ಹುಳಿಯಾರಿನ ಬ್ರಹ್ಮಕುಮಾರೀ ಈಶ್ವರೀಯ ರಾಜಯೋಗ ಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ವೈದ್ಯರ ಹಾಗೂ ಪತ್ರಕರ್ತರ ದಿನಾಚರಣಾ ಸಮಾರಂಭದ ಉದ್ಘಾಟನೆಯನ್ನು ಹೋಬಳೀಯ ವೈದ್ಯರು ಹಾಗೂ ಪತ್ರಕರ್ತರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಹುಳಿಯಾರಿನ ಬ್ರಹ್ಮಕುಮಾರೀ ಈಶ್ವರೀಯ ವಿದ್ಯಾಲಯದ ರಾಜಯೋಗ ಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ವೈದ್ಯರ ಹಾಗೂ ಪತ್ರಕರ್ತರ ದಿನಾಚರಣಾ ಸಮಾರಂಭದಲ್ಲಿ ವಿದ್ಯಾಲಯದ ಗೀತಕ್ಕ ಪ್ರಾಸ್ತಾವಿಕ ನುಡಿನುಡಿದರು.
ಇಂದು ನಮ್ಮ ದೇಶದಲ್ಲಿ ಸಾಕಷ್ಟು ವೈದ್ಯಕೀಯ ವಿದ್ಯಾಲಯಗಳಿದ್ದು,ಪ್ರತಿ ವರ್ಷ ಸಾವಿರಾರು ಮಂದಿ ವೈದ್ಯಕೀಯ ವಿಷಯದಲ್ಲಿ ಅಧ್ಯಯನ ಮಾಡುವ ಮೂಲಕ ವೈದ್ಯ ವೃತ್ತಿಯನ್ನು ಪ್ರಾರಂಭಿಸುತ್ತಿದ್ದಾರೆ. ಆದರೆ ಇಂದಿನ ಅನೇಕ ವೈದ್ಯರು ತಮ್ಮ ವೃತ್ತಿಯನ್ನು ನಗರ ಪ್ರದೇಶ ಹಾಗೂ ವಿದೇಶಗಳಲ್ಲಿ ಮಾಡಲು ಮುಂದಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ವೈದ್ಯ ವೃತ್ತಿ ಮಾಡುವವರ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ವೈದ್ಯರ ಕೊರತೆಯಿದೆ ಎಂದು ಸಿದ್ದಶ್ರೀ ಕ್ಲಿನಿಕ್ ನ ಡಾ|| ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಹುಳಿಯಾರಿನ ಬ್ರಹ್ಮಕುಮಾರೀ ಈಶ್ವರೀಯ ರಾಜಯೋಗ ಭವನದಲ್ಲಿ ಜುಲೈ ಒಂದರ ಭಾನುವಾರ ಸಂಜೆ ಆಯೋಜಿಸಿದ್ದ ವೈದ್ಯರ ಹಾಗೂ ಪತ್ರಕರ್ತರ ದಿನಾಚರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಪ್ರತಿಯೊಬ್ಬ ಮಾನವನ ಜೀವನದಲ್ಲಿ ಸಂತೋಷದಿಂದ ಇರಬೇಕೆಂದರೆ,ಮೊದಲು ಆತನ ಆರೋಗ್ಯ ಉತ್ತಮವಾಗಿರಬೇಕು. ಅದಕ್ಕಾಗಿ ಮಾನವ ತನ್ನ ದೈಹಿಕ,ಮಾನಸಿಕ,ಆಧ್ಯಾತ್ಮಿಕ ಆರೋಗ್ಯದ ಕಡೆ ಹೆಚ್ಚು ಲಕ್ಷ್ಯವನ್ನಿಟ್ಟುಕೊಂಡಿರಬೇಕು ಎಂದರು.ಈಡಿ ನಮ್ಮ ದೇಶದಲ್ಲಿ ಹೆಚ್ಚಿನ ಹಾಗೂ ಪ್ರತಿಭಾವಂತ ವೈದ್ಯರಿರುವುದು ಕರ್ನಾಟಕದಲ್ಲಿ ಆಗಿದ್ದು ,ಅದು ನಮೆಲ್ಲರಿಗೂ ಹಾಗೂ ರಾಜ್ಯಕ್ಕೂ ಹೆಮ್ಮೆ ತರುವಂತಹ ಸಂಗತಿಯಾಗಿದೆ.ಇಂದು ಗಮನಿಸಿದರೆ ಬೆಂಗಳೂರಿಗೆ ನಾನಾ ರಾಜ್ಯಗಳು,ದೇಶಗಳಿಂದ ಜನರು ಬಂದು ತಮ್ಮ ಅನೇಕ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.ಬಿ.ಸಿ.ರಾಯ್ ಅವರ ಸ್ಮರಣಾರ್ಥ ಈ ವೈದ್ಯರ ದಿನಾಚರಣೆಯನ್ನು ಆಚರಿಸುತ್ತಿದ್ದು, ಪ್ರತಿ ವರ್ಷ ಸ್ನೇಹಿತರೊಂದಿಗೆ ನಮ್ಮ ದಿನಾಚರಣೆಯನ್ನು ಆಚರಿಸುತ್ತಿದ್ದೆವು,ಆದರೆ ಈ ಬಾರಿ ಬ್ರಹ್ಮಕುಮಾರೀ ಈಶ್ವರೀಯ ವಿದ್ಯಾಲಯದ ಗೀತಕ್ಕನವರು ನಮನ್ನೆಲ್ಲಾ ಆಹ್ವಾನಿಸಿ ದಿನಾಚರಣೆ ನಡೆಸಿದ್ದಾರೆ ಅವರಿಗೆ ನಮ್ಮ ವೈದ್ಯವೃಂದ ಪರವಾಗಿ ಕೃತಜ್ಞತೆಗಳನ್ನು ತಿಳಿಸಿದರು.
ಪತ್ರಕರ್ತ ಕಿರಣ್ ಮಾತನಾಡಿ ಇಂದು ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗಿದೆ.ಆದರೂ ಸಹ ತನ್ನ ಉತ್ಪಾದನೆಗೆ ತಗುಲುವ ಉತ್ಪಾದನ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ದೊರೆಯುವಂತಹದ್ದು ದಿನಪತ್ರಿಗಳು,ಪ್ರಸ್ತುತದಲ್ಲಿ ಒಂದು ಪತ್ರಿಕೆ ಮುದ್ರಣವಾಗಲು ೧೪ ರಿಂದ ೧೫ರೂ ವೆಚ್ಚವಾಗುತ್ತದೆ ಎಂದರು.ಇಂದು ಪತ್ರಿಕೆಯನ್ನು ಕೊಂಡು ಓದುವರ ಸಂಖ್ಯೆ ಕ್ಷಿಣಿಸಿದೆ.ಸಮಾಜಕ್ಕೆ ಹಾಗೂ ಜನರಿಗೆ ಅನುಕೂಲವಾಗುವಂತಹ ಅನೇಕ ವಿಚಾರಗಳು ಪತ್ರಿಕೆಯಿಂದ ಲಭ್ಯವಾಗುತ್ತವೆ.ಅನೇಕರು ಪತ್ರಿಕೆಯಲ್ಲೇನಿದೆ ಎನ್ನುತ್ತಾರೆ.ಪತ್ರಿಕೆ ಪ್ರಸ್ತುತ ಸಮಾಜಕ್ಕೆ,ಜನಜೀವನಕ್ಕೆ ಬೇಕಾದ ಅನೇಕಾನೇಕ ವಿಚಾರಗಳ ಕಣಜವಾಗಿದೆ ಎಂದರು.
ರೋಗಿಗಳು ವೈದ್ಯರೊಂದಿಗೆ ಉತ್ತಮ ಸಂಭಂದವನ್ನು ಹೊಂದಿರುವುದರ ಜೊತೆಗೆ ವೈದ್ಯರಿಗೆ ಸ್ಪಂದಿಸಿ ನಡೆಯಬೇಕಿದೆ ಎಂದು ಸ್ಪಂದನ ನರ್ಸಿಂಗ್ ಹೋಮ್ ನ ಡಾ||ಕೆ.ಎಚ್.ನಾಗರಾಜ್ ತಿಳಿಸಿದರು.ಸಮಾರಂಭದಲ್ಲಿ ಚನ್ನಬಸವೇಶ್ವರ ಆಸ್ಪತ್ರೆಯ ಡಾ||ಕೆ.ಪಿ.ರಾಜಶೇಖರ್,ಡಾ||ರಾಜೇಂದ್ರ,ಡಾ||ಪ್ರೇಮನಾಗರಾಜ್,ಡಾ||ಚಂದ್ರದರ,ಡಾ||ಲಕ್ಷ್ಮಿ , ಪತ್ರಕರ್ತರಾದ ಹೆಚ್.ಎ.ರಮೇಶ್,ಆರ್.ಸಿ.ಮಹೇಶ್ ,ಬ್ರಹ್ಮಕುಮಾರೀ ಈಶ್ವರೀಯ ವಿದ್ಯಾಲಯದ ಗೀತಕ್ಕ, ಬ್ಯಾಂಕ್ ಮರುಳಯ್ಯ ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ