ಹುಳಿಯಾರು: ಹೋಬಳಿಯ ದಸೂಡಿ ಸಮೀಪದ ಶ್ರೀ ಕ್ಷೇತ್ರ ಮಲಕಾಪುರದಲ್ಲಿ ನೂತನ ವರ್ಷವಾದ ಜನವರಿ ಒಂದರಂದು ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಜಾತ್ರಾಮಹೋತ್ಸವ ಜರುಗಲಿದೆ.ಮುಂಜಾನೆಯಿಂದ ಸ್ವಾಮಿಗೆ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದ್ದು ಮಹಾಮಂಗಳಾರತಿ ನಂತರ ಪ್ರಸಾದವಿನಿಯೋಗ ನಡೆಯಲಿದೆ.
ಆ ನಂತರ ದೇವಸ್ಥಾನದ ಸ್ಥಳ ಪುರಾಣ,ಕ್ಷೇತ್ರದ ಮಾಹಿತಿ, ಮುಂತಾದ ವಿವರವುಳ್ಳ ಸಾಮಾಜಿಕ ಜಾಲತಾಣಕ್ ಹಾಗೂ ವೆಬ್ ಸೈಟ್ಗೆ ಚಾಲನೇ ನೀಡಲಾಗುವುದು.
ಸ್ಥಳ ಮಹಿಮೆ: ಶ್ರೀ ಕ್ಷೇತ್ರ ದಸೂಡಿ ಗ್ರಾಮದಿಂದ 3 ಮೈಲಿಗಳ ದೂರದಲ್ಲಿರುವ ಮಲಕಾಪುರ ಕ್ಷೇತ್ರವು ಭವ್ಯವಾದ ಇತಿಹಾಸವನ್ನು ಹೊಂದಿರುವ ಪುಣ್ಯಕ್ಷೇತ್ರವಾಗಿದೆ.ಹಿರಿಯರು ಹೇಳುವ ಪ್ರಕಾರ ರಾಮಾಯಣದಲ್ಲಿ ಬರುವ ಶ್ರೀ ರಾಮಚಂದ್ರನು ರಾವಣಾಸುರನನ್ನು ಸಂಹಾರ ಮಾಡಲು ತನಗೆ ಯುದ್ಧದಲ್ಲಿ ಸಹಾಯ ನೀಡಿದ್ದ ಸುಗ್ರೀವನಿಗೆ ಒಂದು ನೆಲೆಯನ್ನು ಸೂಚಿಸಲು ಈ ಬೆಟ್ಟದ ಮೇಲೆ ನಿಂತು ಬಾಣ ಹೂಡಿದನು ಎಂಬ ಪುರಾಣ ಐತಿಹ್ಯ ಈ ಜಾಗಕ್ಕಿದೆ.
ಇಂತಹ ಪುರಾಣದ ಹಿನ್ನೆಲೆ ಹಾಗೂ ಭವ್ಯ ಪರಂಪರೆಯನ್ನು ಹೊಂದಿರುವ ಶ್ರೀ ಮಲಕಾಪುರವು ಪುಣ್ಯಕ್ಷೇತ್ರದ ಜಾತ್ರೆಗೆ ಸಮಸ್ತರು ಆಗಮಿಸಿ ಸ್ವಾಮಿಯ ದರ್ಶನದೊಂದಿಗೆ ಕೃತಾರ್ಥರಾಗಬೇಕೆಂದು ಶ್ರೀ ಸೇನೆ, ದಸೂಡಿ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ