ಹುಳಿಯಾರುಪಟ್ಟಣದ ೮ ನೇ ವಾರ್ಡಿನ ಗಜಾನನ ದೇವಸ್ಥಾನದ ಬಳಿ ಹೊಸದಾಗಿ ಬೊರೆವೆಲ್ ಕೊರೆಯಿಸಿ ಪೈಪ್‌ಲೈನ್ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಮಿನಿ ಟ್ಯಾಂಕಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಚಾಲನೆ ನೀಡಿದರು.
ತೀರಾ ಹಿಂದುಳಿದಿರುವ ಆ ವಾರ್ಡಿನಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಬರಪರಿಹಾರ ಅನುದಾನದಲ್ಲಿ ತುರ್ತಾಗಿ ಹೊಸ ಬೋರ್ ವೆಲ್ ಕೊರೆಯಿಸಿ ಮೋಟರ್ ಅಳವಡಿಸಲು ಸೂಚಿಸಿದ್ದರ ಮೇರೆಗೆ ಕಾಮಗಾರಿ ಕೈಗೊಳ್ಳಲಾಗಿತ್ತು.ಆ ವಾರ್ಡಿನ ಸದಸ್ಯರೊಡನೆ ಸಂಚರಿಸಿ
ಸದರಿ ವಾರ್ಡಿನಲ್ಲಿ ಅತಿ ಅವಶ್ಯವಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಶಾಸಕರು ಗಜಾನನ ಯುವಕ ಸಂಘದವರ ಮನವಿ ಮೇರೆಗೆ ದೇವಾಲಯದ ಕಾಮಗಾರಿಗೆ ನೆರವು ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ೮ ನೇ ಬ್ಲಾಕಿನ ಗ್ರಾಪಂಸದಸ್ಯರುಗಳಾದ ಎಸ್.ಪುಟ್ಟರಾಜು,ಕೆಂಪಮ್ಮ, ಮಾಮಾ ಜಿಗ್ಮಿ ಹಾಗೂ ಜಯಮ್ಮ ಮಂಜುನಾಥ್ ,ಗ್ರಾಪಂ ಅಧ್ಯಕ್ಷೆ ಗೀತಾ,ಜಿಪಂ ಸದಸ್ಯೆ ಮಂಜುಳಾ,ತಾಪಂ ಸದಸ್ಯೆ ಬೀಬಿ ಫಾತಿಮಾ,ಉಪಾಧ್ಯಕ್ಷ ಗಣೇಶ್, ವಾರ್ಡಿನ ಹಿರಿಯರು ಹಾಗೂ ಮುತುವಲ್ಲಿಗಳಾದ ಬೈಜುಸಾಬ್, ಜಬೀಸಾಬ್,ಸದಸ್ಯರುಗಳಾದ ಪುಟ್ಟಮ್ಮ,ಸಿದ್ದಗಂಗಮ್ಮ ಮುಂತಾದವರು ಉಪಸ್ಥಿತರಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ