ತಾಲ್ಲೂಕಿನ ಪ್ರೌಢಶಾಲಾ ಕನ್ನಡ ಭಾಷಾ ಬೋಧಕರಿಗೆ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಹುಳಿಯಾರಿನ ಕನಕದಾಸ ಪ್ರೌಢಶಾಲೆಯಲ್ಲಿ ದಿನಾಂಕ ೭ ರಂದು ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೧೦.೩೦ರಿಂದ ೧.೩೦ರವರೆಗೆ ೮,೯ ನೇ ತರಗತಿಯ ಹಳಗನ್ನಡ ಗದ್ಯ ಮತ್ತು ಪದ್ಯಗಳ ರಸಗ್ರಹಣ ಮತ್ತು ವಿಶ್ಲೇಷಣೆ ಹಾಗೂ ಮ.೨.೩೦ ರಿಂದ ೪.೩೦ ರವರೆಗೆ ೧೦ ನೇ ತರಗತಿಯ ಹಳೆಗನ್ನಡ ಗದ್ಯ ಮತ್ತು ಪದ್ಯಗಳ ರಸಗ್ರಹಣ ಮತ್ತು ವಿಶ್ಲೇಷಣೆ ನಡೆಯಲಿದೆ.
ತಿಪಟೂರಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಮುರಳಿಧರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ.
ಕಾರ್ಯಾಗಾರಕ್ಕೆ ಆಗಮಿಸುವ ಶಿಕ್ಷಕರು ತರಗತಿಯ ಕನ್ನಡ ಪುಸ್ತಕದೊಂದಿಗೆ ಆಗಮಿಸಬೇಕು ಹಾಗೂ ತಾಲ್ಲೂಕಿನ ಎಲ್ಲಾ ಕನ್ನಡ ಭಾಷಾ ಬೋಧಕರು ತಪ್ಪದೇ ಹಾಜರಾಗಬೇಕೆಂದು ಬೋಧಕರ ಸಂಘದ ಅಧ್ಯಕ್ಷ ಕೆ.ವೀರಣ್ಣ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ