ಹುಳಿಯಾರು:ಪಟ್ಟಣದ ವಿದ್ಯಾವಾರಿಧಿಶಾಲೆಯಲ್ಲಿ ಜ್ಞಾನಪೀಠ ಪುರಷ್ಕೃತ, ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವಾದ ಡಿಸೆಂಬರ್ 29 ನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ಆಚರಿಸಲಾಯಿತು.
ಮಕ್ಕಳಿಂದ ಕುವೆಂಪು ಅವರು ಬರೆದ ಗೀತೆಗಳ ಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಯಿತು.ಕುವೆಂಪು ಅವರ ವಿಶ್ವಮಾನವ ಸಂದೇಶದ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು.
ಹುಳಿಯಾರಿನ ವಿದ್ಯಾವಾರಿಧಿಶಾಲೆಯಲ್ಲಿ ಮಂಗಳವಾರದಂದು ವಿಶ್ವಮಾನವ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಕವಿತಾಕಿರಣ್,ಪ್ರಾಂಶುಪಾಲ ರವಿ ಸೇರಿದಂತೆ ಶಿಕ್ಷಕ ವೃಂದದವರು ಹಾಜರಿದ್ದರು. |
ಸಂಸ್ಥೆಯ ಕಾರ್ಯದರ್ಶಿ ಕವಿತಾಕಿರಣ್ ಮಾತನಾಡಿ ಕುವೆಂಪುರವರು ಅಪೂರ್ವ ಲೇಖಕರಾಗಿದ್ದು ಅವರ ಕೃತಿಗಳು ಭಾರತೀಯ ಸಾಹಿತ್ಯದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ. ಕಾವ್ಯ, ನಾಟಕ, ಕಥೆ, ಕಾದಂಬರಿ, ವಿಮರ್ಶೆ ಮುಂತಾದ ಕ್ಷೇತ್ರದಲ್ಲಿ ಕುವೆಂಪುರವರು ಮಾಡಿರುವ ಸಾಧನೆ ಅವಿಸ್ಮರಣೀಯವಾಗ್ಗಿದ್ದು ಅವರಾಗಲೀ, ಅವರ ಸಾಹಿತ್ಯವಾಗಲೀ ಜನಮಾನಸದಿಂದ ಮರೆಯಾಗಿಲ್ಲ. ಪಂಪ- ಕುಮಾರವ್ಯಾಸರಂತೆ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕುವೆಂಪುರವರ ಹೆಸರು ಮತ್ತು ಅವರು ನೀಡಿದ ಕೊಡುಗೆ ಚಿರಸ್ಥಾಯಿಯಾಗಿದೆ ಎಂದರು.
ಪ್ರಾಂಶುಪಾಲ ರವಿ ಸೇರಿದಂತೆ ಶಿಕ್ಷಕ ವೃಂದದವರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ