ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಎಂ.ಅಶೋಕ್ ಆಯ್ಕೆ

ಹುಳಿಯಾರಿನ ತೆಂಗಿನ ನಾರಿನ ಕೈಗಾರಿಕಾ ಸಹಕಾರ ಸಂಘದ ಸದಸ್ಯರಾದ ಎಂ.ಅಶೋಕ್ ಅವರು ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳ ನಿಯಮಿತದ ಆಡಳಿತ ಮಂಡಳಿಯ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದಿನದರ್ಶಿಕೆ ಬಿಡುಗಡೆ

ಹುಳಿಯಾರಿನ ಗಾಯತ್ರಿ ಪತ್ತಿನ ಸಹಕಾರ ಸಂಘದವತಿಯಿಂದ ೨೦೧೬ ರ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.ಸಂಘದ ಅಧ್ಯಕ್ಷ ಲೋಕೇಶ್ ಹಾಗೂ ಸಂಘದ ನಿರ್ದೇಶಕರುಗಳು ಹಾಜರಿದ್ದರು.

ಸಿ.ಬಿ.ಎಸ್ ಮಾರುತಿ ಯುವಕರ ಸಂಘದಿಂದ ಹೊಸ ವರ್ಷಾಚರಣೆ

ಹುಳಿಯಾರು ಹೋಬಳಿಯ ಬೆಳವಾಡಿಯ ಸಿ.ಬಿ.ಎಸ್ ಮಾರುತಿ ಯುವಕರ ಸಂಘದವರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳೊಂದಿಗೆ ಹೊಸ ವರ್ಷಾಚರಣೆ ನಡೆಸಿದರು. ಶಿಕ್ಷಕ ಗಿರೀಶ್ ಮಾತನಾಡಿ ಮಾರುತಿ ಯುವಕ ಸಂಘ ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಂಡಿರುವ ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿಯ ಸಾಧನೆಗಳನ್ನು ಶ್ಲಾಘಿಸಿದರು.ಶಾಲಾ ಮಕ್ಕಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿ ಸಿಹಿ ಹಂಚಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಬಿ.ಎಸ್ ಮಾರುತಿ ಯುವಕರ ಸಂಘ ಅಧ್ಯಕ್ಷರಾದ ಕುಮಾರ್ ಸ್ವಾಮಿಯವರು ವಹಿಸಿಕೊಂಡಿದ್ದರು. ಸಂಘದ ಖಜಾಂಚಿ ರಾಜಣ್ಣ , ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ನಾಗರಾಜು, ಶಾಲಾ ಮುಖ್ಯ ಶಿಕ್ಷಕ ನರಸಿಂಹರಾಜ್ ಅರಸ್, S.D.M.C ಅಧ್ಯಕ್ಷ ಬಸವರಾಜು, ರಮೇಶ್ ಮತ್ತಿತರರು ಹಾಜರಿದ್ದರು.

ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಸ್ಥೆಯಿಂದ ಚೆಕ್ ವಿತರಣೆ

ಹುಳಿಯಾರು ಹೋಬಳಿ ವ್ಯಾಪ್ತಿಯ ಹೊಯ್ಸಳಕಟ್ಟೆ,ದಸೂಡಿ,ಗಾಣದಾಳು,ದೊಡ್ಡಬಿದರೆ ಗ್ರಾಪಂ ವ್ಯಾಪ್ತಿಯಲ್ಲಿ ದೇವಸ್ಥಾನಗಳ ಅಭಿವೃದ್ದಿಗೆ ಒಂದು ಲಕ್ಷದ ಇಪ್ಪತೈದು ಸಾವಿರ ಧನ ಸಹಾಯ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಸ್ಥೆಯಿಂದ ನೀಡಲಾಗಿದೆ ಎಂದು ಗಾಣದಾಳು ವಿಭಾಗದ ಮೆಲ್ವಿಚಾರಕ ಸುರೇಶ್ ತಿಳಿಸಿದರು ಅವರು ಹೊಯ್ಸಳಕಟ್ಟೆಯಲ್ಲಿ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಸ್ಥೆ ವತಿಯಿಂದ ಹಾಲಿನ ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಾಯಾರ್ಥವಾಗಿ ಎರಡನೆ ಕಂತಿನಲ್ಲಿ ೨೪೦೦೦ ಹಣದ ಚೆಕ್ ನೀಡಿ ಮಾತನಾಡಿದರು. ಹುಳಿಯಾರು ಸಮೀಪದ ಹೊಯ್ಸಳಕಟ್ಟೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಸ್ಥೆ ವತಿಯಿಂದ ಹಾಲಿನ ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಾಯಾರ್ಥವಾಗಿ ಎರಡನೆ ಕಂತಿನಲ್ಲಿ ೨೪೦೦೦ ಹಣದ ಚೆಕ್ ಗಾಣದಾಳು ವಿಭಾಗದ ಮೆಲ್ವಿಚಾರಕ ಸುರೇಶ್ ನೀಡಿದರು. ಸಂಸ್ಥೆಯು ಗ್ರಾಮೀಣ ಭಾಗದ ಬಡ ಜನರ ಆರ್ಥಿಕ ಸಬಲತೆಗೆ ಹೆಚ್ಚು ಶ್ರಮಿಸುತ್ತಿದ್ದು,ಗ್ರಾಮದಲ್ಲಿ ಹತ್ತು ಜನರ ಗುಂಪು ರಚಿಸಿಕೊಂಡು ಸಂಸ್ಥೆಯಿಂದ ಸಾಲ ಸೌಲಭ್ಯ ಪಡೆಯಬಹುದು ಎಂದು ಸಲಹೆ ನೀಡಿದರು.ಹೊಯ್ಸಳಕಟ್ಟೆಯಲ್ಲಿ ಇನ್ನೊಂದು ವಾರದಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ಸಂಸ್ಥೆಯ ಸಹಭಾಗಿತ್ವದಲ್ಲಿ ಉದ್ಘಾಟಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ದಾನಿ ರಾಮದಾಸಪ್ಪ, ಹಾ.ಉ.ಸ.ಸ.ಅಧ್ಯಕ್ಷ ಜಯಲಿಂಗರಾಜು,ಕಾರ್ಯದರ್ಶಿ ಚಿದಾನಂದ್ , ಪಿಡಿಒ ರಮೇಶ್ ,ಶಿಕ್ಷಕ ವದ್ದಿಗಯ್ಯ, ಪ್ರಗತಿ ಬಂಧು ಒಕ್ಕೂಟ...

ದಸೂಡಿಯ ಶ್ರೀ ಕ್ಷೇತ್ರ ಮಲಕಾಪುರದಲ್ಲಿ ಜಾತ್ರೆ

ಹುಳಿಯಾರು: ಹೋಬಳಿಯ ದಸೂಡಿ ಸಮೀಪದ ಶ್ರೀ ಕ್ಷೇತ್ರ ಮಲಕಾಪುರದಲ್ಲಿ ನೂತನ ವರ್ಷವಾದ ಜನವರಿ ಒಂದರಂದು ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಜಾತ್ರಾಮಹೋತ್ಸವ ಜರುಗಲಿದೆ.ಮುಂಜಾನೆಯಿಂದ ಸ್ವಾಮಿಗೆ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದ್ದು ಮಹಾಮಂಗಳಾರತಿ ನಂತರ ಪ್ರಸಾದವಿನಿಯೋಗ ನಡೆಯಲಿದೆ. ಆ ನಂತರ ದೇವಸ್ಥಾನದ ಸ್ಥಳ ಪುರಾಣ,ಕ್ಷೇತ್ರದ ಮಾಹಿತಿ, ಮುಂತಾದ ವಿವರವುಳ್ಳ ಸಾಮಾಜಿಕ ಜಾಲತಾಣಕ್ ಹಾಗೂ ವೆಬ್ ಸೈಟ್ಗೆ ಚಾಲನೇ ನೀಡಲಾಗುವುದು. ಸ್ಥಳ ಮಹಿಮೆ: ಶ್ರೀ ಕ್ಷೇತ್ರ ದಸೂಡಿ ಗ್ರಾಮದಿಂದ 3 ಮೈಲಿಗಳ ದೂರದಲ್ಲಿರುವ ಮಲಕಾಪುರ ಕ್ಷೇತ್ರವು ಭವ್ಯವಾದ ಇತಿಹಾಸವನ್ನು ಹೊಂದಿರುವ ಪುಣ್ಯಕ್ಷೇತ್ರವಾಗಿದೆ.ಹಿರಿಯರು ಹೇಳುವ ಪ್ರಕಾರ ರಾಮಾಯಣದಲ್ಲಿ ಬರುವ ಶ್ರೀ ರಾಮಚಂದ್ರನು ರಾವಣಾಸುರನನ್ನು ಸಂಹಾರ ಮಾಡಲು ತನಗೆ ಯುದ್ಧದಲ್ಲಿ ಸಹಾಯ ನೀಡಿದ್ದ ಸುಗ್ರೀವನಿಗೆ ಒಂದು ನೆಲೆಯನ್ನು ಸೂಚಿಸಲು ಈ ಬೆಟ್ಟದ ಮೇಲೆ ನಿಂತು ಬಾಣ ಹೂಡಿದನು ಎಂಬ ಪುರಾಣ ಐತಿಹ್ಯ ಈ ಜಾಗಕ್ಕಿದೆ. ಇಂತಹ ಪುರಾಣದ ಹಿನ್ನೆಲೆ ಹಾಗೂ ಭವ್ಯ ಪರಂಪರೆಯನ್ನು ಹೊಂದಿರುವ ಶ್ರೀ ಮಲಕಾಪುರವು ಪುಣ್ಯಕ್ಷೇತ್ರದ ಜಾತ್ರೆಗೆ ಸಮಸ್ತರು ಆಗಮಿಸಿ ಸ್ವಾಮಿಯ ದರ್ಶನದೊಂದಿಗೆ ಕೃತಾರ್ಥರಾಗಬೇಕೆಂದು ಶ್ರೀ ಸೇನೆ, ದಸೂಡಿ ಸಮಿತಿಯವರು ಕೋರಿದ್ದಾರೆ.

ವಿದ್ಯಾವಾರಿಧಿಯಲ್ಲಿ ವಿಶ್ವಮಾನವ ದಿನಾಚರಣೆ

ಹುಳಿಯಾರು :ಪಟ್ಟಣದ ವಿದ್ಯಾವಾರಿಧಿಶಾಲೆಯಲ್ಲಿ ಜ್ಞಾನಪೀಠ ಪುರಷ್ಕೃತ, ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವಾದ ಡಿಸೆಂಬರ್ 29 ನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಮಕ್ಕಳಿಂದ ಕುವೆಂಪು ಅವರು ಬರೆದ ಗೀತೆಗಳ ಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಯಿತು.ಕುವೆಂಪು ಅವರ ವಿಶ್ವಮಾನವ ಸಂದೇಶದ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು. ಹುಳಿಯಾರಿನ ವಿದ್ಯಾವಾರಿಧಿಶಾಲೆಯಲ್ಲಿ ಮಂಗಳವಾರದಂದು ವಿಶ್ವಮಾನವ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಕವಿತಾಕಿರಣ್,ಪ್ರಾಂಶುಪಾಲ ರವಿ ಸೇರಿದಂತೆ ಶಿಕ್ಷಕ ವೃಂದದವರು ಹಾಜರಿದ್ದರು. ಸಂಸ್ಥೆಯ ಕಾರ್ಯದರ್ಶಿ ಕವಿತಾಕಿರಣ್ ಮಾತನಾಡಿ ಕುವೆಂಪುರವರು ಅಪೂರ್ವ ಲೇಖಕರಾಗಿದ್ದು ಅವರ ಕೃತಿಗಳು ಭಾರತೀಯ ಸಾಹಿತ್ಯದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ. ಕಾವ್ಯ, ನಾಟಕ, ಕಥೆ, ಕಾದಂಬರಿ, ವಿಮರ್ಶೆ ಮುಂತಾದ ಕ್ಷೇತ್ರದಲ್ಲಿ ಕುವೆಂಪುರವರು ಮಾಡಿರುವ ಸಾಧನೆ ಅವಿಸ್ಮರಣೀಯವಾಗ್ಗಿದ್ದು ಅವರಾಗಲೀ, ಅವರ ಸಾಹಿತ್ಯವಾಗಲೀ ಜನಮಾನಸದಿಂದ ಮರೆಯಾಗಿಲ್ಲ. ಪಂಪ- ಕುಮಾರವ್ಯಾಸರಂತೆ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕುವೆಂಪುರವರ ಹೆಸರು ಮತ್ತು ಅವರು ನೀಡಿದ ಕೊಡುಗೆ ಚಿರಸ್ಥಾಯಿಯಾಗಿದೆ ಎಂದರು.  ಪ್ರಾಂಶುಪಾಲ ರವಿ ಸೇರಿದಂತೆ ಶಿಕ್ಷಕ ವೃಂದದವರು ಹಾಜರಿದ್ದರು.

ಹುಳಿಯಾರಿನಲ್ಲಿ ಜೆಡಿಎಸ್ ಗೆಲುವಿಗೆ ಸಂಭ್ರಮಾಚರಣೆ

ಹುಳಿಯಾರು:   ಸ್ಥಳಿಯ ಜೆಡಿಎಸ್ ಶಾಸಕ ಸುರೇಶ್ ಬಾಬುಗೆ ಹಾಗೂ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಪಾಲಿಗೆ ಪ್ರತಿಷ್ಠೆಯಾಗಿದ್ದ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು ಗೆಲುವಿಗೆ ಪಕ್ಷದ ಮುಖಂಡರುಗಳು,ಕಾರ್ಯಕರ್ತರುಗಳು ಹಾಗೂ ಗ್ರಾಮಪಂಚಾಯ್ತಿ ಬಹುತೇಕ ಸದಸ್ಯರುಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ತಾಲ್ಲೂಕ್ ಯುವ ಜೆಡಿಎಸ್ ಅಧ್ಯಕ್ಷ ಗೌಡಿ ಮಾತನಾಡಿ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಜೆಡಿಎಸ್ ಜನಪರ ಕೆಲಸ ಕಾರ್ಯಗಳನ್ನು ಮೆಚ್ಚಿ ಮತ ಚಲಾವಣೆ ನಡೆದಿದ್ದು ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ವಿಜಯ ಪತಾಕೆ ಹಾರಿಸಿರುವುದು ಸಂತಸ ತಂದಿದೆ ಎಂದರು. ಅಭಿಮಾನಿಗಳು ಪರಸ್ಪರ ಸಿಹಿ ಹಂಚಿದರು, ಕಾರ್ಯಕರ್ತರುಗಳು ಬೈಕ್ ಗಳಲ್ಲಿ ಪಟ್ಟಣದ ತುಂಬಾ ಸಂಚರಿಸಿ ಶಾಸಕ ಸುರೇಶ್ ಬಾಬು ಹಾಗೂ ಗೆದ್ದ ಬೆಮೆಲ್ ಕಾಂತರಾಜು ಪರ ಜಯಘೋಷ ಹಾಕಿ ಗೆಲುವಿಗೆ ಖಷಿಪಟ್ಟರು. ಸಂಭ್ರಮಾಚರಣೆಯಲ್ಲಿ ಜಿಪಂ ಸದಸ್ಯೆ ಮಂಜುಳಾ,ಗ್ರಾ.ಪಂ.ಅಧ್ಯಕ್ಷೆ ಗೀತಾ, ಸದಸ್ಯರುಗಳಾದ ದಯಾನಂದ್,ಸಿದ್ದಗಂಗಮ್ಮ,ಗೀತಾ ಅಶೋಕ್ ಬಾಬು,ಬಾಲರಾಜು,ಅಹ್ಮದ್ ಖಾನ್,ಜಬೀಉಲ್ಲಾ ಇಮ್ರಾಜ್ ,ಶಿವನಂಜಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.