನುಭವಿಗಳನ್ನು ಆಯ್ಕೆಮಾಡುತ್ತಿರುವುದಾಗಿ ಕೃಷಿ ಸಹಾಯಕ ನೂರುಲ್ಲಾ ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾಪಂಚಾಯ್ತಿ ಸಹಾಯಕ ಇಂಜಿನಿಯರ್ ಆನಂದ್,ತಾ.ಪಂ.ಉಪಾಧ್ಯಕ್ಷೆ ಬೀಬೀ ಫಾತೀಮ, ಜಿ.ಪಂ.ಸದಸ್ಯರಾದ ಮಂಜುಳಮ್ಮ,ನಿಂಗಮ್ಮ,ತಾ.ಪಂ.ಸದಸ್ಯರಾದ ನವೀನ್,ವಸಂತಯ್ಯ.ಕೃಷಿ ಇಲಾಖೆಯ ತಿಪ್ಪೇಸ್ವಾಮಿ,ಶಿವಣ್ಣ,ಕೃಷಿಕ ಸಮಾಜದ ಮಹೇಶ್ ,ತೋಟಗಾರಿಕೆ ಇಲಾಖೆಯ ಹರ್ಷ.ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ