ಹುಳಿಯಾರು:ವಿದ್ಯಾರ್ಥಿಗಳು ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಿಸಿಕೊಳ್ಳಬೇಕು .ಕ್ರೀಡೆ ದೇಹ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವುದರಿಂದ ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸಿ ಅಭ್ಯಾಸ ಮಾಡಬೇಕು.ಚಿಕ್ಕವಯಸ್ಸಿನಲ್ಲೇ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಒಳಿತು ಎಂದು ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್ ಕಿವಿ ಮಾತು ಹೇಳಿದರು.
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಶನಲ್ ಸ್ಕೂಲ್‌ನಲ್ಲಿ ಕ್ರೀಡಾ ದಿನ-೨೦೧೬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕ್ರೀಡೆ ಆರೋಗ್ಯ ವೃದ್ಧಿಗೆ ಮಹತ್ವದ ಪಾತ್ರವಹಿಸುತ್ತದೆ. ದೈಹಿಕ ಹಾಗೂ ಮಾನಸಿಕ ಖಾಯಿಲೆಗೆ ಕ್ರೀಡೆ ಹಾಗೂ ಧ್ಯಾನ ರಾಮಬಾಣವಾಗಿದ್ದು ಬೆಳಿಗ್ಗೆ ಒಂದು ಗಂಟೆ ಆಟವಾಡಿದರೆ ಇಡೀ ದಿನ ಉತ್ಸಾಹದಿಂದ ಇರಬಹುದು. ಕ್ರೀಡಾ ಚಟುವಟಿಕೆಗಳನ್ನು ಮೈಗೂಡಿಸಿಕೊಂಡರೆ ವೈದ್ಯರಿಂದ ದೂರ ಉಳಿಯಬಹುದೆಂದು ಸಮೀಪಕ್ಷೆಗಳು ಹೇಳುತ್ತಿವೆ. ಹಾಗಾಗಿ ನಮ್ಮ ಆರೋಗ್ಯದ ದೃಷ್ಠಿಯಿಂದಾದರೂ ಕ್ರೀಡೆಯಲ್ಲಿ ತೊಡಗಬೇಕಿದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ಬಾಲ್ಯದ ಆಟಕ್ಕೆ ಕಡಿವಾಣ ಹಾಕದೆ, ಆಟ ಕೆಟ್ಟದೆಂಬ ಸಂದೇಶ ಕೊಡದೆ ಪ್ರೋತ್ಸಾಹ ನೀಡಬೇಕಿದೆ ಎಂದರು.
ಹಾಕಿ ಮಾಂತ್ರಿಕ ಧ್ಯಾನಚಂದ್ ಅಪ್ರತಿಮ ಹಾಕಿ ಪಟುವಾಗಿದ್ದು ತಮ್ಮ ಆಟದ ಮೂಲಕವೇ ಭಾರತದ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದ ಧೀಮಂತ ವ್ಯಕ್ತಿಯಾಗಿದ್ದರು. ಇಂತಹ ವ್ಯಕ್ತಿಗಳಿಗೆ ಭಾರತ ರತ್ನ ನೀಡಿದ್ದರೆ ಹಾಕಿ ಕ್ರೀಡೆಗೂ ಮಹತ್ವ ನೀಡಿದಂತಾಗುತ್ತಿತ್ತು ಸರ್ಕಾರ ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತಿಸಬೇಕಿದೆ ಎಂದು ತಿಳಿಸಿದರು.
ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‌ನ ಕಾರ್ಯದರ್ಶಿ ಕವಿತಾಕಿರಣ್, ಪ್ರಾಚಾರ್ಯ ರವಿ, ಎಎಸ್‌ಐ ರಾಜಣ್ಣ, ಎಎಸ್‌ಐಶಿವಪ್ಪ ಮತ್ತಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ