ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲೀಷ್ ಪದಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ತಮ್ಮ ನಿತ್ಯಜೀವನದಲ್ಲಿ ಬಳಸುವಂತಾದಾಗ ಅವರ ಬೌದ್ಧಿಕ ಸಾಮರ್ಥ್ಯ ಹೆಚ್ಚಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಟರಾಜು ಅಭಿಪ್ರಾಯಪಟ್ಟರು.
ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಹುಳಿಯಾರು ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ವಿದ್ಯಾರ್ಥಿಗಳಿಗೆ ಕನ್ನಡ ಇಂಗ್ಲೀಷು ನಿಘಂಟು ವಿತರಿಸಿ ಅವರು ಮಾತನಾಡಿದರು.ನಿಘಂಟು ಇಂಗ್ಲೀಷ್ ಕಲಿಯುವವರಿಗೆ ಅನೇಕ ವಿವರವಾದ ಉದಾಹರಣೆಗಳು ಮತ್ತು ಆ ಮೂಲಕ ನಮ್ಮ ಭಾಷೆ ಮತ್ತು ವ್ಯಾಕರಣ ಕೌಶಲ್ಯ ಸುಧಾರಿಸಲು ಪರಿಪೂರ್ಣ ಸಾಧನವಾಗಿದೆ ಎಂದರು.
ಉಪನ್ಯಾಸಕರುಗಳಾದ ಹೆಚ್.ಎಸ್.ನಾರಾಯಣ,ರಮೇಶ್,ರೇವಣ್ಣ,ಎನ್.ಕವಿತ ಇನ್ನಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ