ಹುಳಿಯಾರು : ವಿವೇಕಾನಂದರು ಸಾರಿದ ಸಂದೇಶಗಳು ಇಡೀ ವಿಶ್ವಕ್ಕೆ ಬೆಳಕಾಗಿದ್ದು ಅವರ ಆದರ್ಶಗಳು ಸರ್ವಕಾಲಕ್ಕೂ ಅನ್ವಯವಾಗಲಿವೆ, ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು ಅಬ್ದುಲ್ ಕಲಾಂ, ಸಿದ್ಧಗಂಗಾ ಶ್ರೀಗಳು ಸೇರಿದಂತೆ ನೂರಾರು ಸಾಧಕರ ಸಾಧನೆಗೆ ಸ್ಪೂರ್ತಿ ನೀಡಿವೆ. ಸ್ವಾಮಿ ವಿವೇಕಾನಂದ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ, ಇಂತಹ ಅಭೂತ ಪೂರ್ವ ವ್ಯಕ್ತಿತ್ವ ಹೊಂದಿದ್ದ ಮಹಾನ್ ವ್ಯಕ್ತಿಯ ಜೀವನಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರೆಂದು ಕುಪ್ಪೂರು ಮಠದ ಡಾ:ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಹುಳಿಯಾರಿನ ಕನಕದಾಸ ವಿದ್ಯಾಸಂಸ್ಥೆಯ ಆವರಣದಲ್ಲಿ ಎಬಿವಿಪಿ ಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಡಾ: ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. |
ಹುಳಿಯಾರಿನ ಕನಕದಾಸ ವಿದ್ಯಾಸಂಸ್ಥೆಯ ಆವರಣದಲ್ಲಿ ಎಬಿವಿಪಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಆಧುನಿಕತೆಯ ಹೆಸರಿನಲ್ಲಿ ಯುವ ಜನಾಂಗ ದುಶ್ಚಟಗಳಿಗೆ ಮಾರುಹೋಗುತ್ತಿದ್ದು ಮಾನವೀಯ ಮೌಲ್ಯಗಳ ಅಧಃಪತನವಾಗುತ್ತಿದೆ. ಯುವ ಸಮೂಹಕ್ಕೆ ಮುಂದಿನ ದಿನಗಳಲ್ಲಿ ದೇಶ ಕಟ್ಟುವ ಹೊಣೆಗಾರಿಕೆಯಿದ್ದು ಇದನ್ನರಿತು ಸತ್ಪ್ರಜೆಯಾಗಿ ಹೊರಹೊಮ್ಮಬೇಕಿದೆ ಎಂದರು.
ವಿದ್ಯಾರ್ಥಿಗಳು ಜನ ಸಂಪಾದನೆಗೆ ಹೆಚ್ಚು ಒತ್ತು ಕೊಟ್ಟು ಸತ್ಯನಿಷ್ಠೆ, ಪಾವಿತ್ರ್ಯತೆ, ನಿಸ್ವಾರ್ಥತೆ ಜೀವನದಲ್ಲಿ ಅಳವಡಿಸಿಕೊಳ್ಳಿ. ಜೀವನದ ಮೌಲ್ಯ ಅರಿತು ದೇಶದ ವಿಚಾರದಲ್ಲಿ ಭಾವನಾತ್ಮಕ ಸಂಬಂಧ ಇಟ್ಟುಕೊಳ್ಳಿ ಎಂದು ತಿಳಿಸಿದರು.
ಕನಕದಾಸ ಶಾಲೆಯ ಶಿಕ್ಷಕ ಚನ್ನಬಸವಯ್ಯ, ಪಂಚನಹಳ್ಳಿ ಕಾಲೇಜ್‌ನ ಉಪನ್ಯಾಸಕ ಹೆಚ್.ಎಸ್ .ನರೇಂದ್ರಬಾಬು ಮಾತನಾಡಿದರು. ಹುಳಿಯಾರಿನ ಸರಕಾರಿ ಪದವಿ ಪೂರ್ವ ಕಾಲೇಜು, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಯೋಗಿನಾರಾಯಣ ಐ.ಟಿ.ಐ. ಕಾಲೇಜು, ಕನಕದಾಸ ಪದವಿ ಪೂರ್ವ ಕಾಲೇಜು, ಬಿಎಂಎಸ್ ಪ್ರಥಮ ದರ್ಜೆ ಕಾಲೇಜು, ಎಣ್ಣೆಗೆರೆ ಸರಕಾರಿ ಪದವಿ ಪೂರ್ವ ಕಾಲೇಜು, ಬೋರನಕಣಿವೆ ಸರಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಎಬಿವಿಪಿಯ ಅಧ್ಯಕ್ಷ ಹೊನ್ನಪ್ಪ,ತಾಲ್ಲೂಕ್ ಸಂಚಾಲಕ ರಾಕೇಶ್, ಕಿರಣ್ ಕುಮಾರ್, ಗಿರೀಶ್, ಪವನ್, ಹರೀಶ್, ಸುಬ್ರಹ್ಮಣ್ಯ, ಚಿದಾನಂದ್, ಅಭಿಲಾಶ್, ರವೀಶ್, ಚೇತನ್, ಸಿದ್ದರಾಜು, ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ