ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಟಿ.ಬಿ.ಜಯಚಂದ್ರ ಅವರೊಂದಿಗೆ ಹುಳಿಯಾರಿನ ಮುಕ್ತಿಧಾಮ ಅಭಿವೃದ್ಧಿ ಸಮಿತಿ ಸದಸ್ಯರು. |
ಪಟ್ಟಣದಲ್ಲಿರುವ ಮುಕ್ತಿಧಾಮಕ್ಕೆ ಅಗತ್ಯ ಸೌಲಭ್ಯವುಳ್ಳ ಚಿತಾಗಾರಕ್ಕೆ ೭ ಲಕ್ಷದ ಅನುದಾನ ಹಾಗೂ ಶವ ಸಾಗಿಸಲು ವಾಹನ ಸೌಕರ್ಯ ಕಲ್ಪಿಸಿಕೊಡುವುದಾಗಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಟಿ.ಬಿ.ಜಯಚಂದ್ರ ಭರವಸೆಯಿತ್ತರು.
ಪಟ್ಟಣದಲ್ಲಿನ ಮುಕ್ತಿಧಾಮದಲ್ಲಿ ದಹನ ಕಾರ್ಯಕ್ಕೆ ಕೆಲವೊಂದು ಮೂಲಸೌಕರ್ಯವಿಲ್ಲದೆ ಅಂತ್ಯಕ್ರಿಯೆ ನಡೆಸುವುದು ಕಷ್ಟಕರವಾಗಿ ಪರಿಣಮಿಸಿದ್ದು ಅಲ್ಲದೆ ರುದ್ರಭೂಮಿಯು ಪಟ್ಟಣದಿಂದ ಎರಡು ಕಿಮೀ ದೂರವಿದ್ದು ಶವ ಸಾಗಿಸಲು ವಾಹನವೊಂದರ ಅವಶ್ಯಕತೆಯಿದ್ದು ಸಮಿತಿಯ ಸದಸ್ಯರುಗಳು ಧಾರ್ಮಿಕ ದತ್ತಿ ಇಲಾಖೆಯ ಮೊರೆಹೊಕ್ಕಿದ್ದರು. ರುದ್ರಭೂಮಿ ಅಭಿವೃದ್ಧಿ / ನವೀಕರಣ ಯೋಜನೆಯಡಿಯಲ್ಲಿ ಇಲಾಖೆಯು ಅನುದಾನ ನೀಡಬೇಕೆಂದು ಮನವಿ ಮಾಡಿದ್ದರು.
ಇಲ್ಲಿಯ ಸಮಸ್ಯೆ ಮನಗಂಡ ಜಿಲ್ಲಾ ಉಸ್ತುವಾರಿ ಸಚಿವರು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ರುದ್ರಭೂಮಿ ಅಭಿವೃದ್ಧಿಗಾಗಿ ತಾವೀಗಾಗಲೆ ೭ ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಿರುವುದಾಗಿ ಹಾಗೂ ಶೀಘ್ರವೇ ಶವ ಸಾಗಿಸುವ ವಾಹನದ ಸೌಕರ್ಯ ಕೂಡ ಕಲ್ಪಿಸಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಕ್ತಿಧಾಮ ಸಮಿತಿಯ ಅಧ್ಯಕ್ಷ ನರೇಂದ್ರಬಾಬು,ವಿಶ್ವನಾಥ್,ರಂಗನಾಥ್ ಪ್ರಸಾದ್,ಎಪಿಎಂಸಿ ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್,ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ನಟರಾಜು ,ಬಿ.ವಿ.ಶ್ರೀನಿವಾಸ್ ,ಪ್ರದೀಪ್ ಇನ್ನಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ