ವಿಧಾನ ಪರಿಷತ್ ಚುನಾವಣೆ ತುಮಕೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ತುಮಕೂರಿನ ಹೆಚ್.ಆರ್.ನಟರಾಜು ಗುರುವಾರ ಸಂಜೆ ಹುಳಿಯಾರಿಗೆ ಭೇಟಿ ನೀಡಿ ಪ್ರಚಾರ ನಡೆಸಿದರು.
ಕಳೆದ ಹಲವಾರು ದಿನಗಳಿಂದ ಚುನಾವಣೆ ಸಿದ್ದತೆ ಮಾಡಿಕೊಂಡಿರುವ ತಾವು ಈಗಾಗಲೆ ಜಿಲ್ಲೆಯ ಶಿರಾ ,ಪಾವಗಡ ಹೊರತುಪಡಿಸಿ ಎಲ್ಲಡೆ ಒಂದು ಸುತ್ತಿನ ಪ್ರಚಾರ ನಡೆಸಿರುವುದಾಗಿ ತಿಳಿಸಿದರು.ಎಲ್ಲಡೆ ತಮಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಕಾರ್ಯಕರ್ತರ ,ಬೆಂಬಲಿಗರ ಪರಿಪೂರ್ಣ ಪರಿಶ್ರಮದಿಂದಾಗಿ ತಮಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ರೈತಸಂಘ,ರಕ್ಷಣ ವೇದಿಕೆ ಸೇರಿದಂತೆ ಹತ್ತುಹಲವಾರು ಕನ್ನಡಪರ ಸಂಘಟನೆಗಳು ತಮಗೆ ಬೆಂಬಲ ಸೂಚಿಸಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ ಸಂಘಟನೆಗಳ ಮೂಲಕ ಗ್ರಾಮಪಂಚಾಯ್ತಿ ಸದಸ್ಯರಾಗಿರುವವರ ಮತ ಕೊಡಿಸಲಿದ್ದಾರೆ ಎಂದರು.ಡಿ.೭ ರಂದು ತಾವು ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿದ ಅವರು ಜಿಲ್ಲೆಯ ೪೩೦೦ ಗ್ರಾಮಪಂಚಾಯ್ತಿ ಸದಸ್ಯರುಗಳ ಪೈಕಿ ೧೩೦೦ ಗ್ರಾಮಪಂಚಾಯ್ತಿ ಸದಸ್ಯರುಗಳು ಬೇಷರತ್ ಬೆಂಬಲ ಸೂಚಿಸಿದ್ದು ಉಳಿದವರುಗಳನ್ನು ಶೀಘ್ರ ಭೇಟಿಯಾಗಿ ಮತಯಾಚನೆ ಮಾಡಲಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹುಳಿಯಾರು ಗ್ರಾಮಪಂಚಾಯ್ತಿ ಉಪಾಧ್ಯಕ್ಷ ಗಣೇಶ್,ಸದಸ್ಯರುಗಳಾದ ಹೇಮಂತ್,ರಾಘವೇಂದ್ರ,ರಾಜ್ಯರೈತ ಸಂಘದ ಕಾರ್ಯದರ್ಶಿ ಕೆಂಕೆರೆ ಸತೀಶ್,ರೈತಸಂಘದಿಂದ ಗ್ರಾಮಪಂಚಾಯ್ತಿ ಸದಸ್ಯರಾಗಿ ಚುನಾಯಿತರಾಗಿರುವ ಕೆಂಕೆರೆ ನಾಗರಾಜು, ತಿಮ್ಮನಹಳ್ಳಿ ಲೋಕಣ್ಣ,ದಸೂಡಿ ನಾಗರಾಜು,ಪುರದೇಗೌಡ,ಅರಳಿಕೆರೆ ಪ್ರಕಾಶ್ ಸೇರಿದಂತೆ ಇಮ್ರಾಜ್,ಮರುಳಪ್ಪ,ಪಾತ್ರೆ ಸತೀಶ್,ಹೂವಿನ ರಘು,ರಂಗನಕೆರೆ ಮಂಜಣ್ಣ ಮತ್ತಿತರರಿದ್ದರು.
ವಿಪ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ತುಮಕೂರಿನ ಹೆಚ್.ಆರ್.ನಟರಾಜು ಹುಳಿಯಾರಿಗೆ ಭೇಟಿ ನೀಡಿ ಪ್ರಚಾರ ಕೈಗೊಂಡರು.ಗ್ರಾಪಂ ಸದಸ್ಯರುಗಳು,ರೈತಸಂಘದ ಪದಾಧಿಕಾರಿಗಳು ಮತ್ತಿತರರಿದ್ದರು. |
ಈ ಸಂದರ್ಭದಲ್ಲಿ ಹುಳಿಯಾರು ಗ್ರಾಮಪಂಚಾಯ್ತಿ ಉಪಾಧ್ಯಕ್ಷ ಗಣೇಶ್,ಸದಸ್ಯರುಗಳಾದ ಹೇಮಂತ್,ರಾಘವೇಂದ್ರ,ರಾಜ್ಯರೈತ ಸಂಘದ ಕಾರ್ಯದರ್ಶಿ ಕೆಂಕೆರೆ ಸತೀಶ್,ರೈತಸಂಘದಿಂದ ಗ್ರಾಮಪಂಚಾಯ್ತಿ ಸದಸ್ಯರಾಗಿ ಚುನಾಯಿತರಾಗಿರುವ ಕೆಂಕೆರೆ ನಾಗರಾಜು, ತಿಮ್ಮನಹಳ್ಳಿ ಲೋಕಣ್ಣ,ದಸೂಡಿ ನಾಗರಾಜು,ಪುರದೇಗೌಡ,ಅರಳಿಕೆರೆ ಪ್ರಕಾಶ್ ಸೇರಿದಂತೆ ಇಮ್ರಾಜ್,ಮರುಳಪ್ಪ,ಪಾತ್ರೆ ಸತೀಶ್,ಹೂವಿನ ರಘು,ರಂಗನಕೆರೆ ಮಂಜಣ್ಣ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ