ಹುಳಿಯಾರು ಹೋಬಳಿ ಬೋರನಕಣಿವೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ರಾಮಕೃಷ್ಣಪ್ಪ ಮಕ್ಕಳಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿದರು.
ನಮ್ಮ ಭಾರತ ನೈಸರ್ಗಿಕವಾಗಿ ಸಮೃದ್ದಿಯಿಂದ ಕೂಡಿದ ದೇಶ,ಹೇರಳವಾದ ಆರಣ್ಯ ಸಂಪತ್ತನ್ನು ಹೊಂದಿದಂತಹ ನಮ್ಮ ನಾಡಿನಲ್ಲಿ ಮೊದಲು ಶೇಕಡ ೩೦ಕ್ಕೂ ಹೆಚ್ಚು ಪ್ರದೇಶದಲ್ಲಿದ್ದ ಅರಣ್ಯ ಇಂದು ಶೇ.೧೫ರಷ್ಟಾಗಿರುವುದರಿಂದ ಇಂದು ಮನುಷ್ಯನ ಬದುಕು ಅಪಾಯಕ್ಕಿಡಾಗಿದೆ. ಈ ತೊಂದರೆಯಿಂದ ಪಾರಾಗಬೇಕಾದರೆ ನಾವೆಲ್ಲರೂ ಆರಣ್ಯವನ್ನು ಸುಸ್ಥಿರವಾಗಿ ಬೆಳೆಸುವ ಕಲ್ಪನೆಯನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ರಾಮಕೃಷ್ಣಪ್ಪ ಅಭಿಪ್ರಾಯಪಟ್ಟರು.
ಹುಳಿಯಾರು ಹೋಬಳಿ ಬೋರನಕಣಿವೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್,ಜಿಲ್ಲಾ ಹಾಗೂ ತಾಲ್ಲೂಕು ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಆಂದೋಲನದಲ್ಲಿ "ಸುಸ್ಥಿರ ಜೀವನೋಪಾಯಕ್ಕೆ ಆರಣ್ಯ' ಎಂಬ ವಿಷಯದ ವಿಷೇಶ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರ ನಾಶದಿಂದ ಸಾಕಷ್ಟು ತೊಂದರೆಗಳು ಉಂಟಾಗುತ್ತಿರುವುದಕ್ಕೆ ಹಲವಾರು ನಿದರ್ಶನಗಳಿದ್ದು.ಇದೇ ರೀತಿ ಪರಿಸರ ನಾಶವಾದರೆ ಮನುಕುಲವೇ ನಶಿಸಿ ಹೋಗುವ ಕಾಲ ಬರುವ ಸಾಧ್ಯತೆಗಳಿವೆ ಎಂದರು.ಅಲ್ಲದೆ ಪರಿಸರವನ್ನು ನಾವು ಉಳಿಸಿ,ಪೋಷಿಸಿದರೆ ಅದು ನಮ್ಮನ್ನು ಹಾಗೂ ನಮ್ಮ ಮುಂದಿನ ಪೀಳಿಗೆಯವನ್ನು ಕಾಯುತ್ತದೆ ಎಂದಉ ತಿಳಿಸಿದರು.
ಪರಿಸರ ಜಾಗೃತಿ ಆಂದೋಲನದ ಅಂಗವಾಗಿ ಚಿತ್ರಕಲಾ ಸ್ಪರ್ಧೆ,ಪ್ರಬಂಧ ಸ್ಪರ್ಧೆ,ಭಾಷಣಗಳನ್ನು ನಡೆಸಿ ವಿಜೇತರಿಗೆ ಬಹುಮಾನವಿತರಣೆ ನೆರವೇರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಾಚಾರ್ಯ ಕೆ.ರಂಗನಾಥ ಮಾತನಾಡಿ ಇಂದು ಮರ ಕಡಿದ ಜಾಗದಲ್ಲಿ ಹತ್ತು ಮರಗಳನ್ನು ನೆಡುವಂತಹ ಕಾರ್ಯ ನಡೆಯಬೇಕಿದೆ, ಇಂದಿನ ವಿದ್ಯಾರ್ಥಿಗಳು ಪರಿಸರದ ಮಹತ್ವವನ್ನು ತಿಳಿದು ತಮ್ಮ ಮನೆ ಹಾಗೂ ಅಜುಬಾಜಿನ ಜನರಿಗೆ ಪರಿಸದ ಮಹತ್ವವನ್ನು ತಿಳಿಸುವ ಮೂಲಕ ಪರಿಸರ ಸಂರಕ್ಷಣಾ ಕಾರ್ಯವನ್ನು ಮಾಡಿ ಎಂದರು.
ಸಮಾರಂಭದಲ್ಲಿ ಮುಖ್ಯಶಿಕ್ಷಕಿ ಎಸ್.ಮಂಜುಳಮ್ಮ ಅಧ್ಯಕ್ಷತೆ ವಹಿಸಿದ್ದರು.ವಿಜ್ಞಾನ ಕೇಂದ್ರದ ಸಂಚಾಲಕ ರಮೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು.ಶ್ರೀಲಕ್ಷ್ಮಿ ನಿರೂಪಿಸಿ,ಹಿರಿಯ ಶಿಕ್ಷಕ ಮೈಲಾರಪ್ಪ ಸ್ವಾಗತಿಸಿ,ಪ್ರಮೀಳಾ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ