ಹುಳಿಯಾರು ಹೋಬಳಿಯ ಬೆಳವಾಡಿಯ ಸಿ.ಬಿ.ಎಸ್ ಮಾರುತಿ ಯುವಕರ ಸಂಘದವರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳೊಂದಿಗೆ ಹೊಸ ವರ್ಷಾಚರಣೆ ನಡೆಸಿದರು.
ಶಿಕ್ಷಕ ಗಿರೀಶ್ ಮಾತನಾಡಿ ಮಾರುತಿ ಯುವಕ ಸಂಘ ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಂಡಿರುವ ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿಯ ಸಾಧನೆಗಳನ್ನು ಶ್ಲಾಘಿಸಿದರು.ಶಾಲಾ ಮಕ್ಕಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿ ಸಿಹಿ ಹಂಚಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಬಿ.ಎಸ್ ಮಾರುತಿ ಯುವಕರ ಸಂಘ ಅಧ್ಯಕ್ಷರಾದ ಕುಮಾರ್ ಸ್ವಾಮಿಯವರು ವಹಿಸಿಕೊಂಡಿದ್ದರು.
ಸಂಘದ ಖಜಾಂಚಿ ರಾಜಣ್ಣ , ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ನಾಗರಾಜು, ಶಾಲಾ ಮುಖ್ಯ ಶಿಕ್ಷಕ ನರಸಿಂಹರಾಜ್ ಅರಸ್, S.D.M.C ಅಧ್ಯಕ್ಷ ಬಸವರಾಜು, ರಮೇಶ್ ಮತ್ತಿತರರು ಹಾಜರಿದ್ದರು.
thunba channagide sir adre bere photo akkabekkitu sir
ಪ್ರತ್ಯುತ್ತರಅಳಿಸಿ