ದಾವಣಗೆರೆಗೆ ತೆರಳುತ್ತಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಮಾರ್ಗ ಮಧ್ಯೆ ಹುಳಿಯಾರಿನ ಹಿಂದೂಪರ ಸಂಘಟಕರೊಂದಿಗೆ ಮಾತನಡಿದು.ಜೊತೆಗೆ ಸಂಘಟಕರು ಅಭಿನಂದನೆ ಸಲ್ಲಿಸಿದರು.
ಪಸ್ತುತದಲ್ಲಿ ನಾವು ಗಮನಿಸಿದಂತೆ ನಮ್ಮ ಅನೇಕ ಟಿ.ವಿ ಚಾನಲ್ ಗಳು ಹಾಗೂ ಚಲನಚಿತ್ರಗಳಲ್ಲಿ ನಮ್ಮ ಹಿಂದೂ ದೇವರುಗಳ ಪಾತ್ರಗಳನ್ನು ನಟಿಸುತ್ತಾ ಹಿಂದೂ ದೇವತೆಗಳ, ಸಂಸ್ಕೃತಿ ಹಾಗೂ ಸ್ವಾಮೀಜಿಗಳ ,ಸಂಘಟನೆಗಳ ಮೇಲೆ ದೃಶ್ಯ ಮಾಧ್ಯಮಗಳು ವ್ಯವಸ್ಥಿತ ಪ್ರಹಾರ ನಡೆಸುತ್ತಿದ್ದಾರೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದರು.
ದಾವಣಗೆರೆಯಲ್ಲಿ ನಡೆಯಲಿರುವ ಕಾರ್ಯಕರ್ತರ ಸಭೆಗೆ ತೆರಳುತ್ತಿದ್ದ ಅವರು ಮಾರ್ಗ ಮಧ್ಯೆ ಹುಳಿಯಾರಿನ ಹಿಂದೂ ಜಾಗರಣ ವೇದಿಕಕೆಯ ಹಾಗೂ ಶ್ರೀ ರಾಮ ಸೇನೆಯ ಸಂಘಟಕರೊಂದಿಗೆ ಕೆಲ ಕಾಲ ಮಾತನಾಡಿದರು.
ಸಿನಿಮಾ ಮಾಧ್ಯಮಗಳಲ್ಲಿ,ಧಾರವಾಹಿಗಳಲ್ಲಿ,ನಾಟಕಗಳಲ್ಲಿ,ಅಸಭ್ಯ,ಆಶ್ಲೀಲ ಪಾತ್ರಗಳನ್ನು ಅಭಿನಯಿಸುತ್ತಿದ್ದಾರೆ ಹಾಗೂ ಸಂಭಾಷಣೆಯನ್ನು ಬಳಸುತ್ತಿದ್ದು ಸಮಾಜದ ಮೇಲೆ ದುಷ್ಪರಿಣಾಮ ಬೀರುತಿವೆ,ಇದು ಉತ್ತಮ ಬೆಳವಣಿಗೆಯಲ್ಲ ಎಂದರು.ದೃಶ್ಯ ಮಾಧ್ಯಮಗಳಲ್ಲಿ ಅಸಭ್ಯ,ಆಶ್ಲೀಲತೆಯನ್ನು ತೋರಿಸಿದರೆ ಅದು ಕಾನೂನು ಬಾಹಿರವಾಗುತ್ತದೆ.ಅದರೂ ಕೆಲ ಚಾಲನ್ ಗಳಲ್ಲಿ ಇಂತಹ ದೃಶ್ಯಗಳು ಹೆಗ್ಗಿಲ್ಲದೆ ಬಿತ್ತರವಾಗುತ್ತಿವೆ.ತಿರುಪತಿ ತಿರುಮಲ ಎಂಬ ಹಿಂದೂ ದೇವರ ಹೆಸರನ್ನು ಅಪಹಾಸ್ಯವನ್ನಾಗಿ ಮಾಡಿ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದ್ದು,ಅದನ್ನು ತಾವು ವಿರೋಧಿಸಿದ್ದು,ನೂರಕ್ಕೂ ಹೆಚ್ಚು ಕಂಪ್ಲೇಂಟ್ ಳನ್ನು ಸೆನ್ ಸಾರ್ ಮಂಡಳಿಯವರಿಗೂ ನೀಡಲಾಗಿದೆ.ಇದನ್ನು ನಿಲ್ಲಿಸದೇ ಹೋದರೆ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಈ ರೀತಿಯ ಕೆಟ್ಟ ಪ್ರವೃತ್ತಿ ಹಿಂದೂ ಧರ್ಮದ ದೇವತೆಗಳ ಮೇಲೆ ಮಾತ್ರ ಆಗುತ್ತಿದೆ,ನಮ್ಮದೇಶದಲ್ಲಿ ಹಿಂದೂದೇವರುಗಳಂತೆ ಇತರ ಧರ್ಮಗಳ ದೇವರುಗಳಿವೆ ಅವುಗಳ ಬಗ್ಗೆ ಈ ರೀತಿ ತೋರಿಸುವುದಿಲ್ಲ ಯಾಕೆ? ಎಂದು ಪ್ರಶ್ನಿಸಿದರು. ಇಂದು ಎಲ್ಲಾ ಮಾಧ್ಯಮಗಳು ಒಂದೆಡೆಯಾಗಿ ಸಮಗ್ರ ವಿಷಯಗಳ ಸರಿ ತಪ್ಪುಗಳನ್ನು ಜನರ ಮುಂದಿಡುವ ಕಾರ್ಯ ಮಾಡಬೇಕಿದೆ ಎಂದರು.
ತಾ.ಪಂ.ಸದಸ್ಯ ಕೆಂಕೆರೆ ನವೀನ್,ಏಜೆಂಟ್ ಗಂಗಣ್ಣ,ಚುರುಮುರಿ ರಘು ಕುಮಾರ್,ಶ್ರೀಧರ್ ಅಂಬೇಕರ್,ರುದ್ರೇಶ್,ಭಗವಂತಾಚಾರ್ ,ರವಿ,ಗ್ರಾ.ಪಂ ಸದಸ್ಯ ಹೇಮಂತ್ ಸೇರಿದಂತೆ ಇತರರು ಇದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ