ವಿಷಯಕ್ಕೆ ಹೋಗಿ

ಗುರುವಾರದಂದು ಹುಳಿಯಾರಿಗೆ ಮುಖ್ಯಮಂತ್ರಿ :ಸಿಂಗಾರಗೊಂಡ ಪಟ್ಟಣ

ವರದಿ: ಡಿ.ಆರ್.ನರೇಂದ್ರಬಾಬು
ಹುಳಿಯಾರಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಸ್ತೆಯ ಗುಂಡಿ ಮುಚ್ಚಿ ಡಾಂಬರೀಕರಣ ಮಾಡುತ್ತಿರುವುದು.
ಹುಳಿಯಾರು : ಪರಿಷತ್ ಚುನಾವಣೆ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯನವರು ಇಂದು(ಗುರುವಾರ) ಪಟ್ಟಣಕ್ಕಾಗಮಿಸುತ್ತಿರುವ ಹಿನ್ನಲೆಯಲ್ಲಿ ಅವರು ಸಂಚರಿಸುವ ರಸ್ತೆಯ ಗುಂಡಿಗಳನ್ನು ತಾತ್ಕಾಲಿಕವಾಗಿ ತೇಪೆ ಹಚ್ಚಿ,ಕಸಕಡ್ಡಿ ತೆರವುಗೊಳಿಸಿ ಪಟ್ಟಣವನ್ನು ಸಿಂಗಾರಗೊಳಿಸಲಾಗಿದೆ.ಇದೇ ವೇಳೆ ರಸ್ತೆ ಗುಂಡಿಯ ಬಗ್ಗೆ ಚಕಾರವೆತ್ತದೆ ಮೌನವಾಗಿದ್ದ ಲೋಕೋಪಯೋಗಿ ಇಲಾಖೆ ಇದೀಗ ಎಚ್ಚೆತ್ತು ಗುಂಡಿ ಮುಚ್ಚಲು ಮುಂದಾಗಿದ್ದು ಇಲಾಖೆಯ ಕಾರ್ಯವೈಖರಿ ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.

ಕಳೆದೆರಡು ವರ್ಷಗಳಿಂದ ಅಪಘಾತಕ್ಕೆ ಕಾರಣವಾಗಿದ್ದ ಈ ರಸ್ತೆಗುಂಡಿ ಮುಚ್ಚಲು ನಡೆದ ಹೋರಾಟಗಳು ಸಫಲವಾಗದಿದ್ದು ಇದೀಗ ಮುಖ್ಯಮಂತ್ರಿಗಳ ಆಗಮನದ ಉದ್ದೇಶದಿಂದ ಗುಂಡಿಮುಕ್ತ ರಸ್ತೆಯಾಗಿಸಲು ಹೊರಟಿರುವ ಇಲಾಖೆಗೆ ಇದುವರೆಗೂ ಶ್ರೀಸಾಮಾನ್ಯರ ಸಾರ್ವಜನಿಕರ ಸಮಸ್ಯೆ ಕಾಡಿರಲಿಲ್ಲವೆ ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳಿಬಂದಿದೆ.

ಹುಳಿಯಾರಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಸ್ತೆಯ ಗುಂಡಿ ಮುಚ್ಚಿ ಡಾಂಬರೀಕರಣ ಮಾಡುತ್ತಿರುವುದು.
ಹೌದು ಪಟ್ಟಣದಿಂದ ಹಾದುಹೋಗಿರುವ ಹೆದ್ದಾರಿಯ ಸಮಸ್ಯೆ ಇಂದುನಿನ್ನೆಯದಲ್ಲ.ಭಾರಿಗುಂಡಿಗಳಿಂದ ತುಂಬಿದ್ದ ಈ ರಸ್ತೆಯು ಬಳಸಲು ಯೋಗ್ಯವಾಗಿಲ್ಲದೆ ಇದಕ್ಕಾಗಿ ನಡೆದ ಹೋರಾಟಗಳು ಕೂಡ ಲೆಖ್ಖಕ್ಕಿಲ್ಲ.ಹುಳಿಯಾರಿನಿಂದ ಶಿರಾ,ಬಾಣಾವಾರ ಅಥವಾ ಹಾಸನಕ್ಕೆ ಹೋಗುವ ರಸ್ತೆ ಬೃಹತ್ ಗುಂಡಿ,ಹೊಂಡಗಳಿಂದ ತುಂಬಿದ್ದು ಇದೇ ಮಾರ್ಗವಾಗಿ ಅನಿವಾರ್ಯವಾಗಿ ಹೋಗಲೇಬೇಕಾಗಿದ್ದ ಪ್ರಯಾಣಿಕರು ಪ್ರಾಣಕಂತಕದಿಂದ ಈ ರಸ್ತೆಯಲ್ಲಿ ಹಾದುಹೋಗಬೇಕಿತ್ತು. ರಸ್ತೆ ಸಮಸ್ಯೆಯಿಂದಾದ ಅಪಘಾತದಿಂದ ಸತ್ತ ಮಂದಿ ಅಥವಾ ಬಿದ್ದು ಕೈಕಾಲು ಮುರಿದುಕೊಂಡವರು ಅದೆಷ್ಟು ಮಂದಿಯೋ ಗೊತ್ತಿಲ್ಲಾ.

ಮೊನ್ನೆಯಷ್ಟೆ ತುಮಕೂರು ಜಿಲ್ಲಾ ಸಚಿವರು ,ಸಂಸದರು ಹಾಗೂ ಶಾಸಕರು ಡೆಲ್ಲಿಯಿಂದ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಿಗೆ ಗುಂಡಿಗಳನ್ನು ಮುಚ್ಚಲು ಹಾಗೂ ಇತರೆ ಕಾಮಗಾರಿಗಳಿಗೆ ೧.೮೯ಕೋಟಿ ಅನುದಾನ ಮಂಜೂರು ಮಾಡಿಸಿರುವುದಾಗಿ ಹೇಳಿ ಕಾಮಗಾರಿಗೆ ಪೂಜಾಕಾರ್ಯಕ್ರಮದ ಮೂಲಕ ಚಾಲನೆ ಕೂಡ ನೀಡಿ ಪ್ರಚಾರ ಪಡೆದುಕೊಂಡಿದ್ದು ಸುಳ್ಳಲ್ಲ.ಆ ಕ್ಷಣಕ್ಕೆ ಮಾತ್ರ ಗುಂಡಿಗೆ ಜಲ್ಲಿ ತುಂಬಿದ ಗುತ್ತಿಗೆದಾರರು ನಂತರ ಅಕ್ಷರಶಹ ಮಾಯವಾಗಿಬಿಟ್ಟರು. ಈ ಬಗ್ಗೆ ಪುನಃ ಸಚಿವರು,ಸಂಸದರುರ ಬಳಿ ಎಡೆತಾಕಿದರೂ ಪ್ರಯೋಜನ ಮಾತ್ರ ಇಲ್ಲವಾಗಿ ಇಲ್ಲಿನ ನಿವಾಸಿಗಳು ಮಾರುದ್ದದ್ದ ಗುಂದಿಗಳಲ್ಲೆ ಓಡಾದುವುದನ್ನು ಅಭ್ಯಾಸಮಾಡಿಕೊಂಡಿದ್ದರು.

ಆದರೆ ಯಾವುದೇ ಹೋರಾಟಗಳಿಂದಲೂ ಆಗದ ಕಾರ್ಯ ಇದೀಗ ಸಿಎಂ ಆಗಮನದ ನಿಮಿತ್ತ ಸಾದ್ಯವಾಗುತ್ತಿದ್ದು ಇವರು ಸಂಚರಿಸುವ ರಸ್ತೆಯ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಬದಿಯಲ್ಲಿರುವ ಕೊರಕಲಿಗೆ ಮಣ್ಣು ಹಾಕಲಾಗುತ್ತಿದೆ.ರಸ್ತೆ ಅಕ್ಕಪಕ್ಕ ತಿಪ್ಪೆ ಹಾಗೂ ಕಸಕಡಿ ತ್ಯಾಜ್ಯಗಳನ್ನೆಲ್ಲಾ ಟ್ರಾಕ್ಟರ್ ಮೂಲಕ ದೂರಕ್ಕೆ ಸಾಗಿಸಲಾಗಿದೆ.ಮಣ್ಣುಹಾಕಿದ ಜಾಗವೆಲ್ಲಾ ರೋಲರ್ ಮೂಲಕ ಸಮತಟ್ಟು ಮಾಡಿ
 ಬಿಗಿಮಾಡಲಾಗುತ್ತಿದೆ.ಪಟ್ಟಣದ ಪ್ರವೇಶದ್ವಾರದಿಂದ ಹಿಡಿದು ಬಸ್ ನಿಲ್ದಾನದವರೆಗೂ ರಸ್ತೆ ದುರಸ್ತಿ ಮಾಡಲಾಗಿದೆ. ಒಟ್ಟಾರೆ ಮುಖ್ಯಮಂತ್ರಿಗಳು ಹೆಲಿಪ್ಯಾಡ್ ನಿಂದ ಸಭೆ ನಡೆಯುವ ಜಾಗದವರೆಗೆ ಹಾಗೂ ಮಂತ್ರಿಮಹೋದಯರು ಆಗಮಿಸುವ ಪಟ್ತಣದ ಪ್ರವೇಶದ್ವಾರದವರೆಗೂ ರಸ್ತೆಯ ಗುಂದಿಮುಚ್ಚಿ ಹಾದಿ ಸುಗಮಗೊಳಿಸಲಾಗಿದೆ.

ಮುಖ್ಯಮಂತ್ರಿಗಳ ಅಧಿಕೃತ ಪ್ರವಾಸದ ಪಟ್ಟಿಯಂತೆ ಹುಳಿಯಾರಿಗೆ ೧೧ ಕ್ಕೆ ಆಗಮಿಸುತ್ತಿದ್ದು ಅವರೊಂದಿಗೆ ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ತುಮಕೂರು ಸಂಸದರಾದ ಎಸ್.ಪಿ.ಮುದ್ದಹನುಮೇಗೌಡ, ಚಿತ್ರದುರ್ಗ ಸಂಸದರಾದ ಚಂದ್ರಪ್ಪ, ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ. ಸುರೇಶ್, ಶಾಸಕರುಗಳಾದ ಕೆ.ಎನ್.ರಾಜಣ್ಣ, ಕೆ.ಷಡಕ್ಷರಿ, ಡಾ.ರಫೀಕ್ ಅಹಮದ್,ವಿಧಾನಪರಿಷತ್ತು ಸದಸ್ಯರುಗಳಾದ ವಿ.ಎಸ್. ಉಗ್ರಪ್ಪ, ಎಂ.ಡಿ.ಲಕ್ಷ್ಮೀನಾರಾಯಣ್,ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ರಿಜ್ವಾವಾನ್ ಹರ್ಷದ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಷಫೀ ಅಹ್ಮದ್ ಮತ್ತಿತರರು ಉಪಸ್ಥಿತರಿರುವರು ಎನ್ನಲಾಗಿದೆ.

ವಾಸವಿ ಸ್ಕೂಲ್ ಮೈದಾನದಲ್ಲಿ ಹೆಲಿಪ್ಯಾಡ್ ಸಿದ್ದತೆ ಮಾಡಲಾಗಿದೆ.ಸಮಾರಂಭ ನಡೆಯುವ ಜಾಗದಲ್ಲಿ ಭಾರಿ ಪೋಲಿಸ್ ಬಂದೋಬಸ್ತು ಮಾಡಲಾಗಿದೆ. ಇದರ ಉಸ್ತುವಾರಿಯನ್ನು ಮಧುಗಿರಿ ಶಾಸಕ ಕೆ.ಎನ್ ರಾಜಣ್ಣ ವಹಿಸಿಕೊಂಡು ಎರಡು ಬಾರಿ ಹುಳಿಯಾರಿಗೆ ಆಗಮಿಸಿ ಎಲ್ಲಾ ಕೆಲಸಗಳ ಪ್ರಗತಿಯನ್ನು ಗಮನಿಸಿ ಸಲಹೆ ಸೂಚನೆ ನೀಡಿದ್ದಾರೆ.



ಒಟ್ಟಾರೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹುಳಿಯಾರಿಗೆ ವಿಶಿಷ್ಟ ಸ್ಥಾನವಿದ್ದು ಇಲ್ಲಿನ ಮತದಾರರ ಮನದಾಳ ಅರಿಯುವುದು ಯಾವ ಪಕ್ಷದವರಿಗೂ ಇದುವರೆಗೂ ಸಾಧ್ಯವಾಗಿಲ್ಲ.ಹಾಗಾಗಿ ಎಲ್ಲಾ ಚುನಾವಣೆಗಳಲ್ಲೂ ತಾಲ್ಲೂಕ್ ಕೇಂದ್ರವಾದ ಚಿಕ್ಕನಾಯಕನಹಳ್ಳಿಗಿಂತಲೂ ಹುಳಿಯಾರಿಗೆ ಪ್ರಾಮುಖ್ಯತೆ ಹೆಚ್ಚಾಗಿ ನೀಡುತ್ತಿದ್ದು ಇಲ್ಲಿಗೆ ಮಾಜಿ ಪ್ರಧಾನಿ ದೇವೆಗೌಡರಿಂದ ಹಿಡಿದು ರಾಮಕೃಷ್ಣ ಹೆಗ್ಗಡೆ,ಜೆ.ಹೆಚ್.ಪಟೇಲ್, ಬಂಗಾರಪ್ಪ,ಯಡಿಯೂರಪ್ಪ ಇದೀಗ ಸಿದ್ದರಾಮಯ್ಯನವರು ಸೇರಿದಂತೆ ಸಾಕಷ್ಟು ಮಂತ್ರಿಮಹೋದಯರುಗಳು ಹುಳಿಯಾರಿಗೆ ಆಗಮಿಸಿದ್ದರೂ ಸಹ ಇಲ್ಲಿನ ಮತದಾರ ಮಾತ್ರ ನಿರ್ದಿಷ್ಟವಾಗಿ ಇಂತಹುದೆ ಪಕ್ಷ ಎಂದು ಯಾವೊಂದು ಪಕ್ಷದವರಿಗೂ ಮಣೆ ಹಾಕದಿರುವುದು ಇಲ್ಲಿನ ವೈಶಿಷ್ಟ್ಯ.ಅಹಿಂದ ಮತದಾರರೆ ಹೆಚ್ಚಾಗಿರುವ ಹುಳಿಯಾರಿಗೆ ಮುಖ್ಯಮಂತ್ರಿಗಳ ಆಗಮನ ರಾಜಕೀಯ ಲಾಭ ತರಬಲ್ಲದೆ ಎಂದು ಕಾದು ನೋಡಬೇಕಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.