ಹುಳಿಯಾರು: ಸ್ಥಳಿಯ ಜೆಡಿಎಸ್ ಶಾಸಕ ಸುರೇಶ್ ಬಾಬುಗೆ ಹಾಗೂ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಪಾಲಿಗೆ ಪ್ರತಿಷ್ಠೆಯಾಗಿದ್ದ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು ಗೆಲುವಿಗೆ ಪಕ್ಷದ ಮುಖಂಡರುಗಳು,ಕಾರ್ಯಕರ್ತರುಗಳು ಹಾಗೂ ಗ್ರಾಮಪಂಚಾಯ್ತಿ ಬಹುತೇಕ ಸದಸ್ಯರುಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ತಾಲ್ಲೂಕ್ ಯುವ ಜೆಡಿಎಸ್ ಅಧ್ಯಕ್ಷ ಗೌಡಿ ಮಾತನಾಡಿ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಜೆಡಿಎಸ್ ಜನಪರ ಕೆಲಸ ಕಾರ್ಯಗಳನ್ನು ಮೆಚ್ಚಿ ಮತ ಚಲಾವಣೆ ನಡೆದಿದ್ದು ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ವಿಜಯ ಪತಾಕೆ ಹಾರಿಸಿರುವುದು ಸಂತಸ ತಂದಿದೆ ಎಂದರು.
ಅಭಿಮಾನಿಗಳು ಪರಸ್ಪರ ಸಿಹಿ ಹಂಚಿದರು, ಕಾರ್ಯಕರ್ತರುಗಳು ಬೈಕ್ ಗಳಲ್ಲಿ ಪಟ್ಟಣದ ತುಂಬಾ ಸಂಚರಿಸಿ ಶಾಸಕ ಸುರೇಶ್ ಬಾಬು ಹಾಗೂ ಗೆದ್ದ ಬೆಮೆಲ್ ಕಾಂತರಾಜು ಪರ ಜಯಘೋಷ ಹಾಕಿ ಗೆಲುವಿಗೆ ಖಷಿಪಟ್ಟರು.
ಸಂಭ್ರಮಾಚರಣೆಯಲ್ಲಿ ಜಿಪಂ ಸದಸ್ಯೆ ಮಂಜುಳಾ,ಗ್ರಾ.ಪಂ.ಅಧ್ಯಕ್ಷೆ ಗೀತಾ, ಸದಸ್ಯರುಗಳಾದ ದಯಾನಂದ್,ಸಿದ್ದಗಂಗಮ್ಮ,ಗೀತಾ ಅಶೋಕ್ ಬಾಬು,ಬಾಲರಾಜು,ಅಹ್ಮದ್ ಖಾನ್,ಜಬೀಉಲ್ಲಾ ಇಮ್ರಾಜ್ ,ಶಿವನಂಜಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ