ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದ ಯುವನಿಕ ಕ್ರಿಡಾಂಗಣದಲ್ಲಿ ಶ್ರೀಚನ್ನಬಸವೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಿರುವ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಇಂದು(ತಾ.21) ಶನಿವಾರ ಹಾಗೂ ಭಾನುವಾರ ನಡೆಯಲಿದೆ.
ಟೂರ್ನಿಯಲ್ಲಿ ಪ್ರಥಮ ಬಹುಮಾನ 6001 ರೂ ಮತ್ತು ಪಾರಿತೋಷಕ,2ನೇ ಬಹುವಾನ 3001 ರೂ ಮತ್ತು ಪಾರಿತೋಷಕವಿದ್ದು,ಟೂರ್ನಿಯ ಉದ್ಘಾಟನೆಯನ್ನು ತಾ.ಪಂ.ಸದಸ್ಯ ಕೆಂಕೆರೆ ನವೀನ್ ನೆರವೇರಿಸುವರು. ತಾ.ಪಂ.ಅಧ್ಯಕ್ಷ ಸೀತಾರಾಂ ಅಧ್ಯಕ್ಷತೆವಹಿಸಲಿದ್ದಾರೆ.ಗ್ರಾ.ಪಂ.ಅಧ್ಯಕ್ಷೆ ಚಂದ್ರಮ್ಮ,ಕೋಟ್ರೆಶ್ & ಕೋ ನ ವಿಶ್ವನಾಥ್,ಕೊಬ್ಬರಿ ವರ್ತಕ ದೇವರಾಜು,ಪಿಡಿಓ ಶಿವಕುಮಾರ್ ಹಾಗೂ ಗ್ರಾ.ಪಂ.ಸದಸ್ಯರು ಅತಿಥಿಗಳಾಗಿ ಆಗಮಿಸುವರು.ಟೂರ್ನಿಯ ಪ್ರವೇಶ ಶುಲ್ಕ 351ರೂ ಆಗಿದ್ದು,ಒಂದು ತಂಡದಲ್ಲಿ ಆಡಿದ ಆಟಗಾರರು ಮತ್ತೊಂದು ತಂಡದಲ್ಲಿ ಆಡುವಂತಿಲ್ಲ,ಪ್ರತಿ ಪಂದ್ಯ ಐದು ಓವರ್ ಒಳಗೊಂಡಿದ್ದು,ವ್ಯವಸ್ಥಾಪಕ ಹಾಗೂ ಅಂಪೈರ್ ತೀರ್ಮಾನ ಅಂತಿಮವಾಗಿರುತ್ತದೆ.ಹೆಚ್ಚಿನ ವಿವರಕ್ಕೆ ಚೇತನ್(8971454791), ದಯಾನಂದ್(9743206005), ಸಚಿನ್(9611642521),ವಿನಯ್(8095271937),ಈಶ್ವರಮೂರ್ತಿ(9901397757) ಸಂಪರ್ಕಿಸಲು ಕೋರಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ