ಹುಳಿಯಾರು: ಹೋಬಳಿ ಬೋರನಕಣಿವೆ ಗ್ರಾಮದಲ್ಲಿ ಸುವರ್ಣ ಮಹೋತ್ಸವ ಕಾಮಗಾರಿಗಳ ಶಿಲಾನ್ಯಾಸ ಹಾಗೂ 2012-13 ನೇ ಸಾಲಿನ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆ,ಪ್ರತಿಭಾ ಪುರಸ್ಕಾರ,ವೃತ್ತಿ ಮಾರ್ಗದರ್ಶಿ ಘಟಕ, ಇಕೋಕ್ಲಬ್ , ಸುವರ್ಣ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಉದ್ಘಾಟನೆಯು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಇಂದು (ತಾ.9) ಸೋಮವಾರ ಬೆಳಿಗ್ಗೆ 11ಕ್ಕೆ ನಡೆಯಲಿದೆ.
ಸಂಸತ್ ಸದಸ್ಯರಾದ ಜಿ.ಎಸ್.ಬಸವರಾಜು ಸಮಾರಂಭದ ಉದ್ಘಾಟನೆಯನ್ನು,ಶಾಸಕ ಸಿ.ಬಿ.ಸುರೇಶ್ ಬಾಬು ಸುವರ್ಣ ಮಹೋತ್ಸವ ಪ್ರವೇಶ ದ್ವಾರದ ಶಿಲಾನ್ಯಾಸವನ್ನು ಹಾಗೂ ಅಧ್ಯಕ್ಷತೆ ವಹಿಸಲಿದ್ದಾರೆ.ಸಭಾಂಗಣದ ಶಿಲಾನ್ಯಾಸವನ್ನು ಶಾಸಕ ಟಿ.ಬಿ.ಜಯಚಂದ್ರ ನೆರವೇರಿಸಲಿದ್ದು,ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆಯನ್ನು,ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎಸ್.ಕಿರಣ್ ಕುಮಾರ್ ಸುವರ್ಣ ಹಳೆಯ ವಿದ್ಯಾರ್ಥಿಗಳ ಒಕ್ಕೂಟ,ವೃತ್ತಿ ಮಾರ್ಗದರ್ಶಿ ಘಟಕದ ಉದ್ಘಾಟನೆನ್ನು,ಮಾಡುವರು.ತಾ.ಪಂ.ಅಧ್ಯಕ್ಷ ಸೀತಾರಾಂ ಇಕೋಕ್ಲಬ್ ನ ಉದ್ಘಾಟನೆ ನೆರವೇರಿಸುವರು.
ಜಿಲ್ಲಾ ಪಂಚಾಯ್ತಿಯ ಆನಂದರವಿ, ಜಿಲ್ಲಾ ಪ.ಪೂ.ಶಿ.ಇ. ಉಪನಿರ್ದೇಶಕ ಕೆ.ಎಸ್.ರಂಗನಾಥ್,ಜಿಲ್ಲಾ ಸಾ.ಶಿ.ಇ. ಉಪನಿರ್ದೇಶಕ ಮೋಹನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್,ಜಿ.ಪಂ.ಸದಸ್ಯೆ ನಿಂಗಮ್ಮ,ತಾ.ಪಂ.ಸದಸ್ಯರಾದ ವಸಂತಯ್ಯ,ಕವಿತಾ,ಹೊಯ್ಸಳಕಟ್ಟೆ ಗ್ರಾ.ಪಂ.ಅಧ್ಯಕ್ಷ ಮಂಜುನಾಥ್,ಗಾಣಧಾಳು ಗ್ರಾ.ಪಂ.ಅಧ್ಯಕ್ಷೆ ನೇತ್ರಾವತಿ,ದಸೂಡಿ ಗ್ರಾ.ಪಂ.ಅಧ್ಯಕ್ಷೆ ರೇಣುಕಮ್ಮ, ಸುವರ್ಣಮಹೋತ್ಸವ ಸೇವಾ ಸಮಿತಿಯ ಸಿದ್ದಯ್ಯ,ಎಸ್.ಡಿ.ಎಂ.ಸಿಯ ತಿಮ್ಮರಾಯಪ್ಪ,ವದ್ದಿಗಯ್ಯ,ಮುಖ್ಯಶಿಕ್ಷಕಿ ಮಂಜಮ್ಮ ಅತಿಥಿಗಳಾಗಿ ಆಗಮಿಸಲಿದ್ದು,ಪ್ರಾಚಾರ್ಯ ಕೆ.ರಂಗನಾಥ್ ಪ್ರಾಸ್ತಾವಿಕ ನುಡಿ ನುಡಿಯುವರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ