ಹುಳಿಯಾರು:ಸಮೀಪದ ಕೆಂಕೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕ್ ಪ್ರೌಢಶಾಲಾ ಕನ್ನಡ ಭಾಷಾ ಭೋದಕರ ಪುನಶ್ಚೇತನ ಕಾರ್ಯಗಾರ ಹಾಗೂ ಸ್ವಾಮಿ ವಿವೇಕನಂದರ ೧೫೩ ನೇ ಜಯಂತಿ ಯಶಸ್ವಿಯಾಗಿ ಜರುಗಿತು.ಕಾರ್ಯಾಗಾರವನ್ನು ಉದ್ಘಾಟಿಸಿದ ಕನ್ನಡ ವಿಶ್ವ ಪರಿವೀಕ್ಷಣಾ ಉಪನಿರ್ದೇಶಕ ರಾಜು ಮಾತನಾಡಿ ಶಿಕ್ಷಕರು ಕರ್ತವ್ಯ ಮರೆತರೆ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತದೆ.
ಇಂದು ಶಿಕ್ಷಕರುಗಳು ಕೇವಲ ಪಠ್ಯಕ್ಕೆ ಸೀಮಿತರಾಗದೆ ಶಿಕ್ಷಕ ಕಾರ್ಯದಲ್ಲಿ ಸಮಾಜಮುಖಿ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು. ಭವಿಷ್ಯದ ಪ್ರಜೆಗಳನ್ನು ರೂಪುಗೊಳಿಸುತ್ತಿರುವ ಅರಿವು ನಮ್ಮಲ್ಲಿರಬೇಕು ಎಂದರು. ನೀವುಗಳು ಕರ್ತವ್ಯ ನಿರ್ವಹಿಸಿದ ಶಾಲೆಯಲ್ಲಿ ನಿಮ್ಮಗಳ ಹೆಸರು ಅಚ್ಚಳಯದೆ ಉಳಿಯುವಂತೆ ಹೆಸರುಬರುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿ ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಸರ್ಕಾರಿ ಪ್ರೌಡಶಾಲೆಯ ಕನ್ನಡ ಶಿಕ್ಷಕರಾದ ಮಂಜಯ್ಯಗೌಡ್ರು ಮಾತನಾಡಿ ಕನ್ನಡ ಕಲಿಯುವುದು ಎಂದರೆ ಸ್ಪಷ್ಟ ಓದು ಮತ್ತು ಬರಹ ಗುರಿಯಾಗಿರಬೇಕು.ಶಿಕ್ಷಕರು ಶಾಲಾ ಅಭಿವೃದ್ಧಿ ಬಗ್ಗೆ, ಶೈಕ್ಷಣಿಕ ಅಂಶಗಳ ಬಗ್ಗೆ ಹೆಚ್ಚಿನ ಆದ್ಯತೆ ಕೊಡಬೇಕು. ಜಿಲ್ಲೆಯಲ್ಲಿ ಕನ್ನಡ ಭಾಷೆಯಲ್ಲಿ ತುರುವೇಕೆರೆ ಪ್ರಥಮ ಸ್ಥಾನವಿದ್ದು ಚಿಕ್ಕನಾಯಕನಹಳ್ಳಿ ೩ನೇ ಸ್ಥಾನದಲ್ಲಿದೆ. ಪ್ರಥಮ ಸ್ಥಾನಕ್ಕೆ ಬರುವಂತೆ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಬೇಕಾಗಿದೆ ಎಂದರು.
ಬೆಳಿಗ್ಗೆ ೧೦ನೇ ತರಗತಿಯ ವ್ಯಾಕರಣಾಂಶಗಳ ಬಗ್ಗೆ ಹಾಗೂ ಮಧ್ಯಾಹ್ನ ಎಂಟು,ಒಂಬತ್ತನೆ ತರಗತಿಯ ನೀಲನಕ್ಷೆ ಪ್ರಶ್ನೆಪತ್ರಿಕೆ ತಯಾರಿಸುವ ಬಗ್ಗೆ ಕಾರ್ಯಾಗಾರ ನಡೆಯಿತು.
ಪ್ರಭಾರ ಮುಖ್ಯ ಶಿಕ್ಷಕಿ ಶಾಹಿನ ಸುಲ್ತಾನ್ ಅಧ್ಯಕ್ಷತೆ ವಹಿಸಿದ್ದರು.ತಾಲ್ಲೂಕ್ ಪ್ರೌಢಶಾಲಾ ಕನ್ನಡ ಭಾಷಾ ಭೋದಕರ ಸಂಘದ ಅಧ್ಯಕ್ಷರಾದ ಕೆ.ವೀರಣ್ಣನವರು , ಕನ್ನಡ ಶಿಕ್ಷಕ ಎಂ.ಶಿವಣ್ಣ, ಕವಿತಾ, ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ